ನೀವು ಏಕೆ ಹೆಲ್ಮೆಟ್ ಧರಿಸಬೇಕು? ವೀಡಿಯೋ ವೀಕ್ಷಿಸಿ
ಇದೀಗ ಯುವ ಜನಾಂಗವು ಬಹಳ ಚಿಕ್ಕ ವಯಸ್ಸಿನಲ್ಲೇ ಚಾಲನೆ ಕರಗತ ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿಯೂ ಬೈಕ್ ರೈಡಿಂಗ್ ಯುವ ಮನಸ್ಕರನ್ನು ಹೆಚ್ಚು ಸೆಳೆಯುತ್ತದೆ.
ನಾವಿಂದು ಪರಿಚರಿಸುವ ವೀಡಿಯೋದಲ್ಲಿ ನೀವು ಏಕೆ ಹೆಲ್ಮೆಟ್ ಧರಿಸಬೇಕು ಎಂಬುದನ್ನು ತಿಳಿಸಲಿದ್ದೇವೆ. ಅಪಘಾತ ಸಂದರ್ಭದಲ್ಲಿ ಶಿರ ರಕ್ಷಣೆಗೆ ಹೆಲ್ಮೆಟ್ ಪ್ರಭಾವ ಅತಿ ಹೆಚ್ಚಿರಲಿದೆ ಎಂಬುದನ್ನು ಪದೇ ಪದೇ ಉಲ್ಲೇಖಿಸಿದರೂ ಯುವ ಚಾಲಕರ ಹೆಲ್ಮೆಟ್ ರಹಿತ ಪಯಣವನ್ನು ಇಷ್ಟಪಡುತ್ತಾರೆ.

ಹೆಲ್ಮೆಟ್ ಧರಿಸಿದರೆ ಬೇಗನೇ ಕೂದಲು ಉದುರುವುದು ಎಂಬ ಅಪ ನಂಬಿಕೆಯಿರುತ್ತದೆ. ಆದರೆ ಕೂದಲಿಗಿಂತಲೂ ನಿಮ್ಮ ಜೀವ ರಕ್ಷಣೆಗೆ ಮೊದಲ ಆದ್ಯತೆ ಕೊಡಿ. ಇನ್ನು ಕೆಲವರ ಪ್ರಕಾರ ಶಿರಸ್ತ್ರಾಣ ಧರಿಸಿದರೆ ಚಾಲನೆ ವೇಳೆ ಮುಖ ಕಾಣಿಸಿಕೊಳ್ಳುವುದಿಲ್ಲವಂತೆ. ಆದರೆ ಮುಖ ಇದ್ದರಷ್ಟೇ ಅಂದತೆ ಉಳಿಸಿಕೊಳ್ಳಲು ಸಾಧ್ಯ ಎಂಬುದನ್ನು ತಿಳಿದುಕೊಳ್ಳಿರಿ.
ಇನ್ನು ಕೆಲವು ಬಾರಿ ನಿಧಾನವಾಗಿ ಜಾಗ್ರತೆಯಿಂದ ಗಾಡಿ ಓಡಿಸಿದ್ದರೆ ಅಪಘಾತ ಸಂಭವಿಸಲ್ಲ ಎಂದು ನಂಬಿಕೊಂಡಿರಬಾರದು. ಆದರೆ ನೀವು ಅತ್ಯುತ್ತಮ ಚಾಲಕರಾಗಿರಬಹುದು. ಆದರೆ ಇತರ ಚಾಲಕರು ಹಾಗಿರಬೇಕೆಂದಿಲ್ಲ ಎಂಬುದನ್ನು ಗಮನಿಸಿ. ಹಾಗಾಗಿ ಸುರಕ್ಷಿತ ಚಾಲನೆಗಾಗಿ ಯಾವತ್ತೂ ಐಎಸ್‌ಐ ಮಾನ್ಯತೆ ಪಡೆದ ಹೆಲ್ಮೆಟ್ ಧರಿಸಿಯೇ ಸಂಚರಿಸಿ. ಹ್ಯಾಪಿ ರೈಡಿಂಗ್!
<center><iframe width="100%" height="450" src="//www.youtube.com/embed/7TpWG2GD20c" frameborder="0" allowfullscreen></iframe></center>


Click it and Unblock the Notifications








