ಯುವಕರಲ್ಲಿ ಯಮಹಾ ಕ್ರೇಜ್ ಕಮ್ಮಿಯಾಗಿಲ್ಲ

By * ಮಹೇಶ್ ಮಲ್ನಾಡ್

Yamaha YZR M1
ಯುವಕರಲ್ಲಿ ಬೈಕುಗಳ ಕ್ರೇಜ್ ಹುಟ್ಟು ಹಾಕುವಲ್ಲಿ ತೋರುವ ಜಾಣ್ಮೆಯನ್ನು ಯಮಹಾ ಮೋಟಾರ್ಸ್, ತನ್ನ ಬೈಕುಗಳ ಸಾಮರ್ಥ್ಯ ಹಿಗ್ಗಿಸುವಿಕೆಯಲ್ಲಿ ತೋರುವುದಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಒಳ್ಳೆ ಲುಕ್, ರೋಡ್ ಗ್ರಿಪ್ ಇದ್ದರೂ ಪ್ರತಿ ಲೀಟರ್ ಗೆ ಬೈಕುಗಳು ಎಷ್ಟು ಮೈಲೇಜ್ ಕೊಡುತ್ತದೆ ಎಂದಾಗ ಯಮಹಾ ಹಿಂದಕ್ಕುಳಿಯುತ್ತದೆ. ಆದರೆ, ಇತ್ತೀಚೆಗೆ ತನ್ನ ವಿನ್ಯಾಸದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಂಡಿರುವ ಯಮಹಾ, ನೂತನ ಮಾದರಿಯ ಬೈಕುಗಳನ್ನು ಮಾರುಕಟ್ಟೆಗೆ ತರಲು ಸಿದ್ಧವಾಗಿದೆ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಅಟೋ ಎಕ್ಸ್ ಪೋ 2010 ರಲ್ಲಿ ತನ್ನ ಹೊಸ ಮಾದರಿಗಳನ್ನು ಗ್ರಾಹಕರಿಗೆ ಪರಿಚಯಿಸಿದ ರೀತಿ ಆಕರ್ಷಕವಾಗಿತ್ತು. YZF-R15, Faze ಹಾಗೂ FZ ಸರಣಿಯ ಬೈಕುಗಳು ಅನಾವರಣಗೊಂಡವು.ಇದರಲ್ಲಿ ಕೆಲವೇ ಕೆಲವು ಮಾದರಿಗಳುಳ್ಳ ಬಿಳಿ ಬಣ್ಣ್ದ YZF-R15ಬೈಕುಗಳು ಗಮನ ಸೆಳೆದವು.

ಯಮಹಾ ಇತ್ತೀಚೆಗೆ 150ಸಿಸಿ ಹಾಗೂ ಹೆಚ್ಚಿನ ಸಾಮರ್ಥ್ಯದ ಇಂಜಿನ್ ವುಳ್ಳ ಬೈಕುಗಳ ಮೇಲೆ ಗಮನಹರಿಸಿದೆ.ಇದಲ್ಲದೆ VMAX ,YZR-M1, 500cc TMAX ಮುಂತಾದ ಮೊಟೊ ಗ್ರಾಂಡ್ ಪ್ರಿಕ್ಸ್ ನಲ್ಲಿ ಓಡಿಸಲಾಗುವ ಬೈಕುಗಳು ಕಂಡವು. ಇವುಗಳಲ್ಲಿ ಜಗತ್ತಿನ ವೇಗದ ಸೂಪರ್ ಬೈಕ್ ಸವಾರ ವ್ಯಾಲೆಂಟಿನೊ ರೊಸ್ಸಿ ಬಳಸುವ YZR-M1 ಮಾದರಿ ಬೈಕು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

YZF-R15, Fazer and FZ ಸರಣಿಯ ಬೈಕುಗಳಿಗೆ ಉತ್ತಮ ಬೇಡಿಕೆಯಿದೆ. ಭಾರತದಲ್ಲಿ ಬೇಡಿಕೆಗೆ ಅನುಸಾರವಾಗಿ ಬೈಕುಗಳ ವಿನ್ಯಾಸ , ಸಾಮರ್ಥ್ಯ, ಕಾರ್ಯಕ್ಷಮತೆಯಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಆಟೋ ಎಕ್ಸ್ ಪೋ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಿದೆ. 150 ಸಿಸಿ ಬೈಕುಗಳನ್ನು ಇನ್ನಷ್ಟು ಉತ್ತಮ ವಿನ್ಯಾಸದಲ್ಲಿ ಹೊರತರಲಾಗುವುದು.

ಯಮಹಾ ಬೈಕುಗಳ ರಾಯಭಾರಿಯಾಗಿ ಬಾಲಿವುಡ್ ನಟ ಜಾನ್ ಅಬ್ರಾಹಂ ಅವರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ನಮ್ಮ ಬ್ರಾಂಡ್ ಗೆ ಇರುವ ನಂಬಿಕೆಯನ್ನು ಜಾನ್ ಇನ್ನಷ್ಟು ಸಧೃಢಗೊಳಿಸಿದ್ದಾರೆ. ಯುವಕರಲ್ಲಿ ಯಮಹಾ ಬಗ್ಗೆ ಕ್ರೇಜ್ ಹೆಚ್ಚಾಗಲು ಜಾನ್ ಕಾರಣ ಎಂದರೆ ತಪ್ಪಾಗಲಾರದು. V Max ಬೈಕುಗಳನ್ನು ಅನಾವರಣಗೊಳಿಸಿದ್ದ ಜಾನ್, ಅದರ ಮಾರಾಟ ತಂತ್ರದ ಸಲಹೆಗಾರರಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ ಎಂದು ಯಮಹಾ ಮೋಟಾರ್ಸ್ ನ ಸಿಇಒ(ಭಾರತ) ಯುಕಿಮೈನ್ ತ್ಸುಜಿ ಹೇಳಿದರು.

More from DriveSpark

Article Published On: Wednesday, January 6, 2010, 14:46 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+