ಹಮಾರ ಬಜಾಜ್ ಸ್ಕೂಟರ್ ಇನ್ನಿಲ್ಲ

By

Rahul Bajaj
ನವದೆಹಲಿ ಡಿ 17 : ಜನಸಾಮಾನ್ಯರ ಪಾಲಿನ 'ಹಮಾರ ಬಜಾಜ್' ಖ್ಯಾತಿಯ ಬಜಾಜ್ ಸ್ಕೂಟರ್ ಉತ್ಪಾದನೆಯನ್ನು ಬರುವ ಮಾರ್ಚ್ ವೇಳೆಗೆ ಸ್ಥಗಿತಗೊಳಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ನಿರ್ದೇಶಕ ರಾಜೀವ್ ಬಜಾಜ್ ಹೇಳಿಕೆ ನೀಡಿದ್ದಾರೆ. ಸ್ಕೂಟರ್ ಉತ್ಪಾದನೆ ಲಾಭಾದಾಯಕವಾಗಿರದೇ ಇರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಬಜಾಜ್ ಸಮೂಹದ ಉನ್ನತ ಹುದ್ದೆಯನ್ನು ಕೆಲವು ವರ್ಷಗಳ ಹಿಂದೆ ವಹಿಸಿಕೊಂಡಿದ್ದ ರಾಜೀವ್, ಭವಿಷ್ಯದಲ್ಲಿ ಬೈಕ್ ಉತ್ಪಾದನೆಗೆ ಗಮನಹರಿಸಲಾಗುವುದು. ಪರಿಹಾರದ ವಿಚಾರದಲ್ಲಿ ಭಾವನೆಗಿಂತ ತಾತ್ವಿಕತೆಗೆ ಒತ್ತುಕೊಡಲುಇಸ್ತಪದುತ್ತೇನೆ . ಲಾಜಿಕ್ಕಿನ ಮ್ಯಾಜಿಕ್ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಆದರೆ ಸಂಸ್ಥೆಯ ಅಧ್ಯಕ್ಷ ರಾಹುಲ್ ಬಜಾಜ್ ಅವರಿಗೆ ಸ್ಕೂಟರ್ ಉತ್ಪಾದನೆ ನಿಲ್ಲಿಸುತ್ತಿರುವ ವಿಷಯ ಅಸಹನೀಯ ನೋವನ್ನುಂಟುಮಾಡಿದೆ. ಮಗ ತೆಗೆದುಕೊಂಡ ನಿರ್ಧಾರಕ್ಕೆ ನನ್ನ ಸಹಮತವಿರಲಿಲ್ಲ. ಏನೋ ಮಾಡಬಾರದ್ದನ್ನು ಮಾಡಿ ಕಂಪೆನಿ ಮತ್ತು ಇತರ ಷೇರುದಾರರಿಗೆ ಆತ ಹಾನಿಉಂಟು ಮಾಡುತ್ತಿದ್ದಾನೆಂದು ನಾನು ಹೇಳುತ್ತಿಲ್ಲ. ಆದರೆ ರಾಜೀವ್ ವಿವರಿಸಿದ್ದನ್ನು ನನಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ.

(ಏಜೆನ್ಸೀಸ್)

More from DriveSpark

Article Published On: Thursday, December 17, 2009, 12:43 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+