ತ್ರೈಮಾಸಿಕ:ಬಜಾಜ್ ಆಟೋ 4 ಪಟ್ಟು ಹೆಚ್ಚು ಲಾಭ

ಆದರೆ ಕಂಪೆನಿ ಹೊಸದಾಗಿ ಬಿಡುಗಡೆ ಮಾಡಿದ 100 ಸಿಸಿ ಯ ಡಿಟಿಎಸ್ ಎಸ್ ಐ ಮತ್ತು ಪಲ್ಸಾರ್ 135 ಬೈಕ್ ಗಳಿಗೆ ಹೆಚ್ಚಿದ ಬೇಡಿಕೆ ಮತ್ತು ಕಂಪೆನಿಯ ಪಂತ್‌ನಗರ ಕಾರ್ಖಾನೆಗೆ ಉತ್ತರಖಾಂಡ ಸರ್ಕಾರ ತೆರಿಗೆ ವಿನಾಯ್ತಿ ನೀಡಿರುವದರಿಂದ ತಜ್ಞರ ಅಂದಾಜಿಗೂ ಮೀರಿ ಲಾಭ ಗಳಿಸಿದೆ. ಕಂಪೆನಿಯ ಆಡಳಿತ ಮಂಡಳಿ ಶೇರುದಾರರಿಗೆ ಶೇ 400 ಡಿವಿಡೆಂಡ್ ನೀಡಲು ನಿರ್ಧರಿಸಿದ್ದು, ಪ್ರತೀ ಶೇರಿಗೆ ರೂ 40 ಸಿಗಲಿದೆ.
ಇದರಿಂದ ಕಂಪೆನಿಗೆ 675ಕೋಟಿ ರೂಪಾಯಿ ಖರ್ಚಾಗಲಿದೆ. ಈ ತ್ರೈಮಾಸಿಕದಲ್ಲಿ ಕಂಪೆನಿ ಒಟ್ಟು 8,08,973 ದ್ವಿ ಮತ್ತು ತ್ರಿ ಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಹಿಂದಿನ ವರ್ಷ ಇದೇ ಅವಧಿಯಲ್ಲಿ 4,40,269 ವಾಹನಗಳನ್ನು ಮಾರಾಟ ಮಾಡಿದ್ದು, ಶೇ. 23 ರಷ್ಟು ಏರಿಕೆ ದಾಖಲಾಗಿದೆ.
ಕಂಪೆನಿಯ ಮಾರಾಟ ಹಿಂದಿನ ವರ್ಷದಲ್ಲಿ 1898 ಕೋಟಿ ರೂಪಾಯಿ ಇದ್ದುದ್ದು ಈ ವರ್ಷ 3290 ಕೋಟಿ ರೂಪಾಯಿಗಳಿಗೇರಿದೆ. ಮುಂದಿನ ತಿಂಗಳುಗಳಲ್ಲಿ ಕಚ್ಚಾ ವಸ್ತು ದರ ಇಳಿಯಲಿದೆ ಎಂದು ಕಂಪೆನಿ ಹೇಳಿದ್ದು, 2010-11 ನೇ ಸಾಲಿನಲ್ಲಿ ಕಂಪೆನಿ 3.6ಲಕ್ಷ ದ್ವಿ ಚಕ್ರ ಮತ್ತು 4 ಲಕ್ಷ ತ್ರಿಚಕ್ರ ವಾಹನ ಮಾರಾಟ ಮಾಡುವ ಗುರಿ ಹೊಂದಿದೆ.


Click it and Unblock the Notifications








