ಅಬ್ಬಬ್ಬಾ ನೋಡಿದ್ರಾ ಕಾರಿನ ಹಿಂಭಾಗದಲ್ಲಿ ಡ್ರೈವಿಂಗ್ ಸೀಟ್?
ಹೌದು, ಈ ವೀಡಿಯೊ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಲಿದೆ. ಸಾಮಾನ್ಯವಾಗಿ ಡ್ರೈವಿಂಗ್ ಸೀಟು ಕಾರಿನ ಮುಂಭಾಗದಲ್ಲಿ ಆಳವಡಿಸಲಾಗಿರುತ್ತದೆ. ಆದರೆ ಇದಕ್ಕಿಂತ ವಿಭಿನ್ನವಾಗಿ ಚಿಂತನೆ ಮಾಡಿರುವ ಕಾರು ಕಂಪನಿಯೊಂದು ಕಾರಿನ ಹಿಂಭಾಗದಲ್ಲಿ ಸ್ಟೀರಿಂಗ್ ವ್ಯವಸ್ಥೆ ಲಗತ್ತಿಸುವ ಮೂಲಕ ಆಟೋ ವಲಯದಲ್ಲಿ ಹೊಸ ಅಚ್ಚರಿಗೆ ಹೇತುವಾಗಿದೆ.
ದುಬೈನ ಕಿಂಗ್ ಆಫ್ ಕಸ್ಟಮ್ ಗ್ಯಾರೇಜ್‌ನಲ್ಲಿ ನಿಸ್ಸಾನ್ ಪ್ಯಾಟ್ರೋಲ್ ಎಸ್‌ಯುವಿ ಕಾರಿಗೆ ಈ ತಂತ್ರಜ್ಞಾನ ಆಳವಡಿಸಲಾಗಿದೆ. ಅಂದರೆ ಹಿಂಭಾಗದಲ್ಲಿರುವ ಸಹ ಪ್ರಯಾಣಿಕರನ್ನು ಮುಂಭಾಗಕ್ಕೂ ಹಾಗೂ ಎದುರುಗಡೆಯಿರುವ ಡ್ರೈವಿಂಗ್ ಸೀಟ್ ಹಿಂಭಾಗಕ್ಕೂ ವರ್ಗಾಯಿಸಿಕೊಳ್ಳಲಾಗಿದೆ.

ಮುಂಭಾಗದ ಎರಡು ಸೀಟುಗಳ ಮಧ್ಯೆ ಸ್ಟೀರಿಂಗ್ ವೀಲ್ ಆಳವಡಿಸಲಾಗಿದೆ. ಹಾಗೆಯೇ ಗೇರ್ ಬಾಕ್ಸ್ ಚಾಲಕನ ಬಲಬದಿಗೆ ಫಿಟ್ ಮಾಡಲಾಗಿದೆ. ಅಂದರೆ ಚಾಲಕ ಹಿಂಭಾಗದ ಸೀಟಿನಲ್ಲಿ ಕುಳಿತುಕೊಂಡು ಡ್ರೈವಿಂಗ್ ಆನಂದವನ್ನು ಸವಿಯಬಹುದಾಗಿದೆ.

ಆದರೆ ಆ ತಂತ್ರಗಾರಿಕೆ ಚಾಲಕ ಹಾಗೂ ಪ್ರಯಾಣಿಕರಿಗೆ ಎಷ್ಟರ ಮಟ್ಟಿಗೆ ಸುರಕ್ಷತೆ ನೀಡಲಿದೆ ಎಂಬುದು ಇನ್ನೂ ಅನುಮಾನವಾಗಿಯೇ ಉಳಿದಿದೆ.

ನಿಜಕ್ಕೂ ಇದು ಚಾಲಕನಿಗೆ ಆರಂಭದಲ್ಲಿ ಕ್ರೇಜಿ ಹುಟ್ಟಿಸಿದರೂ ಬಳಿಕ ಕಿರಿಕಿರಿಯನ್ನುಂಟು ಮಾಡಲಿದೆ ಎಂಬುದರಲ್ಲಿ ಯಾವುದೇ ಸಂಶಯವೂ ಇಲ್ಲ.

ಒಟ್ಟಿನಲ್ಲಿ ರಿಯರ್ ಡ್ರೈವರ್ ಸೀಟು ಹೊಂದಿರುವ ಕಸ್ಟಮೈಸ್ಡ್ ನಿಸ್ಸಾನ್ ಪ್ಯಾಟ್ರೋಲ್ ನೈಜ ರಸ್ತೆ ಪರಿಸ್ಥಿತಿಯಲ್ಲಿ ಹೇಗೆ ಯಶಸ್ಸು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವೀಡಿಯೊ ವೀಕ್ಷಿಸಿ


Click it and Unblock the Notifications