3ನೇ ಮಹಡಿಯಲ್ಲಿ ಸ್ಕಾರ್ಪಿಯೋವನ್ನು ನಿಲ್ಲಿಸಿಕೊಂಡ ಮನೆ ಮಾಲೀಕ! ವಿಡಿಯೋ ವೈರಲ್
ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಕಾರನ್ನು ಮನೆಯ ಮಾಲೀಕರೊಬ್ಬರು ತಮ್ಮ ಮೂರನೇ ಮಹಡಿಯಲ್ಲಿ ನಿಲ್ಲಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಅನೇಕರಿಗೆ ಆಶ್ಚರ್ಯಕರವಾಗಿದ್ದು, ಕಾರು ಇಷ್ಟು ಎತ್ತರದಲ್ಲಿ ಹೇಗೆ ನಿಂತಿದೆ ಎಂಬುದು ಗೊಂದಲಗೊಳಿಸಿದೆ. ವೈರಲ್ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮನೆಯ ಮಾಲೀಕ ಸ್ಕಾರ್ಪಿಯೋ ಕಾರನ್ನು ಎಷ್ಟು ಇಷ್ಟಪಟ್ಟಿದ್ದಾರೆ ಎಂಬುದು ತಿಳಿಯುತ್ತದೆ. ವಿಷಯವೇನೆಂದರೆ ಮನೆಯ ಟೆರೇಸ್‌ನಲ್ಲಿ ಸ್ಕಾರ್ಪಿಯೋ ಕಾರಿನಂತೆ ಕಾಣುವ ನೀರಿನ ಟ್ಯಾಂಕ್ (Water Tank) ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ತಿಳಿಯೋಣ.
ಮಧ್ಯಮ ವರ್ಗದ ಪ್ರತಿಯೊಬ್ಬರಿಗು ಸ್ವಂತ ಮನೆ ಮತ್ತು ಕಾರು ಹೊಂದುವುದು ಕನಸಾಗಿರುತ್ತದೆ. ಅಂತಯೇ ಅವರು ನಿರ್ಮಿಸುತ್ತಿರುವ ಮನೆಯಲ್ಲಿ ಯಾವೆಲ್ಲಾ ವಿಶೇಷತೆಗಳು ಇರಬೇಕು ಎಂಬುದರ ಬಗ್ಗೆ ಆಸಕ್ತಿಯಿದ್ದವರು ಮಾತ್ರ ಇಂತಹ ಅಚ್ಚರಿಗೊಳಿಸುವ ಕೆಲಸಗಳನ್ನು ಮಾಡುತ್ತಾರೆ. ಹಾಗೆಯೇ ಇಲ್ಲಿ ಕೂಡ ವ್ಯಕ್ತಿಯೊಬ್ಬರು ಮೆನೆಯ ಮೇಲೆ ಸಿಂಟೆಕ್ಸ್ ಬದಲಿಗೆ ಕಾರಿನ್ನು ಹೋಲುವ ಟ್ಯಾಂಕ್ ನಿರ್ಮಿಸಿಕೊಂಡಿದ್ದಾರೆ.

ಥೇಟ್ ಸ್ಕಾರ್ಪಿಯೋವನ್ನು ಹೋಲುತ್ತದೆ: ಮನೆಯ ಟೆರೇಸ್‌ನಲ್ಲಿ ನಿರ್ಮಿಸಲಾದ ಸ್ಕಾರ್ಪಿಯೋ ವಾಟರ್ ಟ್ಯಾಂಕ್, ನಿಜವಾದ ಕಾರಿನಂತೆಯೇ ಕಾಣುತ್ತದೆ. ಮುಂಭಾಗದಲ್ಲಿರುವ ಗ್ರಿಲ್‌ನಿಂದ ಹಿಡಿದು, ಅದರ ಕ್ರೋಮ್ ಫಿನಿಶ್ ಹಾಗೂ ಮಹೀಂದ್ರಾ ಲೋಗೋವರೆಗೆ ಥೇಟ್ ನಿಜವಾದ ಕಾರನ್ನು ಹೋಲುವಂತೆ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ಲೈಟ್ ವಿನ್ಯಾಸ, ನವೀಕರಿಸಿದ ಬಂಪರ್‌ಗಳು ಮತ್ತು ಹೊಸ ಫಾಗ್ ಲೈಟ್‌ಗಳಂತಹ ಸಣ್ಣ ವಿವರಗಳನ್ನು ಕೂಡ ಇಲ್ಲಿ ನೋಡಬಹುದು.
ಕಾರನ್ನು ಮನೆಯ ಮೇಲಿಡಬೇಕು ಎಂಬ ಮನೆ ಮಾಲೀಕನ ಈ ಹೊಸ ಐಡಿಯಾಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಕೇವಲ ಕಾರು ಮಾತ್ರವಲ್ಲ, ನಮ್ಮ ದೇಶದ ಕೆಲ ಭಾಗಗಳಲ್ಲಿ ವಿಮಾನ, ಬಸ್, ರೈಲಿನಂತಹ ಮನೆ ನಿರ್ಮಾಣಗಳನ್ನು ನೋಡಬಹುದು. ಸಾಮಾನ್ಯವಾಗಿ ಎಲ್ಲರೂ ಇಂತಹ ನಿರ್ಮಾಣಗಳನ್ನು ಮಾಡುವುದಿಲ್ಲ. ಬದಲಿಗೆ ಆಯಾ ಪ್ರತ್ಯೇಕ ಅಭಿರುಚಿಗಳನ್ನು ಹೊಂದಿರುವವರು ಮಾತ್ರ ಇಂತಹ ನಿರ್ಮಾಣಗಳನ್ನು ಮಾಡಿಸುತ್ತಾರೆ.

ಸ್ಕಾರ್ಪಿಯೋ ವಿಶೇಷತೆಗಳು: 2002 ರಲ್ಲಿ, ಮಹೀಂದ್ರಾ ಸ್ಕಾರ್ಪಿಯೋವನ್ನು ಮೊದಲ ಬಾರಿಗೆ ಭಾರತದಲ್ಲಿ ಪರಿಚಯಿಸಲಾಯಿತು. ಇದು ಒರಟಾದ ಎಸ್‌ಯುವಿಯಾಗಿದ್ದು, 2.6 ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಆರಂಭದಲ್ಲಿ ಬಿಡುಗಡೆ ಮಾಡಲಾಯಿತು. ಆಗಿನ ಕಾಲಕ್ಕೆ ಅಷ್ಟೇನು ದೊಡ್ಡ ವೈಶಿಷ್ಟ್ಯಗಳು ಕಾರಿನಲ್ಲಿ ಬಿಟ್ಟಿರಲಿಲ್ಲ. ಎಸಿ, ಪವರ್ಡ್ ವಿಂಡೋ ಮತ್ತು ಸ್ಟಿರಿಯೊ ಸಿಸ್ಟಮ್‌ನಂತಹ ಬೇಸಿಕ್ ಫೀಚರ್‌ಗಳನ್ನು ಹೊಂದಿತ್ತು.
ಬಳಿಕ ನವೀಕರಣಗೊಂಡು ಸಿಗ್ನೇಚರ್ ಹುಡ್-ಸ್ಕೂಪ್, 2 ಏರ್ ಬ್ಯಾಗ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಎಂಐಡಿ ಮತ್ತು ಇತರ ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತಾ ಬಂದಿದೆ. ಹೊಸ ವಾಹನಗಳ ಪೈಪೋಟಿ ಹೆಚ್ಚಾಗುತ್ತಿದ್ದರೂ, ತನ್ನ ಈ ಮಾದರಿಯನ್ನು ಕಂಪನಿಯು ನಿಲ್ಲಿಸಿಲ್ಲ, ಇಂದಿಗೂ ಈ ಕಾರನ್ನು ಖರೀದಿಸುವವರು ಕಡಿಮೆಯಾಗಿಲ್ಲ.
ಕಂಪನಿಯು ಇಂದಿಗೂ ಈ ಕಾರನ್ನು ಮಹೀಂದ್ರಾ ಸ್ಕಾರ್ಪಿಯೋ-ಎನ್ ಜೊತೆಗೆ ಮಾರಾಟ ಮಾಡುತ್ತಿದೆ. ಥಾರ್ ಮತ್ತು ಎಕ್ಸ್‌ಯುವಿ 700 ಕಾರುಗಳಲ್ಲಿರುವ ಅದೇ ಎಂಜಿನ್ ಅನ್ನು ಇದರಲ್ಲಿ ನೀಡಲಾಗಿದೆ. ಇದು 2.0-ಲೀಟರ್ 4-ಸಿಲಿಂಡರ್ ಎಂ ಸ್ಟಾಲಿನ್ ಪೆಟ್ರೋಲ್ ಎಂಜಿನ್ ಮತ್ತು 2.2-ಲೀಟರ್ 4 ಎಂಹಾಕ್ ಡೀಸೆಲ್ ಎಂಜಿನ್ ಹೊಂದಿದೆ. 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಆಯ್ಕೆಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications