ಹೊಂಡಾದಿಂದ ಸೂಪರ್ ಬೈಕ್ ಅನಾವರಣ

ಈಗಿರುವ ಹೊಂಡಾ ಮಾಡೆಲ್ ಗಳನ್ನೇ ಮಾರ್ಪಡಿಸಿ 100ಸಿಸಿ ಇರುವ ಹೊಸ ನಮೂನೆಗಳನ್ನು ಜನರಿಗೆ ಪರಿಚಯಿಸುವ ಉದ್ದೇಶ ಹೊಂಡಾ ಹೊಂದಿದೆ. ಹೊಂಡಾ ಕಾರು ತಯಾರಿಕೆ ಇಳಿಮುಖವಾಗಿರುವುದರಿಂದ ಬೈಕ್ ಉತ್ಪಾದನೆಗೆ ಹೆಚ್ಚಿನ ಆಸ್ಥೆ ವಹಿಸಲಿದೆ. CBR1000R ಮತ್ತು CBR1000RR ಎಂಬ ಎರಡು ಮಾದರಿಯ ಸೂಪರ್ ಬೈಕುಗಳನ್ನು ಭಾರತದ ಮಾರುಕಟ್ಟೆಗೆ ಸದ್ಯದಲ್ಲಿಯೇ ತರಲಿದೆ. ಇವುಗಳ ಬೆಲೆ ಕ್ರಮವಾಗಿ 9.5 ಲಕ್ಷ ರು. ಮತ್ತು 12.5 ಲಕ್ಷ ರು.
ಸಿಬಿಆರ್ ಸರಣಿಯ ಬೈಕುಗಳು ಈಗಾಗಲೆ ದ್ವಿಚಕ್ರವಾಹನಗಳು ಚಾಲಕರ ಮನ ಗೆದ್ದಿವೆ. ಇದನ್ನು ಅರಿತಿರುವ ಹೊಂಡಾ ಅದೇ ಸರಣಿಯ ಹೊಸ ಬೈಕುಗಳನ್ನು ಭಾರತೀಯರಿಗೆ ಪರಿಚಯಿಸಲು ಸಜ್ಜಾಗಿದೆ. ಆದರೆ ಮೊದಲ ವರ್ಷದಲ್ಲಿ ಕೇವಲ 100 ಬೈಕುಗಳನ್ನು ಮಾತ್ರ ಮಾರಾಟ ಮಾಡಲು ಹೊಂಡಾ ನಿಶ್ಚಯಿಸಿದೆ. ಈ ಬೈಕುಗಳ ಉತ್ಪಾದನೆಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಹೊಂಡಾ ಕೈಆಡಿಸಿದಂತಾಗುತ್ತದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಹೊಂಡಾ ಕಂಡುಕೊಂಡ ಉಪಾಯವೂ ಹೌದು.


Click it and Unblock the Notifications








