ಕೇವಲ 12 ಲಕ್ಷ ರೂ. ವೆಚ್ಚಿಸಿ 24 ಕೋಟಿ ಬೆಲೆಯ ಲ್ಯಾಂಬೊರ್ಘಿನಿ ಕಾರು ನಿರ್ಮಿಸಿದ ಯುವಕ!
ಲ್ಯಾಂಬೊರ್ಘಿನಿ ಬ್ರಾಂಡ್ ವಿಶ್ವದ ಅತ್ಯಂತ ವೇಗದ ಕಾರುಗಳನ್ನು ತಯಾರಿಸುವ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ವ್ಯಾಪಕ ಶ್ರೇಣಿಯ ಕಾರುಗಳನ್ನು ತಯಾರಿಸುತ್ತದೆ. ಬ್ರಾಂಡ್‌ನ ಎಲ್ಲಾ ಕಾರುಗಳು ಉತ್ತಮ ಪರ್ಫಾಮೆನ್ಸ್ ಹೊಂದಿರುವ ಕಾರುಗಳಾಗಿರುವ ಕಾರಣ ಕೋಟಿಗಟ್ಟಲೆ ಬೆಲೆಯಿರುತ್ತವೆ. ಇಂತಹ ಕಾರನ್ನು ಯುವಕನೊಬ್ಬ ಕೇವಲ 12.5 ಲಕ್ಷ ರೂ. ವೆಚ್ಚದಲ್ಲಿ ಮಾಡಿಫೈಗೊಳಿಸಿದ್ದಾನೆ.
ಜನಪ್ರಿಯ ಯುಟ್ಯೂಬರ್ ಆಗಿರುವ 'ಧವನ್' ಎಂಬ ಯುವಕ ಈ ಕಾರನ್ನು ನಿರ್ಮಿಸಿದ್ದಾನೆ. 12 ತಿಂಗಳ ಸತತ ಪ್ರಯತ್ನ ಹಾಗೂ ಕಾರಿಗೆ ಬೇಕಾದ ಎಲ್ಲಾ ಬಿಡಿ ಭಾಗಗಳ ಕೊರೆತೆಯಿದ್ದರೂ ಕಠಿಣ ಪರಿಶ್ರಮದೊಂದಿಗೆ ಎಲ್ಲವನ್ನು ಸಂಗ್ರಿಹಿಸಿ, ಒಟ್ಟಾರೆ ಅಂದುಕೊಂಡ ಕಾರನ್ನು ನಿರ್ಮಿಸಿ ಎಲ್ಲರ ಹುಬ್ಬರಿಸುವಂತೆ ಮಾಡಿದ್ದಾನೆ. ಇದಕ್ಕಾಗಿ ತನ್ನ ಹೋಂಡಾ ಸಿವಿಕ್ ಕಾರನ್ನು ಬಳಸಿಕೊಂಡು, ಕೇವಲ 12.5 ಲಕ್ಷ ರೂ.ಗಳ ವೆಚ್ಚದಲ್ಲಿ ಲ್ಯಾಂಬೊರ್ಘಿನಿ ಕಾರಾಗಿ ಮಾಡಿಫೈಗೊಳಿಸಿದ್ದಾನೆ.

ಈ ಕಾರಿನ ವಿನ್ಯಾಸವು ಲ್ಯಾಂಬೊರ್ಘಿನಿ ಟೆರ್ಜೊವನ್ನು ಹೋಲುತ್ತದೆ. ಈ ಟೆರ್ಜೊ ವಿನ್ಯಾಸವನ್ನು ತೆಗೆದುಕೊಂಡು ಈಗಾಗಲೇ ತಯಾರಿಸಿದ ಫ್ರೇಮ್‌ಗೆ ಕೂರುವಂತೆ ಅಳವಡಿಸಿ ಒಟ್ಟಾರೆ ಲ್ಯಾಂಬೊರ್ಗಿನಿ ಕಾರಿನಂತೆ ವಿನ್ಯಾಸಗೊಳಿಸಲಾಗಿದೆ. ಕಾರು ಈಗ ರಸ್ತೆಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಗೊತ್ತಿಲ್ಲದ ಜನರು ಖಂಡಿತವಾಗಿಯೂ ಇದು ಲ್ಯಾಂಬೊರ್ಗಿನಿ ಎಂದು ಭಾವಿಸುತ್ತಿದ್ದಾರೆ ಎಂದು ಧವನ್ ಹೇಳಿದ್ದಾನೆ.
ಇದನ್ನು ಪೂರ್ಣಗೊಳಿಸಲು ಅವರಿಗೆ ಕೇವಲ 12.5 ಲಕ್ಷ ರೂ. ವೆಚ್ಚವಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲು 12 ತಿಂಗಳುಗಳ ಸಮಯ ತೆಗೆದುಕೊಳ್ಳಲಾಗಿದೆ. ಈ ಲ್ಯಾಂಬೊರ್ಘಿನಿ ಮೂಲ ಕಾರಿನ ಬೆಲೆಯು ರೂ. 20 ಕೋಟಿಯಿಂದ ರೂ.25 ಕೋಟಿಗಳಾಗಿದೆ. ಈ ಕಾರನ್ನು ಅತ್ಯಂತ ಕಡಿಮೆ ಬೆಲೆಗೆ ತಯಾರಿಸಿದ್ದಾರೆ ಎಂಬ ಅಂಶವೇ ಅನೇಕರನ್ನು ಆಚ್ಚರಿಗೊಳಿಸಿದೆ.
ಈತನ ಹೊಸ ಆಲೋಚನೆ ಅನೇಕರನ್ನು ತಮ್ಮ ಕಾರನ್ನು ಮಾರ್ಪಡಿಸಲು ಪ್ರೋತ್ಸಾಹಿಸುತ್ತಿದೆ. ಆದರೆ ಆರ್‌ಟಿಒ ಅನುಮತಿಯಿಲ್ಲದೆ ಮಾರ್ಪಡಿಸಿದ ಕಾರನ್ನು ಸಾರ್ವಜನಿಕ ರಸ್ತೆಯಲ್ಲಿ ಓಡಿಸುವುದು ಕಾನೂನುಬಾಹಿರವಾಗಿದೆ. ನಾವು ಮಾರ್ಪಡಿಸಿದ ಕಾರನ್ನು ನಮ್ಮ ಸ್ವಂತ ಸ್ಥಳದಲ್ಲಿ ಬಳಸಬಹದು. ಆದರೆ ಯಾವುದೇ ಕಾರಣಕ್ಕೂ ಸಾರ್ವಜನಿಕ ರಸ್ತೆಗಳಲ್ಲಿ ಬಳಸುವಂತಿಲ್ಲ. ಇದಕ್ಕಾಗಿ ಆರ್‌ಟಿಒ ಅನುಮತಿ ಖಂಡಿತ ಇರಲೇಬೇಕು.
ಕಾರಿನ ವಿಶೇಷತೆಗಳು: ಯುಟ್ಯೂಬರ್ ಧವನ್ ತಮ್ಮ ಹೋಂಡಾ ಸಿವಿಕ್ ಕಾರಿನ ಎಂಜಿನ್ ಅನ್ನು ಹೊರತೆಗೆದು, ವಿವಿಧ ಕಾರುಗಳ ಬಿಡಿಭಾಗಗಳನ್ನು ಬಳಸಿಕೊಂಡು ಈ ಕಾರಿನ ಮೂಲ ರಚನೆಯನ್ನು ನಿರ್ಮಿಸಿದ್ದಾರೆ. ಮುಖ್ಯವಾಗಿ ಹ್ಯುಂಡೈ ಸ್ಯಾಂಟ್ರೊ ಕಾರಿನ ಪೆಟ್ರೋಲ್ ಟ್ಯಾಂಕ್ ಅನ್ನು ಇದಕ್ಕೆ ಬಳಸಿರುವುದು ಹಲವರನ್ನು ಅಚ್ಚರಿಗೊಳಿಸಿದೆ.
ಕಾರಿನ ಸಸ್ಪೆಂಷನ್ ವ್ಯವಸ್ಥೆಯನ್ನು ಮಾರುತಿಯ ಆಲ್ಟೋದಿಂದ ತೆಗೆದುಹಾಕಲಾಗಿದೆ. ಎಕ್ಸಾಸ್ಟ್ ಸಿಸ್ಟಮ್‌ಗೆ ಸಂಬಂಧಿಸಿದಂತೆ, ಬೆನೆಲಿ ಬೈಕ್‌ನಿಂದ ಎಕ್ಸಾಸ್ಟ್ ಸಿಸ್ಟಮ್ ಅನ್ನು ತೆಗೆದುಕೊಂಡು ಇದರಲ್ಲಿ ಅಳವಡಿಸಲಾಗಿದೆ. ಕಾರಿಗೆ ಲ್ಯಾಂಬೊರ್ಗಿನಿ ನೋಟವನ್ನು ನೀಡಲು, ಅವರು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಫೈಬರ್ ಗ್ಲಾಸ್ ವಿನ್ಯಾಸವನ್ನು ಸಿದ್ಧಪಡಿಸಿದ್ದರು ಎಂದು ಧವನ್ ಹೇಳಿಕೊಂಡಿದ್ದಾನೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








