ಭಾರತದಲ್ಲಿ ಅತಿ ಹೆಚ್ಚು ರಿಕಾಲ್ ಬಿಸಿ ಮುಟ್ಟಿದ ಕಾರುಗಳು
ಆಧುನಿಕ ಕಾಲಘಟ್ಟದಲ್ಲಿ ಬಹುತೇಕ ಎಲ್ಲ ವಾಹನ ತಯಾರಿಕ ಸಂಸ್ಥೆಗಳು ತಮ್ಮ ನಿರ್ದಿಷ್ಟ ಮಾದರಿಗಳಲ್ಲಿ ಯಾವುದೇ ರೀತಿಯ ತೊಂದರೆ ಕಾಡಿದ್ದಲ್ಲಿ ಅಥವಾ ಸಮಸ್ಯೆಯ ಭೀತಿ ಆವರಿಸಿದ್ದಲ್ಲಿ ಮುಂಜಾಗ್ರತಾ ಕ್ರಮವಾಗಿ ಹಿಂದಕ್ಕೆ ಕರೆ ನೀಡುವ ಜಾಯಮಾನ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
Also Read: ನಿಮಗೆ ಗೊತ್ತಿರ 8 ಟ್ರಾಫಿಕ್ ನಿಯಮಗಳು
ಇದರೊಂದಿಗೆ ವಾಹನ ರಿಕಾಲ್ ಸುದ್ದಿಗಳು ಪದೇ ಪದೇ ಕೇಳಲಾರಂಭಿಸಿದೆ. ಈ ಎಲ್ಲ ನಷ್ಟಗಳನ್ನು ವಾಹನ ಸಂಸ್ಥೆಗಳೇ ಭರಿಸುವುದರಿಂದ ಅತಿ ಹೆಚ್ಚಿನ ನಷ್ಟವುಂಟಾಗಿದೆ. ಪ್ರಸ್ತುತ ಲೇಖನದಲ್ಲಿ 2012ರ ಬಳಿಕ ಭಾರತದಲ್ಲಿ ಅತಿ ಹೆಚ್ಚು ರಿಕಾಲ್ ಮಾಡಿದ ಮಾದರಿಗಳ ಬಗ್ಗೆ ಚರ್ಚಿಸಲಿದ್ದೇವೆ. ಇದಕ್ಕಾಗಿ ಚಿತ್ರಪುಟದತ್ತ ಮುಂದುವರಿಯಿರಿ...

10. ನಿಸ್ಸಾನ್ ಸನ್ನಿ
21,402 ಯುನಿಟ್ ಹಿಂದಕ್ಕೆ ಕರೆ
2013ರಲ್ಲಿ ಮಾಸ್ಟರ್ ಸಿಲಿಂಡರ್ ದೋಷ ಸಂಭವಿಸಿದ್ದ ಬೆನ್ನಲ್ಲೇ 15,902 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿದ್ದ ನಿಸ್ಸಾನ್ ಎರಡು ವರ್ಷಗಳ ಬಳಿಕ ಪ್ರಸಕ್ತ ಸಾಲಿನಲ್ಲಿ ಏರ್ ಬ್ಯಾಗ್ ದೋಷ ನಿಮಿತ್ತ ಮತ್ತಷ್ಟು 5,500 ಕಾರುಗಳಿಗೆ ವಾಪಾಸ್ ಕರೆ ನೀಡಿರುವ ಪ್ರಸಂಗ ಎದುರಾಗಿತ್ತು.

09. ಮಹೀಂದ್ರ ಸ್ಕಾರ್ಪಿಯೊ
24,504 ಯುನಿಟ್ ಹಿಂದಕ್ಕೆ ಕರೆ
ಪ್ರೆಶರ್ ರೆಗ್ಯೂಲೇಟಿಂಗ್ ವಾಲ್ವ್‌ನಲ್ಲಿ ತೊಂದರೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ತನ್ನ ಜನಪ್ರಿಯ ಸ್ಕಾರ್ಪಿಯೊ ಇಎಕ್ಸ್ ಮಾದರಿಯ 985 ಯುನಿಟ್ ಗಳಿಗೆ ಮಹೀಂದ್ರ ಹಿಂದಕ್ಕೆ ಕರೆ ನೀಡಿತ್ತು. ತದಾ ಬಳಿಕ ಕಳೆದ ವರ್ಷ ಇದಕ್ಕೆ ಸಮಾನವಾದ ತೊಂದರೆ ಮತ್ತೆ ಕಾಣಿಸಿಕೊಂಡ ಬೆನ್ನಲ್ಲೇ 23,519 ಯುನಿಟ್ ಗಳಿಗೆ ವಾಪಾಸ್ ಕರೆ ನೀಡಿತ್ತು.

08. ಫೋರ್ಡ್ ಫಿಯೆಸ್ಟಾ ಕ್ಲಾಸಿಕ್
25,871 ಯುನಿಟ್ ಹಿಂದಕ್ಕೆ ಕರೆ
ಅಮೆರಿಕದ ದೈತ್ಯ ವಾಹನ ಸಂಸ್ಥೆ ಫೋರ್ಡ್ ಸಹ ಇದಕ್ಕೆ ಸಮಾನವಾದ ಸಮಸ್ಯೆಯನ್ನು ಎದುರಿಸಿದ್ದು, 2013ರಲ್ಲಿ 25,871 ಫಿಯೆಸ್ಟಾ ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿತ್ತು.

07. ಫೋರ್ಡ್ ಇಕೊಸ್ಪೋರ್ಟ್
38,224 ಯುನಿಟ್ ಹಿಂದಕ್ಕೆ ಕರೆ
ಈ ಪಟ್ಟಿಯಲ್ಲಿರುವ ಎರಡನೇ ಫೋರ್ಡ್ ಮಾದರಿ ಇದಾಗಿದೆ. 2013ರಲ್ಲಿ ಬಿಡುಗಡೆಯಾದ ಬೆನ್ನಲ್ಲೇ 972 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿದ್ದ ಫೋರ್ಡ್ 2014ರಲ್ಲಿ ಇಂಧನ ಕೊಳವೆ ಹಾಗೂ ಏರ್ ಬ್ಯಾಗ್ ದೋಷದಿಂದಾಗಿ ಮತ್ತಷ್ಟು 20,700 ಯುನಿಟ್ ಗಳಿಗೆ ವಾಪಾಸ್ ಕರೆ ನೀಡಿತ್ತು. ಇಲ್ಲಿಗೂ ಇಕೊಸ್ಪೋರ್ಟ್ ಸಮಸ್ಯೆ ಬಗೆ ಹರಿಯಲಿಲ್ಲ. ಪ್ರಸಕ್ತ ಸಾಲಿನಲ್ಲಿ ರಿಯರ್ ಸಸ್ಪೆನ್ಷನ್ ತೊಂದರೆಯಿಂದಾಗಿ ಮತ್ತೆ 16,500 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿದೆ.

06. ಟೊಯೊಟಾ ಇನ್ನೋವಾ
44,989 ಯುನಿಟ್ ಗಳಿಗೆ ಹಿಂದಕ್ಕೆ ಕರೆ
2014ರಲ್ಲಿ ಸ್ಟೀರಿಂಗ್ ವೀಲ್ ದೋಷದಿಂದಾಗಿ ಜಪಾನ್ ನ ಐಕಾನಿಕ್ ಟೊಯೊಟಾ ಸಂಸ್ಥೆಯು 44,989 ಯುನಿಟ್ ಗಳಿಗೆ ರಿಕಾಲ್ ಬಿಸಿ ಮುಟ್ಟಿಸಿತ್ತು.

05. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
55,548 ಯುನಿಟ್ ಗಳಿಗೆ ಹಿಂದಕ್ಕೆ ಕರೆ
ದೇಶದ ಪ್ರಯಾಣಕ ಕಾರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರೆಂಬ ಕೀರ್ತಿಗೆ ಪಾತ್ರವಾಗಿರುವ ಜನಪ್ರಿಯ ಮಾರುತಿ ಸ್ವಿಫ್ಟ್ ಡಿಜೈರ್ ಕಾಂಪಾಕ್ಟ್ ಸೆಡಾನ್ ಕಾರು ಸಹ ರಿಕಾಲ್ ತೊಂದರೆಯಿಂದ ಪಾರಾಗಿಲ್ಲ. 2013ರಲ್ಲಿ ಸ್ಟೀರಿಂಗ್ ವೀಲ್ ಸಮಸ್ಯೆಯಿಂದಾಗಿ 581 ಯುನಿಟ್ ಗಳಿಗೆ ಹಿಂದಕ್ಕೆ ನೀಡಿದ್ದ ಸಂಸ್ಥೆಯು, 2014ರಲ್ಲಿ ಇಂಧನ ತುಂಬಿವಿಕೆ ಮುಚ್ಚಳದ ದೋಷದಿಂದಾಗಿ ಮತ್ತಷ್ಟು 42,481 ಯುನಿಟ್ ಗಳಿಗೆ ವಾಪಾಸ್ ಕರೆ ನೀಡಿತ್ತು. ಇದಾದ ಬೆನ್ನಲ್ಲೇ 2014ರ ಸಾಲಿನಲ್ಲೇ ಮತ್ತೆ 12,486 ಯುನಿಟ್ ಗಳಿಗೆ ರಿಕಾಲ್ ನೀಡಿರುವುದು ಈಗ ಇತಿಹಾಸ.

04. ಮಹೀಂದ್ರ ಎಕ್ಸ್‌ಯುವಿ500
84,695 ಯುನಿಟ್ ಹಿಂದಕ್ಕೆ ಕರೆ
2013ರಿಂದ 84,695ರಷ್ಟು ಮಹೀಂದ್ರ ಎಕ್ಸ್ ಯುವಿ500 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಇದರಲ್ಲಿ 2013ರಲ್ಲಿ ತೈಲ ಸೋರುವಿಕೆ ಸಮಸ್ಯೆಯಿಂದಾಗಿ 24,695 ಯುನಿಟ್ ಹಾಗೂ 2015ರಲ್ಲಿ ಕರ್ಟೈನ್ ಏರ್ ಬ್ಯಾಗ್ ಸಾಫ್ಟ್ ವೇರ್ ದೋಷದಿಂದಾಗಿ 60,000 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.

03. ಷೆವರ್ಲೆ ತವೆರಾ
1.14 ಲಕ್ಷ ಯುನಿಟ್ ಹಿಂದಕ್ಕೆ ಕರೆ
ಎಮಿಷನ್ ಹಾಗೂ ಇನ್ನಿತರ ಸಮಸ್ಯೆಯಿಂದಾಗಿ 2013ರಲ್ಲಿ ಷೆವರ್ಲೆಯ ಜನಪ್ರಿಯ ತವೆರಾ ಕಾರಿನ 1.14 ಲಕ್ಷ ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿತ್ತು. ಇದು ಷೆವರ್ಲೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದ್ದು ತಪ್ಪಲ್ಲ.

02. ಫೋರ್ಡ್ ಫಿಗೊ
1.4 ಲಕ್ಷಕ್ಕೂ ಹೆಚ್ಚು ಯುನಿಟ್ ಗಳಿಗೆ ಹಂದಕ್ಕೆ ಕರೆ
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಫೋರ್ಡ್ ಇಕೊ ಹಿಂದಕ್ಕೆ ಪಡೆಯಲಾಗಿದೆ. ಮೊದಲ ಬಾರಿಗೆ, 2012ರಲ್ಲಿ ರಿಯರ್ ಟ್ವಿಸ್ಟ್ ಬೀಮ್ ದೋಷದಿಂದಾಗಿ ರಿಕಾಲ್ ನೀಡಿದ್ದರೆ 2013ರಲ್ಲಿ ಎರಡನೇ ಬಾರಿ ಇದಕ್ಕೆ ಸಮಾನವಾದ ದೋಷ ಕಾಣಿಸಿಕೊಂಡಿತ್ತು. ಒಟ್ಟಾರೆಯಾಗಿ 1.09 ಲಕ್ಷ ಯುನಿಟ್ ಗಳಿಗೆ ರಿಕಾಲ್ ನೀಡಲಾಗಿತ್ತು. ಈ ನಡುವೆ ಪವರ್ ಸ್ಟೀರಿಂಗ್ ತೊಂದರೆಯಿಂದಾಗಿ ಮತ್ತಷ್ಟು 30681 ಯುನಿಟ್ ಗಳಿಗೆ ರಿಕಾಲ್ ನೀಡಿದ ಪರಿಸ್ಥಿತಿಯೂ ಎದುರಾಗಿತ್ತು.

01. ಹೋಂಡಾ ಸಿಟಿ
1.89 ಲಕ್ಷ ಯುನಿಟ್ ವಾಪಾಸ್
ಮೊದಲ ಬಾರಿಗೆ ಚಾಲಕ ಬದಿಯ ಪವರ್ ವಿಂಡೋ ಸ್ವಿಚ್ ತೊಂದರೆಯಿಂದಾಗಿ 42,672 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಿದ್ದ ಹೋಂಡಾ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ಏರ್ ಬ್ಯಾಗ್ ಸಮಸ್ಯೆಯಿಂದಾಗಿ 1.43 ಲಕ್ಷ ಯುನಿಟ್ ಗಳಿಗೆ ಮಗದೊಮ್ಮೆ ಹಿಂದಕ್ಕೆ ಕರೆ ಆಜ್ಞೆಯನ್ನು ಹೊರಡಿಸಿತ್ತು.


Click it and Unblock the Notifications








