ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

Written By:

ದಕ್ಷಿಣ ಕರೊಲಿನಾದಲ್ಲಿ ಬಿಎಂಡಬ್ಲ್ಯು ಘಟಕದಿಂದ ಹೊರಟ ಸರಕು ಸಾಗಣಿಕಾ ರೈಲೊಂದು ಹಳಿ ತಪ್ಪಿದ ಪರಿಣಾಮ 120ರಷ್ಟು ಹೊಚ್ಚ ಹೊಸ ಕಾರುಗಳು ಹಾನಿಗೀಡಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ಪಳ ಪಳ ಹೊಳೆಯುವ ಕಾರುಗಳನ್ನು ಬಿಎಂಡಬ್ಲ್ಯು ಗ್ರೀರ್ ಘಟಕದಿಂದ ಚಾರ್ಲ್ಸ್ ಟನ್ ಗೆ ಸಾಗಿಸಲಾಗುತ್ತಿತ್ತು. ಆದರೆ ಹಾದಿ ಮಧ್ಯೆ ರೈಲು ಹಳಿ ತಪ್ಪಿದ ಪರಿಣಾಮ ಅವಘಡ ಸಂಭವಿಸಿದೆ.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ಜೆಂಕಿನ್ಸ್ ವಿಲ್ ತಲುಪಿದಾಗ 12 ಬೋಗಿಗಳನ್ನು ಹೊಂದಿರುವ ರೈಲು ಅವಘಡಕ್ಕೀಡಾಗಿತ್ತು ಎಂದು ವರದಿಗಳು ತಿಳಿಸಿವೆ.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

120ರಷ್ಟು ಬಿಎಂಡಬ್ಲ್ಯು ಎಕ್ಸ್ ಮಾದರಿಯ ಕಾರಗಳು ಹಾನಿಗೀಡಾಗಿರುವುದನ್ನು ಖಚಿತಪಡಿಸಲಾಗಿದೆ. ಬಳಿಕ ರಕ್ಷಣಾ ತಂಡವು ಸ್ಥಳಾಕ್ಕಾಗಮಿಸಿ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿದರು.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ತದಾ ಬಳಿಕ ಅಲ್ಪ ಸ್ವಲ್ಪ ಹಾನಿಗೀಡಾದ ನಾಲ್ಕು ಬೋಗಿಗಳು ತನ್ನ ಪ್ರಯಾಣವನ್ನು ಮುಂದುವರಿಸಿದ್ದವು. ಆದರೆ ಉಳಿದ ಎಂಟು ವ್ಯಾಗನ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ಬಿಎಂಡಬ್ಲ್ಯು ಘಟಕದಿಂದ ನೇರವಾಗಿ ಚಾರ್ಲ್ಸ್ ಟನ್ ಬಂದರಿಗೆ ಕಾರುಗಳನ್ನು ಸಾಗಿಸಲಾಗುತಿತ್ತು. ಇಲ್ಲಿಂದ ಬಳಿಕ ಸಮುದ್ರ ಹಾದಿ ಮುಖಾಂತರ ಅಂತರಾಷ್ಟ್ರೀಯ ಮಾರುಕಟ್ಟೆಗೆ ರವಾನಿಸುವ ಇರಾದೆ ಹೊಂದಲಾಗಿತ್ತು.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ಇವೆಲ್ಲದ್ದರೊಂದಿಗೆ ಜಗತ್ತಿನ ಪ್ರೀಮಿಯ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಜರ್ಮನಿಯ ಬಿಎಂಡಬ್ಲ್ಯು ಸಂಸ್ಥೆಗೆ ಕೋಟಿ ಗಟ್ಟಲೆ ರುಪಾಯಿಗಳ ನಷ್ಟವನ್ನು ಅಂದಾಜಿಸಲಾಗಿದೆ.

ಹಳಿ ತಪ್ಪಿದ ರೈಲು; ಪಳಪಳನೆ ಹೊಳೆಯುವ 120 ಬಿಎಂಡಬ್ಲ್ಯು ಕಾರುಗಳು ಡ್ಯಾಮೇಜ್

ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳು ಸಂಭವಿಸಿಲ್ಲ. ಇನ್ನೊಂದೆಡೆ ಹಾನಿಗೀಡಾದ ಬಿಎಂಡಬ್ಲ್ಯು ಕಾರುಗಳನ್ನು ರಿಪೇರಿ ಮಾಡುವುದು ಕಷ್ಟಕರವೆನಿಸಿದೆ.

English summary
Train Carrying BMWs Derails; 120 Ultimate Driving Machines Damaged
Story first published: Tuesday, December 6, 2016, 16:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark