ಗರಿಷ್ಟ ಬೆಲೆಗೆ ನಿಮ್ಮ ಹಳೆಯ ಕಾರನ್ನು ಮಾರಬೇಕೆ: ಇಲ್ಲಿದೆ 5 ಮಾರ್ಗಗಳು, ಯಾರಿಗೂ ಹೇಳಬೇಡಿ!

ತುಂಬಾ ಪ್ರೀತಿಯಿಂದ ಖರೀದಿಸಿ ಬಳಸಿದ ಕಾರನ್ನು ಬಹುತೇಕರು ಒಂದಲ್ಲಾ ಒಂದು ದಿನ ಇತರರಿಗೆ ಸೆಕೆಂಡ್‌ ಹ್ಯಾಂಡ್ ರೂಪದಲ್ಲಿ ಮಾರಿ ಹೊಸ ಕಾರನ್ನು ಖರೀದಿಸುತ್ತಾರೆ. ಆದರೆ ತಮ್ಮ ಹಳೆಯ ಕಾರನ್ನು ಒಂದು ಒಳ್ಳೆಯ ಬೆಲೆಗೆ ಮಾರಲು ಬಹುತೇಕರು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಈ ಬಗೆಯ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಇಂತಹವರಿಗಾಗಿ ನಾವು ಈ ಲೇಖನವನ್ನು ಅರ್ಪಿಸುತ್ತಿದ್ದೇವೆ. ಇಂದಿನ ಈ ಲೇಖನದಲ್ಲಿ ನಾವು ನಿಮಗೆ ನಿಮ್ಮ ಹಳೆಯ ಕಾರನ್ನು(Second Hand Car) ಮಾರಾಟ ಮಾಡಲು ಯಾವುದೆಲ್ಲಾ ದಾರಿಗಳಿದೆ ಎಂದು ಹೇಳಲಿದ್ದು, ನಿಮಗೆ ಈ ಲೇಖನ ಉಪಯೋಗವಾಗಬಹುದು. ಈ ಕುರಿತಾಗಿನ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೆ ಓದಿ.

Top 5 Best Ways To Sell Your Second Hand Car Complete Details

ಖಾಸಗಿ ಮಾರಾಟ: ಖಾಸಗಿ ಮಾರಾಟವೆಂದರೆ ನಿಮಗೆ ಗೊತ್ತಿರುವವರ ಪೈಕಿ, ಸೆಕೆಂಡ್‌ ಹ್ಯಾಂಡ್‌ ಕಾರು ಕೊಳ್ಳಬೇಕು ಎಂದುಕೊಂಡಿರುವವರಿಗೆ ನಿಮ್ಮ ಕಾರನ್ನು ಮಾರುವುದು. ಒಟ್ಟಾರೆಯಾಗಿ ಹೇಳುವುದಾದರೆ, ಇತರ ಯಾರ ಸಹಾಯವೂ ಇಲ್ಲದೆ ನಿಮ್ಮ ಕಾರನ್ನು ನೀವೇ ಮಾರುವುದು ಎಂದರ್ಥ. ಇಲ್ಲಿ ನಿಮ್ಮ ಕಾರಿಗೆ ನಿಮಗಿಷ್ಟ ಬಂದಷ್ಟು ಬೆಲೆ ನಿಗದಿ ಪಡಿಸಲಬಹುದಾಗಿದ್ದು, ಲಾಭವೂ ಹೆಚ್ಚು ಗಳಿಸಬಹುದು.

ಡೀಲರ್‌ಶಿಪ್‌ನಲ್ಲಿ ಎಕ್ಸ್‌ಚೇಂಜ್‌ ಮಾಡಿಕೊಳ್ಳುವುದು: ನೀವು ಪ್ರತಿಯೊಂದು ಡೀಲರ್‌ಶಿಪ್‌ನಲ್ಲೂ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಎಕ್ಸ್‌ಚೇಂಜ್‌ ಆಫರ್‌ ಎಂಧರೆ ನೀವು ನಿಮ್ಮ ಹಳೇಯ ಕಾರನ್ನು ಕೊಟ್ಟು ಹೊಸ ಕಾರನ್ನು ಪಡೆದುಕೊಳ್ಳಬಹುದು. ಹೀಗೆ ಖರೀದಿ ಮಾಡುವಾಗ ನಿಮ್ಮ ಹಳೆ ಕಾರಿನ ಮೌಲ್ಯವನ್ನು ಕಳೆದು, ಹೊಸ ಕಾರಿಗೆ ಹೆಚ್ಚುವರಿಯಾಗಿ ಕೊಡಬೇಕಾಗಿರುವ ಹಣವನ್ನು ನೀವು ಡೀಲರ್‌ಶಿಸೆಕೆಂಪ್‌ಗೆ ಪಾವತಿಸಬೇಕಾಗುತ್ತದೆ.

Top 5 Best Ways To Sell Your Second Hand Car Complete Details

ಸೆಕೆಂಡ್‌ಹ್ಯಾಂಡ್‌ ಕಾರು ಡೀಲರ್‌ಗೆ ಮಾರುವುದು: ಇದೊಂದು ರೀತಿಯ ಬಹು ಸುಲಭವಾದ ವಿಧಾನ ಎಂದೇ ಹೇಳಬಹುದು. ಕಾರಣ, ನೀವು ಸೆಕೆಂಡ್‌ ಹ್ಯಾಂಡ್ ಕಾರು ಮಾರಾಟ ಮಾಡುವವರಿಗೆ ನಿಮ್ಮ ಕಾರನ್ನು ಮಾರಾಟ ಮಾಡಿದರೆ ಅವರು ಒಂದು ಬೆಲೆಯನ್ನು ನಿಗದಿ ಪಡಿಸಿ ನಿಮ್ಮ ಕಾರನ್ನು ಖರಿದಿ ಮಾಡುತ್ತಾರೆ. ಇದರಿಂದಾಗುವ ಪ್ರಮುಖ ಉಪಯೋಗವೆಂದರೆ, ನೀವು ಕಾರು ಮಾರಾಟ ಮಾಡಲು ಹೆಚ್ಚು ಕಾಯಬೇಕಾಗಿಲ್ಲ. ತತ್‌ಕ್ಷಣ ಹಣ ನಿಮ್ಮ ಜೇಬಲ್ಲಿರುತ್ತದೆ.

ಆನ್‌ಲೈನ್ ಕಾರು ಮಾರಾಟ ಏಜೆನ್ಸಿಗಳು: ಇದು ಆಧುನಿಕ ಕಾರು ಮಾರಾಟದ ಮಾರ್ಗ ಎಂದರೆ ತಪ್ಪಾಗಲಾರದು. ಹೌದು, ನಿಮಗೆ ತಿಳಿದಿರುವಂತೆ, ಆನ್‌ಲೈನ್‌ನಲ್ಲಿ ಕಾರ್‌ ದೇಖೋ, ಕಾರ್ಸ್‌ ೨೪, ಸ್ಪಿನ್ನೀ ಮತ್ತು ಓಎಲ್‌ಕ್ಸ್‌ ರೀತಿಯ ಜಾಲತಾಣಗಳಲ್ಲಿ ನೀವು ನಿಮ್ಮ ಕಾರನ್ನು ಮಾರಾಟ ಮಾಡಬಹುದಾಗಿದೆ. ಅವರೇ ಖುದ್ದಾಗಿ ನಿಮ್ಮ ಸ್ಥಳಕ್ಕ್ಎ ಆಗಮಿಸಿ ಕಾರನ್ನು ಪರಿಶೀಲನೆ ಮಾಡಿ ಖರೀದಿ ಮಾಡುತ್ತಾರೆ.

Top 5 Best Ways To Sell Your Second Hand Car Complete Details

ಕಾರ್‌ ಸ್ಕ್ರಾಪಿಂಗ್‌: ನಿಮ್ಮ ಕಾರು ಸಕಷ್ಟು ಹಳೆಯದಾಗಿದ್ದು, ಉಪಯೋಗ ಶೂನ್ಯವಾಗಿದ್ದರೆ ನಿಮ್ಮ ಮುಂದೆ ಇರುವ ಏಕೈಕ ಮಾರ್ಗ ಈ ಕಾರ್‌ ಸ್ಕ್ರಾಪಿಂಗ್‌, ಅಥವಾ ಇದನ್ನು ಆಡು ಭಾಷೆಯಲ್ಲಿ ಗುಜುರಿಗೆ ಕೊಡುವುದು ಎಂದೂ ಹೇಳಬಹುದೇನೋ. ಇದರಲ್ಲಿರುವ ಪ್ರಮುಖ ಉಪಯೋಗವೆಂದರೆ ಇದನ್ನು ಸರಳವಾಗಿ, ವೇಗವಾಗಿ ಮಾಡಬಹುದಾದ ಪ್ರಕ್ರಿಯೆಯಾಗಿದೆ. ಇದರ ಒಂದು ಅನಾನುಕೂಲ ಎಂದರೆ, ಇದರಲ್ಲಿ ನಿಮಗೆ ಸಿಗು ಮೌಲ್ಯ ತೀರಾ ಕಮ್ಮಿಯಾಗಿರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, May 27, 2024, 11:03 [IST]
English summary
Top 5 best ways to sell your second hand car complete details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+