ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

By Nagaraja

ನವದೆಹಲಿಯಲ್ಲಿ ನಡೆದ ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014 ಆಡಿಷನ್ ಭರ್ಜರಿಯಾಗಿ ನೆರವೇರಿದೆ. ಕಳೆದ ತಿಂಗಳು ಮಿಸ್ ದಿವಾ 2014 ಜೊತೆ ಸಹಭಾಗಿತ್ವ ಘೋಷಿಸಿದ್ದ ಯಮಹಾ ಯುವ ಹೆಂಗಳೆಯರ ಸ್ವಾತಂತ್ರ್ಯ, ಬುದ್ಧಿಶಕ್ತಿ, ಗುರಿ ಮುಂತಾದ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಸದಾ ಬದ್ಧವಾಗಿದೆ.

2014ನೇ ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ ಆಡಿಷನ್ ಸ್ಪರ್ಧೆಗೆ ಒಟ್ಟು 108 ಸ್ಪರ್ಧಿಗಳು ಹೆಸರು ನೊಂದಾಯಿಸಿದ್ದರು. ಇದರಂತೆ ನವದೆಹಲಿಯ ಸಾಮ್ರಾಮಟ್ ಹೋಟೆಲ್‌ನಲ್ಲಿ ಚೆಲುವಿನ ಚಿತ್ತಾರ ಸಾಗಿತ್ತು. ಬಳಿಕ ನಡೆದ ಸ್ಪರ್ಧೆಯಲ್ಲಿ 6 ವಿಜೇತರನ್ನು ಆಯ್ಕೆ ಮಾಡಲಾಗಿದೆ. ಇವರು ಮುಂಬೈನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಫೈನಲ್ ಸುತ್ತಿನಲ್ಲಿ ಭಾಗವಹಿಸಲಿದ್ದಾರೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಗ್ಲಾಮರಸ್ ಹಾಗೂ ಸ್ಫರ್ಧಾತ್ಮಕ ಆಡಿಷನ್ ಅಂತಿಮದಲ್ಲಿ ಪ್ರಿಯಾಂಕ ಖಾತ್ರಿ ಅವರನ್ನು'ಮಿಸ್ ಫಾಸಿನೋ' ಪಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಇದೀಗ ಕೊನೆಯ ಹಂತ ತಲುಪಿರುವ ಸ್ಪರ್ಧೆಯ ಅಂತಿಮ ಭಾಗ ಮುಂಬೈನಲ್ಲಿ ನಡೆಯಲಿದೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಮಿಸ್ ಯುನಿವರ್ಸ್ ಫ್ರಾಂಚೈಸಿಯ ಭಾಗವಾಗಿ ಮಿಸ್ ದಿವಾ ಕಳೆದ ವರ್ಷ ಆರಂಭವಾಗಿತ್ತು. ಹಾಗೆಯೇ 2014 ಮಿಸ್ ದಿವಾ ಸ್ಪರ್ಧೆಯು ಯಮಹಾ ಮೋಟಾರು ಇಂಡಿಯಾ ಸೇಲ್ಸ್ ಪ್ರೈವೇಟ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುತ್ತಿದೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಇದರಂತೆ ದೇಶದ ವಿವಿಧ ನಗರಗಳಲ್ಲಿ ಆಡಿಷನ್ ಸ್ಪರ್ಧೆಯು 2014 ಜುಲೈ 31ರಂದು ಆರಂಭವಾಗಿತ್ತು. ಇದು ಯುವತಿಯರಿಗೆ ತಮ್ಮ ವ್ಯಕ್ತಿತ್ವ ಹಾಗೂ ಬುದ್ಧಿಶಕ್ತಿ ತೋರ್ಪಡಿಸುವ ಪರಿಪೂರ್ಣ ವೇದಿಕೆಯಾಗಿರಲಿದೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಅಂತರಾಷ್ಟ್ರೀಯ ವಾರ್ಷಿಕ ಬ್ಯೂಟಿ ಸ್ಪರ್ಧೆಯಾಗಿರುವ ಮಿಸ್ ಯುನಿವರ್ಸ್ ಸ್ಪರ್ಧೆಯನ್ನು ಮಿಸ್ ಯುನಿವರ್ಸ್ ಸಂಸ್ಥೆ ನಡೆಸುಕೊಂಡು ಬರುತ್ತಿದೆ. ಮಿಸ್ ಯುನಿವರ್ಸ್ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಜಗತ್ತಿನ ಮೂರು ಪ್ರಮುಖ ಸೌಂದರ್ಯ ಸ್ಪರ್ಧೆಗಳಲ್ಲಿ ಇಂದು ಒಂದಾಗಿದೆ. ಮಿಸ್ ಅರ್ಥ್ ಮತ್ತು ಮಿಸ್ ವರ್ಲ್ಡ್ ಇತರ ಎರಡು ಪ್ರಮುಖ ಸೌಂದರ್ಯ ಸ್ಪರ್ಧೆಗಳಾಗಿವೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಸಹಜವಾಗಿಯೇ ಮಿಸ್ ಯುನಿವರ್ಸ್‌ನಲ್ಲಿ ವಿಜೇತ ಸಾಧಿಸಿದ ಅದೃಷ್ಟ ವಿಜೇತೆ 2014ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ದೇಶದ ಪ್ರತಿಷ್ಠೆಯನ್ನು ಎತ್ತಿ ಹಿಡಿಯಲಿದ್ದಾರೆ.

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

ಯಮಹಾ ಫಾಸಿನೋ ಮಿಸ್ ದಿವಾ ಯುನಿವರ್ಸ್ 2014

Article Published On: Friday, August 29, 2014, 10:35 [IST]
English summary
Yamaha Fascino Miss Diva Universe 2014 auditions come to a close in Delhi
Read more on yamaha ಯಮಹಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+