ಝಿರೋ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ
ನೀವೆಲ್ಲರೂ ಎರಡು ಚಕ್ರಗಳ ಸ್ವಯಂ ಸಮತೋಲನದ ಬ್ಯಾಟರಿ ನಿಯಂತ್ರಿತ ವಿದ್ಯುತ್ ಚಾಲಿತ ಸೆಗ್ವೇ ವಾಹನಗಳ ಬಗ್ಗೆ ತಿಳಿದಿರಬಹುದು. ಪ್ರಸ್ತುತ ಕೌಶಲ್ಯವು ವೆಸ್ಪಾ ಜತೆಗೂಡಿದರೆ ಹೇಗಿರಬಹುದು?
ಏಕ ಚಕ್ರದ ರಥ - ರೈನೋ ಯುನಿಸೈಕಲ್
ಇಲ್ಲಿದೆ ನೋಡಿ ಇಟಲಿಯ ಪಿಯಾಜಿಯೊ ಬ್ರಾಂಡ್ ಆಗಿರುವ ವೆಸ್ಪಾ ಹಾಗೂ ಸ್ವೆಗ್ವೇ ತಂತ್ರಗಾರಿಕೆಯ ಫಲ ಸ್ವರೂಪ. ಇದುವೇ ಝಿರೋ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ. ಇದನ್ನು ಸ್ಪೇನ್‌ನ ಬೆಲ್ ಆಂಡ್ ಬೆಲ್ ಅಭಿವೃದ್ಧಿಪಡಿಸಿದೆ. ಅಂದ ಹಾಗೆ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವೆಸ್ಪಾ ಸೆಗ್ವೇ ರಸ್ತೆ ಪ್ರವೇಶಿಸಿದರೆ ಅಚ್ಚರಿಪಡಬೇಕಾಗಿಲ್ಲ.

ವಾಹನೋದ್ಯಮ ಸಂಸ್ಥೆಗಳು ಸದಾ ನೂತನ ತಂತ್ರಜ್ಞಾನವನ್ನು ಅವಿಷ್ಕರಿಸುವುದರಲ್ಲಿ ತೊಡಗಿರುವಂತೆಯೇ ವೆಸ್ಪಾ ನೂತನ ಝೀರೋ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸುತ್ತಿದೆ.

ಇದರಲ್ಲಿ ಪ್ರಮುಖವಾಗಿಯೂ ಐಕಾನಿಕ್ ವೆಸ್ಪಾ ವಿನ್ಯಾಸಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಇದು ವಿಚಿತ್ರವಾಗಿ ಅನಿಸಿದರೂ ವಿಶಿಷ್ಟತೆ ಕಾಪಾಡುವಲ್ಲಿ ಯಶ ಕಂಡಿದೆ.

ಪಿಯೊಜಿಯೊದ ನೈಜ ಘಟಕಗಳನ್ನು ಬಳಕೆ ಮಾಡುವ ಮೂಲಕ ಝೀರೋ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಸಲಾಗಿದೆ. ಅಲ್ಲದೆ ನಿರ್ವಹಣೆ ಹಾಗೂ ಲುಕ್ ದೃಷ್ಟಿಕೋನದಲ್ಲಿ ಐಕಾನಿಕ್ ವೆಸ್ಪಾ ಕ್ಲಾಸಿಕ್ ವಿನ್ಯಾಸ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

1.34 ಸಿವಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಪ್ರಸ್ತುತ ಸ್ಕೂಟರ್ ಗಂಟೆಗೆ 20 ಕೀ.ಮೀ ವೇಗದಲ್ಲಿ ಸಂಚರಿಸಲಿದೆ. ಹಾಗೆಯೇ ಬ್ಯಾಟರಿ ಪೂರ್ಣವಾಗಿಯೂ ಚಾರ್ಜ್ ಮಾಡಿಸಿದ್ದಲ್ಲಿ 35 ಕೀ.ಮೀ. ದೂರದ ವರೆಗೂ ಪಯಣಿಸಬಹುದಾಗಿದೆ.

ಉಳಿದಂತೆ ಹೊಂದಾಣಿಸಬಹುದಾದ ಹ್ಯಾಂಡಲ್ ಬಾರ್, 360 ಡಿಗ್ರಿ ತಿರುಗಿಬಲ್ಲ ಸಾಮರ್ಥ್ಯವು ಪ್ರಸ್ತುತ ಸ್ಕೂಟರನ್ನು ಇನ್ನು ಹೆಚ್ಚು ಅಂದವಾಗಿಸಿದೆ.

ಅಂತಿಮವಾಗಿ ದರದ ಬಗ್ಗೆ ಮಾತನಾಡುವುದಾದ್ದಲ್ಲಿ ಈ ಝಿರೋ ಎಲೆಕ್ಟ್ರಿಕ್ ಸ್ಕೂಟರ್ ವೆಸ್ಪಾ ಎರಡು ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.


Click it and Unblock the Notifications








