ನಿಮ್ಮ ಕಾರಲ್ಲೂ ಈ 10 ಅಂಶಗಳಿದ್ದರೆ ನೀವು ಸಹ ಶ್ರೀಮಂತರೇ!
ಐಷಾರಾಮಿ ಕಾರು ಖರೀದಿ ಮಾಡುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ದೇಶದಲ್ಲಿ ಐಷಾರಾಮಿ ಕಾರುಗಳ ಖರೀದಿಗಾರರ ಸಂಖ್ಯೆಯಲ್ಲಿ ನಿಧಾನವಾಗಿ ವರ್ಧನೆಯಾಗುತ್ತಿದೆ. ಹಣಕಾಸು ಹಾಗೂ ಜೀವನ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆ ಇದನ್ನು ಪ್ರತಿಬಿಂಬಿಸುತ್ತದೆ.
ಹಾಗಿದ್ದರೆ ನಿಮ್ಮ ಬಳಿ ಐಷಾರಾಮಿ ಕಾರಿದೆಯೇ? ದೇಶದಲ್ಲಿ ಜರ್ಮನಿಯ ಮರ್ಸಿಡಿಸ್ ಬೆಂಝ್, ಆಡಿ ಹಾಗೂ ಬಿಎಂಡಬ್ಲ್ಯು ಸಂಸ್ಥೆಗಳು ಪ್ರೀಮಿಯಂ ವಿಭಾಗದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸಿದೆ. ಈಗ ಐಷಾರಾಮಿ ಕಾರಿನಲ್ಲಿರಬೇಕಾದ 10 ವೈಶಿಷ್ಟ್ಯಗಳನ್ನು ಪಟ್ಟಿ ಮಾಡಿಕೊಡಲಿದ್ದೇವೆ. ಇವೆಲ್ಲವೂ ನಿಮ್ಮ ಕಾರಾಲ್ಲಿದ್ದರೆ ನೀವು ಕೂಡಾ ಶ್ರೀಮಂತರೇ ಎಂದು ಕಣ್ಮುಚ್ಚಿಕೊಂಡು ಹೇಳಬಹುದು.

01. ಮರ್ಸಿಡಿಸ್ ಬೆಂಝ್ ಎ ಕ್ಲಾಸ್
ಜರ್ಮನಿಯ ಈ ಸಂಸ್ಥೆಯು ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದಿದೆಯೆಂದರೆ ಕಾರಿನೊಳಗೆ ಮೂರು ವಿಧಗಳಲ್ಲಿ ಗಾಳಿ ಸಮತೋಲವನ್ನು ಕಾಪಾಡಿಕೊಳ್ಳಲಿದೆ.

02. ಆಡಿ ಎ8 ಎಲ್
ಹಾಗೊಂದು ವೇಳೆ ಆಡಿ ಆರ್8 ಎಲ್ ಕಾರಿನಲ್ಲಿ ಐಚ್ಚಿಕ ರಿಯರ್ ಸೀಟ್ ಎಕ್ಸ್ ಕ್ಯೂಟಿವ್ ಪ್ಯಾಕೇಜ್ ನಿಮ್ಮದಾಗಿಸಿದರೆ ಹಿಂದುಗಡೆ ರಾಜನ ತರಹನೇ ಪಯಣ ಮಾಡಬಹುದಾಗಿದೆ. ಈ ಆರಾಮದಾಯಕ ಸೀಟುಗಳಲ್ಲಿ ಫೂಟ್ ರೆಸ್ಟ್ ಹಾಗೂ ಲೆಥರ್ (ಚರ್ಮ) ಹೋದಿಕೆಯು ಕಂಡುಬರಲಿದೆ.

03. ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕೂಪೆ
ಕಡಿದಾದ ತಿರುವುಗಳಲ್ಲಿ ಬೆಂಝ್ ಎಸ್ ಕ್ಲಾಸ್ ಕೂಪೆ ಚಾಲಕ ಸ್ನೇಹಿ ಎನಿಸಿಕೊಳ್ಳಲಿದೆ. ಇದರೊಂದಿಗೆ ಅತ್ಯುತ್ತಮ ಹ್ಯಾಂಡ್ಲಿಂಗ್ ಹಾಗೂ ಗರಿಷ್ಠ ವೇಗದಲ್ಲಿ ಆರಾಮದಾಯಕ ಪಯಣ ಖಾತ್ರಿಪಡಿಸಲಿದೆ.

04. ಬೆಟ್ಲಿ ಮುಲ್ಸಾನ್
ಜೀವನ ಶೈಲಿಯನ್ನು ಇನ್ನಷ್ಟು ಎತ್ತರಕ್ಕೆ ಹೇಗೆ ಕೊಂಡು ಹೋಗಬೇಕೆಂಬುದು ಬೆಂಟ್ಲಿಗೆ ಗೊತ್ತು. ಇದಕ್ಕಾಗಿ ಪ್ರಯಾಣದ ವೇಳೆ ಮದ್ಯ ಸೇವನೆಗಾಗಿ ಷಾಂಪೇನ್ ಬಾಟಲಿ ಮುಂತಾದ ಸೇವೆಗಳನ್ನು ಒದಿಸುತ್ತಿದೆ.

05. ಮರ್ಸಿಡಿಸ್ ಮೇಬ್ಯಾಕ್ ಎಸ್ ಕ್ಲಾಸ್
1.5 ಕೋಟಿ ರು.ಗಳಷ್ಟು ಬೆಲೆಬಾಳುವ ಮರ್ಸಿಡಿಸ್ ಮೇಬ್ಯಾಕ್ ಎಸ್ ಕ್ಲಾಸ್ ಮಾದರಿಯು ಅತ್ಯುತ್ತಮ ರಿಯರ್ ಕ್ಯಾಬಿನ್ ಪಡೆದುಕೊಂಡಿದೆ. ಅಲ್ಲದೆ ಮಾಹಿತಿ ಮನರಂಜನಾ ವ್ಯವಸ್ಥೆಯು ಇದರಲ್ಲಿರಲಿದೆ.

06. ಬೆಂಟ್ಲಿ ಕಾಂಟಿನೆಂಟಲ್
ಅತ್ಯುತ್ತಮ ಲೆಥರ್ ಬಳಕೆಗೆ ಬೆಂಟ್ಲಿ ಕಾಂಟಿನೆಂಟಲ್ ಮಗದೊಂದು ಉದಾಹರಣೆಯಾಗಿದೆ. ಬಲ್ಲ ಮೂಲಗಳ ಪ್ರಕಾರ ಉತ್ತರ ಯುರೋಪ್ ನ ವಿಶಿಷ್ಟ ಜಾತಿಗೆ ಸೇರಿದ ಗೂಳಿಗಳ ಚರ್ಮದ ಹೋದಿಕೆಯಿಂದ ಬೆಂಟ್ಲಿ ಇಂಟಿರಿಯರ್ ರಚನೆ ಮಾಡಲಾಗಿದೆ.

07. ಬಿಎಂಡಬ್ಲ್ಯು 7 ಸಿರೀಸ್
ಕಾರಿನಲ್ಲಿ ಆಡಿಯೋ ಪ್ಲೇಯರ್ ಗೂ ಅಷ್ಟೇ ಮಹತ್ವವಿದೆ. ಮನಸ್ಸಿಗೆ ಇಂಪಾದ ಧ್ವನಿ ನೀಡುವ ಬಿಎಂಡಬ್ಲ್ಯು 7 ಸೀರಿಸ್ 1200 ವ್ಯಾಟ್ ಆಡಿಯೋ ಪ್ಲೇಯರ್ ನಲ್ಲಿ ಸಬ್ ವೂಫರ್ ಮತ್ತು 16 ಸ್ಪೀಕರ್ ಗಳ ಸೇವೆ ಇರಲಿದೆ.

08. ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್
ಮರ್ಸಿಡಿಸ್ ಬೆಂಝ್ ನ ಮ್ಯಾಜಿಕ್ ಬಾಡಿ ಕಂಟ್ರೋಲ್ ತಂತ್ರಜ್ಞಾನ ನಿಜಕ್ಕೂ ಶ್ಲಾಘನೀಯವಾಗಿದೆ. ಇದು ವಾಹನ ಸಂಪೂರ್ಣ ನಿಯಂತ್ರಣ ತರಲು ನೆರವಾಗುತ್ತದೆ.

09. ಪೋರ್ಷೆ ಪನಮೆರಾ
ಲೆಥರ್ ಸ್ಪರ್ಶಕ್ಕೆ ಮಗದೊಂದು ಉದಾಹರಣೆ ಇದಾಗಿದೆ. ಲೆಥರ್ ಇಂಟಿರಿಯರ್ ಜೊತೆಗೆ, ಲೆಥರ್ ಏರ್-ಕಾನ್ ವೆಂಟ್ಸ್, ರಿಯರ್ ವ್ಯೂ ಮಿರತ್, ಸೆಂಟ್ರಲ್ ಕಾನ್ಸಾಲ್ ನಿಮ್ಮ ತಂಪಾಗಿರಿಸಲು ನೆರವಾಗಲಿದೆ.

10. ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್
ಕಾರಲ್ಲೇ ಮಸಾಜ್ ಸೇವೆ ಬೇಕೇ? ಇದಕ್ಕೂ ಇಲ್ಲಿದೆ ಪರಿಹಾರ ನೋಡಿ. ಮರ್ಸಿಡಿಸ್ ಬೆಂಝ್ ಒದಗಿಸುತ್ತಿರುವ ಈ ವಿಶೇಷ ವಿನ್ಯಾಸಿತ ಸೀಟು ಬಹು ವಿಧದ ಮಸಾಜ್ ಸೆಟ್ಟಿಂಗ್ ಅನ್ನು ಪಡೆದುಕೊಂಡಿದೆ.


Click it and Unblock the Notifications








