ವೆಸ್ಪಾ ಫ್ರೀಸ್ಟೈಲ್ ಸ್ಟಂಟ್; ನೀವು ಒಂದು ಕೈ ನೋಡ್ತೀರಾ?
ಇಂದಿನ ಯುವ ಜನಾಂಗ ರಸ್ತೆಗಳಲ್ಲಿ ಸಂಚರಿಸುವಾಗ ಮಾರ್ಗ ಮಧ್ಯ ಬೈಕ್‌ಗಳಲ್ಲಿ ಸ್ಟಂಟ್ ಮಾಡುವ ಗೋಜಿಗೆ ಹೋಗಿ ಪೇಚಿಗೆ ಸಿಲುಕುತ್ತಾರೆ. ಇನ್ನು ಕೆಲವು ಬಾರಿ ಪೊಲೀಸರ ಬೆತ್ತದ ರುಚಿ ಅನುಭವಿಸುಬೇಕಾಗುತ್ತದೆ.
ಕ್ಲಾಸಿಕ್ ವೆಸ್ಪಾ ಕ್ಯಾಲೆಂಡರ್
ಅಷ್ಟಕ್ಕೂ ನೀವು ಬೈಕ್ ಸ್ಟಂಟ್ ಅನ್ನು ಇಷ್ಟಪಡುತ್ತೀರಾ? ನುರಿತ ತಜ್ಞರಿಂದ ತರಬೇತಿಯನ್ನು ಪಡೆಯದ ಹೊರತಾಗಿ ಖಂಡಿತ ಇಂತಹ ಗೋಚಿಗೆ ಹೋಗಬಾರದು ಎಂಬುದು ನಮ್ಮ ಸಲಹೆಯಾಗಿದೆ. ನಮ್ಮ ಇಂದಿನ ಲೇಖನದಲ್ಲಿ ವೆಸ್ಪಾ ಫ್ರೀಸ್ಟೈಲ್ ಸ್ಟಂಟ್ ಬಗ್ಗೆ ಹೇಳಿಕೊಡಲಿದ್ದೇವೆ. ನೀವಿದನ್ನು ಇಷ್ಟಪಡಲಿದ್ದೀರಿ ಎಂಬ ನಂಬಿಕೆ ನಮ್ಮದ್ದು.
ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ನಿಕೊಲಾ ಇಂಪೆನ್ನಾಟೋರ್ (Nicola l'impennatore) ಎಂಬವರು ನುರಿತ ವೆಸ್ಪಾ ಫ್ರೀಸ್ಟೈಲ್ ಸ್ಟಂಟ್ ತಜ್ಞರಾಗಿದ್ದಾರೆ. ಈಗಾಗಲೇ ಹಲವಾರು ಫ್ರಿಸ್ಟೈಲ್ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಅವರು ಮನ್ನಣೆಗೆ ಪಾತ್ರವಾಗಿದ್ದಾರೆ.

ಇಟಲಿಯ ಐಕಾನಿಕ್ ಸ್ಕೂಟರ್ ವೆಸ್ಪಾದಲ್ಲಿ ನಿಕೊಲಾ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇಷ್ಟಪಡುತ್ತಾರೆ. ಇದು ವೆಸ್ಪಾ ಜತೆಗೆ ನಿಕೊಲಾ ಅವರನ್ನು ಹೆಚ್ಚು ಜನಪ್ರಿಯವಾಗಿಸಲು ನೆರವಾಗಿದೆ.

ಫ್ರೀಸ್ಟೈಲ್ ಸ್ಕೂಟರಿಂಗ್ ಅತ್ಯಂತ ಸಾಹಸ ಸ್ಕೂಟರ್ ಸ್ಟಂಟ್ ಕ್ರೀಡೆಯಾಗಿದ್ದು, ಪರಿಣಿತರು ತಮ್ಮ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ.

ಇನ್ನು ಕೆಲವರು ವೆಸ್ಪಾಗಳಂತಹ ಐಕಾನಿಕ್ ಸ್ಕೂಟರ್‌ಗಳಲ್ಲಿ ಫ್ರೀಸ್ಟೈಲ್ ಸ್ಟಂಟ್ ಪ್ರದರ್ಶನ ಮಾಡಲು ಇಷ್ಟಪಡುತ್ತಾರೆ. ಈ ಸಾಲಿಗೆ ನಿಕೊಲಾ ಸೇರಿಕೊಂಡಿದ್ದಾರೆ.

ಇಲ್ಲಿ ಕೊಡಲಾಗಿರುವ ಚಿತ್ರದಲ್ಲಿ, ನಾಲ್ಕು ವರ್ಷಗಳ ಹಿಂದೆ ಮೋಟಾರು ಬೈಕ್ ಎಕ್ಸ್‌ಪೋದಲ್ಲಿ ನಿಕೊಲಾ ಅವರು ಪ್ರದರ್ಶಿಸಿರುವ ಸಾಹಸ ದೃಶ್ಯಗಳಾಗಿವೆ.

ಫ್ರೀಸ್ಟೈಲ್ ಸ್ಟಂಟ್ ವೇಳೆ ಚಾಲಕರಿಗೆ ಸಮತೋಲನ ಕಾಪಾಡುವುದು ಬಹುದೊಡ್ಡ ಸವಾಲಾಗಿರುತ್ತದೆ.

ಹಾಗೆಯೇ ಇದನ್ನು ಪ್ರದರ್ಶಿಸುವಾಗ ಸುರಕ್ಷತೆಗೂ ಹೆಚ್ಚು ಒತ್ತು ಕೊಡಲಾಗುತ್ತದೆ.

ಅಷ್ಟಕ್ಕೂ ನೀವು ವೆಸ್ಪಾ ಫ್ರೀಸ್ಟೈಲ್ ಪ್ರದರ್ಶಿಸಲು ಬಯಸುವೀರಾ? ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...
ಇದೀಗ ನಿಕೊಲಾ ಅವರ ರೋಚಕ ವೆಸ್ಪಾ ಫ್ರೀಸ್ಟೈಲ್ ವೀಡಿಯೋ ವೀಕ್ಷಿಸಲು ಮರೆಯದಿರಿ...


Click it and Unblock the Notifications








