ಲಕಲಕ ಮಿನುಗುವ ಬೆಂಝ್ ವಜ್ರದ ಕಾರು
ಐಷಾರಾಮಿ ಕಾರುಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಜೀವನದಲ್ಲಿ ಎಂದಾದರೂ ಒಂದು ದಿನ ತಾವು ಸಹ ಇಂತಹ ಕಾರುಗಳ ಒಡೆಯರಾಗಬೇಕು ಎಂಬ ಹಂಬಲವನ್ನು ಎಲ್ಲ ಕಾರು ಪ್ರೇಮಿಗಳು ಹೊಂದಿರುತ್ತಾರೆ.
ಹಾಗಿರಬೇಕೆಂದರೆ 2007ರಲ್ಲಿ ದುಬೈನ ಅನಾವರಣಗೊಂಡಿದ್ದ ಮರ್ಸಿಡಿಸ್ ಬೆಂಝ್‌ನ ದುಬಾರಿ ಕಾರು ಈಗಲೂ ವಾಹನ ಪ್ರೇಮಿಗಳಲ್ಲಿ ಅತ್ಯಂತ ಹೆಚ್ಚು ಕುತೂಹಲ ಕೆರಳಿಸಿದೆ. ಯಾಕೆ ಅಂತೀರಾ? ಮುಂದಕ್ಕೆ ಓದಿ...

ಮೂರು ಲಕ್ಷಗಳಷ್ಟು ವಜ್ರ ಮುತ್ತುಗಳಿಂದ ಆಲಂಕೃತವಾಗಿರುವ ಜಗತ್ತಿನ ಅತ್ಯಂತ ದುಬಾರಿ ಕಾರುಗಳಲ್ಲಿ ಮರ್ಡಿಡಿಸ್ ಬೆಂಝ್‌ನ ಈ ಕಸ್ಟಮೈಸ್ಡ್ ಕಾರು ಗುರಿತಿಸಿಕೊಂಡಿದೆ

ಬೆಂಝ್‌ನ ಅತಿ ಜನಪ್ರಿಯ ಎಸ್‌ಎಲ್550 ಮಾದರಿಯ 50ನೇ ವಾರ್ಷಿಕೋತ್ಸವದ ಅಂಗವಾಗಿ 2007ನೇ ಇಸವಿಯಲ್ಲಿ ಇದನ್ನು ಪ್ರದರ್ಶಿಸಲಾಗಿತ್ತು.

ಪ್ರಾರಂಭಿಕ ವರದಿಗಳ ಪ್ರಕಾರ ಸೌದಿ ರಾಜ ಅಲ್ವಲೀದ್ ಎಂಬವರು ಬೆಂಝ್‌ನ ಈ ಡೈಮಂಡ್ ಕಾರು ಖರೀದಿಸಿದ್ದಾರೆಂಬ ವರದಿಗಳು ಬಂದಿದ್ದರು.

ಆದರೆ ಬಳಿಕ ಅಲ್ವಲೀದ್ ಅವರೇ ಅಧಿಕೃತವಾಗಿ ತಾವು ಬೆಂಝ್‌ನ ದುಬಾರಿ ಕಾರನ್ನು ಖರೀದಿ ಮಾಡಿಲ್ಲವೆಂಬ ಸ್ಪಷ್ಟನೆಯನ್ನು ನೀಡಿದ್ದರು.

ಇಲ್ಲಿ ಗಮನಾರ್ಹ ಸಂಗತಿಯೆಂದರೆ ದುಬೈನಲ್ಲಿ ಪ್ರದರ್ಶನ ಮಾಡಿರುವ ಈ ಕಾರನ್ನು ಸಾರ್ವಜನಿಕರು ಮುಟ್ಟಬೇಕೆಂದರೆ 1,000 ಅಮೆರಿಕನ್ ಡಾಲರ್ ಪಾವತಿ ಮಾಡಬೇಕಿತ್ತು. ಇದರಿಂದಲೇ ಈ ಕಾರು ಎಷ್ಟೊಂದು ಬೆಲೆಬಾಳುತ್ತಿದೆ ಎಂಬುದನ್ನು ನೀವು ಊಹೆ ಮಾಡಬಹುದು.

ಅಂದ ಹಾಗೆ ಬೆಂಝ್‌ನ ಡೈಮಂಡ್ ಕಾರು 4.8 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆಬಾಳುತ್ತಿದೆ. ಇದು ಜರ್ಮನಿಯ ಐಕಾನಿಕ್ ಕಾರು ಸಂಸ್ಥೆಗೆ ಕೈಗನ್ನಡಿಯಾಗಿದೆ.

ಇನ್ನು ಅಲ್ವಲೀದ್ ಬಗ್ಗೆ ಮಾತನಾಡುವುದಾದಲ್ಲಿ ಜಗತ್ತಿನ ಟಾಪ್ 10 ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಅವರ ಬಳಿ 50ಕ್ಕೂ ಹೆಚ್ಚು ಕಾರುಗಳಿವೆ.


Click it and Unblock the Notifications








