ಜಗತ್ತಿನ ಶ್ರೀಮಂತ ವ್ಯಕ್ತಿಗಳ ಕಾರು ಪ್ರೇಮ
ವಿಶ್ವದ ಶ್ರೀಮಂತ ವ್ಯಕ್ತಿಗಳು ತಮ್ಮದೇ ಆದ ಜೀವನ ಶೈಲಿಯನ್ನು ಹೊಂದಿರುತ್ತಾರೆ. ಕೆಲವರು ಐಷಾರಾಮಿ ಜೀವನ ಇಷ್ಟಪಡುವುದಾದರೆ ಇನ್ನು ಕೆಲವರು ಸರಳ ಜೀವನ ಸಾಗಿಸುತ್ತಾರೆ.
ಹಾಗಿರುವಾಗ ಜಗತ್ತಿನ ಶ್ರೀಮಂತ ವ್ಯಕ್ತಿಗಳ ಇಷ್ಟ ಕಾರುಗಳು ಹಾಗೂ ಅವರು ಹೊಂದಿರುವ ಐಷಾರಾಮಿ ಕಾರುಗಳ ಬಗ್ಗೆ ಪಟ್ಟಿ ಮಾಡಿ ಕೊಡಲಾಗಿದೆ.

ಅನಿಲ್ ಅಂಬಾನಿ ಕಾರು ಪ್ರೇಮ
ದೇಶದ ಪ್ರಮುಖ ಉದ್ಯಮಿ ಅನಿಲ್ ಅಂಬಾನಿ ಅವರು ಲಗ್ಷುರಿ ಕಾರು ಹೊರತಾಗಿ ಸ್ಫೋರ್ಟ್ಸ್ ಕಾರು ಬಗ್ಗೆಯೂ ಬಹಳ ಆಸಕ್ತಿ ಹೊಂದಿದ್ದಾರೆ. ಬಹುಶ: ಇದೇ ಕಾರಣದಿಂದಾಗಿ ಲಂಬೊರ್ಗಿನಿ ಗಾಲರ್ಡೊ ಸ್ಫೋರ್ಟ್ಸ್ ಕಾರನ್ನು ಅತಿ ಹೆಚ್ಚು ಇಷ್ಟಪಡುತ್ತಾರೆ. ಅನಿಲ್ ಹೊಂದಿರುವ ಈ ಕಾರು ವಿ10 ಎಂಜಿನ್ ಹೊಂದಿದ್ದು, 500 ಎಚ್ ಹಾಗೂ 376 ಎಲ್‌ಬಿಎಸ್-ಫಿಟ್ ಟರ್ಕ್ಯೂ ಹೊಂದಿದೆ. ಅಲ್ಲದೆ ಗರಿಷ್ಠ ವೇಗ ಪ್ರತಿ ಗಂಟೆಗೆ 325 ಕಿಲೋ ಮೀಟರ್ ಲಭಿಸಲಿದೆ.

ಫೋರ್ಶೆ 959ರಲ್ಲಿ ಬಿಲ್ ಗೇಟ್ಸ್ ಸವಾರಿ
ಮೈಕ್ರೋಸಾಫ್ಟ್ ಸಂಸ್ಥಾಪಕ ಹಾಗೂ ತಂತ್ರಜ್ಞಾನ ಜಗತ್ತಿನ ದಿಗ್ಗಜ ಬಿಲ್ ಗೇಟ್ಸ್ ಆರಂಭದಿಂದಲೇ ಫೋರ್ಶೆ ಕಾರಿನ ದೊಡ್ಡ ಅಭಿಮಾನಿ ಆಗಿದ್ದಾರೆ. ಹೌದು, ತಮ್ಮ ಆರಂಭದ ದಿನಗಳಿಂದಲೇ ಅವರು ಫೋರ್ಶೆ ಕಾರುಗಳಲ್ಲಿ ಪಯಣಿಸುತ್ತಿದ್ದರು. ಇವತ್ತಿಗೂ ಗೇಟ್ಸ್ ಅವರು ಫೋರ್ಶೆಯ ಸ್ಫೋರ್ಟ್ಸ್ ಕಾರು ಆದ 959 ಚಲಾಯಿಸುತ್ತಾರೆ. ಈ ಕಾರಿನ ಬೆಲೆ 2.2 ಕೋಟಿ ರೂಪಾಯಿಗಳಾಗಿವೆ.

ಟೆಲಿಕಾಮ್ ದೈತ್ಯ ಕಾರ್ಲೊಸ್ ಸವಾರಿ
ಮೆಕ್ಸಿಕೊ ಟೆಲಿಕಾಮ್ ದೈತ್ಯ ಕಾರ್ಲೊಸ್ ಸ್ಲಿಮ್ ಹೆಲು ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಬಳಿ ಕೂಡಾಹಲವು ಆಕರ್ಷಕ ಕಾರುಗಳಿದ್ದು, ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಕಾರು ಹೊಂದಿದ್ದಾರೆ. ಇದರ ಬೆಲೆ 1,70,00,000 ಭಾರತೀಯ ರೂಪಾಯಿಗಳಾಗಿದೆ.

ಗೂಗಲ್‌ನ ಎರಿಕ್ ಪ್ರಿಯ ಕಾರು
ಗೂಗಲ್‌ನ ಪ್ರಸ್ತುತ ಕಾರ್ಯನಿರ್ವಾಹಕ ಮುಖ್ಯಸ್ಥರಾಗಿರುವ ಎರಿಕ್ ಎಮೆರ್‌ಸನ್ ಸ್ಮಿತ್ ಪರಿಸರವನ್ನು ಇಷ್ಟಪಡುತ್ತಿದ್ದು, ಟೊಯೊಟಾ ಪ್ರಿಯಸ್ ಕಾರಿನಲ್ಲಿ ಸಂಚರಿಸುತ್ತಾರೆ. ಇದು ಜಗತ್ತಿನ ಅತ್ಯಂತ ಸುಂದರ ಕಾರುಗಳಲ್ಲಿ ಒಂದಾಗಿದೆ.

ಆಡಿ5 ಪ್ರೇಮಿ ಲೌರನ್
ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ವಿಧವೆ ಪತ್ನಿ ಲೌರನ್ ಪವೆಲ್ ಜಾವ್ಸ್ ಸಿಲ್ವರ್ ಆಡಿ ಎ5 ಕಾರನ್ನು ಹೊಂದಿದ್ದಾರೆ.

ಸರಳ ವ್ಯಕ್ತಿ ಜುಕರ್ಬರ್ಗ್
ಇತರ ಶ್ರೀಮಂತ ವ್ಯಕ್ತಿಗಳನ್ನು ಹೋಲಿಸಿದರೆ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ತುಂಬಾನೇ ಸರಳ ವ್ಯಕ್ತಿಯಾಗಿದ್ದಾರೆ. ಸಾಮಾನ್ಯವಾಗಿ ಶ್ರೀಮಂತ ವ್ಯಕ್ತಿಗಳು ಐಷಾರಾಮಿ ಕಾರುಗಳಲ್ಲಿ ಸಂಚರಿಸಲು ಇಷ್ಟಪಡುತ್ತಾರೆ. ಆದರೆ ಇದಕ್ಕೆ ತೀರಾ ವ್ಯತಿರಿಕ್ತವಾಗಿರುವ ಜುಕರ್ಬರ್ಗ್ ಅತಿ ಅಗ್ಗದ ಅಕ್ಯುರಾ ಟಿಎಸ್‌ಓಎಕ್ಸ್ ಕಾರನ್ನು ಚಲಾಯಿಸುತ್ತಾರೆ. ಇದರ ಬೆಲೆ 17 ಲಕ್ಷ ರೂಪಾಯಿಗಳಾಗಿದೆ.

ಮರ್ಸಿಡಿಸ್ ಪ್ರೇಮಿ ಮುಖೇಶ್ ಅಂಬಾನಿ
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಫೋರ್ಬ್ಸ್ ಪಟ್ಟಿ ಮಾಡಿರುವ ಭಾರತೀಯರ ಪೈಕಿ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮುಖೇಶ್ ಅವರು ಅತಿ ದುಬಾರಿ ಮೆಬ್ಯಾಕ್ 62 ಕಾರು ಸೇರಿದಂತೆ ಮರ್ಸಿಡಿಸ್ ಎಸ್ ಕ್ಲಾಸ್, ಮರ್ಸಿಡಿಸ್ ಎಸ್‌ಎಲ್ 500 ಕಾರನ್ನು ಹೊಂದಿದ್ದಾರೆ. ಮೆಬ್ಯಾಕ್ ಕಾರಿನ ದರ 5 ಕೋಟಿ ರೂಪಾಯಿಗಳಾಗಿದೆ.

ಸೌದಿ ಪ್ರಿನ್ಸ್‌ನ ಕಾರು ಸವಾರಿ
ಸೌದಿ ಅರಬ್ ರಾಷ್ಟ್ರದ ಪ್ರಿನ್ಸ್ ಅಲ್ವಲೀದ್ ಬಿನ್ ತಲಾಲ್ ಅಲ್‌ಸೌದ್ ಅವರು ವಿಶ್ವದಲ್ಲಿ ತಮ್ಮ ಸ್ಟೈಲಿಷ್ ಜೀವನಶೈಲಿಗೆಹೆಸರುವಾಸಿಯಾಗಿದ್ದಾರೆ. ಅಲ್ಲದೆ ಪ್ರಮುಖವಾಗಿಯೂ ರಾಯಲ್ ಕಾರನ್ನು ಇಷ್ಟಪಡುತ್ತಾರೆ. ಅಲ್ವಲೀದ್ 3.5 ಕೋಟಿ ಬೆಲೆ ಬಾಳುವ ರೋಲ್ಸ್-ರಾಯ್ಸ್ ಫಾಂಟಮ್ ಕಾರನ್ನು ಹೊಂದಿದ್ದಾರೆ.

ರತನ್ ಟಾಟಾ ಸವಾರಿ
ಟಾಟಾ ಮೋಟಾರ್ಸ್ ಮಾಲಿಕ ರತನ್ ಟಾಟಾ ಅತಿ ಅಗ್ಗದ ನ್ಯಾನೋದಲ್ಲಿ ಸಂಚರಿಸುತ್ತಿದ್ದಾರೆ ಎಂದು ನೀವು ಅಂದುಕೊಂಡರೆ ತಪ್ಪಾದಿತು. ಯಾಕೆಂದರೆ ಅವರಿಗೆ ಜರ್ಮನಿಯ ಕಾರು ತಯಾರಕ ಕಂಪನಿ ಮರ್ಸಿಡಿಸ್‌ನ ಎಸ್ ಕ್ಲಾಸ್ ಕಾರಿನಲ್ಲಿ ಆಸಕ್ತಿ ಹೆಚ್ಚು. ರತನ್ ಟಾಟಾ ಬಳಇ ಫೆರಾರಿ ಕಾಲಿಫೋರ್ನಿಯಾ, ಮಸೆರಾಟಿ ಕ್ವಾಟ್ರೊಪೋರ್ಟೆ, ಕ್ಯಾಡಿಲಿಕ್ ಎಕ್ಸ್‌ಎಲ್‌ಆರ್ ಹಾಗೂ ಕ್ರೈಸ್ಲೆರ್ ಸೆರ್ಬಿಂಗ್ ಕಾರುಗಳಿವೆ.

ಮಲ್ಯ ಐಷಾರಾಮಿ ಕಾರು
ಇತ್ತೀಚೆಗಷ್ಟೇ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಿಂದ ಮದ್ಯದೊರೆ ವಿಜಯ್ ಮಲ್ಯ ಅವರನ್ನು ಕೈಬಿಟ್ಟಿದ್ದರೂ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರುವ ವಿಜಯ್ ಮಲ್ಯ ತಮ್ಮ ವಿಶೇಷ ಜೀವನಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಮೆಬ್ಯಾಕ್ 62 ಕಾರನ್ನು ಚಲಾಯಿಸಲು ಹೆಚ್ಚು ಇಷ್ಟಪಡುತ್ತಾರೆ.


Click it and Unblock the Notifications








