ಎನ್ ಫೀಲ್ಡ್ ಗೆ ವಾರ್ಷಿಕ ಲಕ್ಷ ಬುಲೆಟ್ ಉತ್ಪಾದನೆ ಗುರಿ

Royal Enfiel to produce 1 lakh Bullets per annum
ಚೆನ್ನೈ, ಆ.18: ರಾಯಲ್ ಎನ್ ಫೀಲ್ಡ್ ಗೆ ಇತ್ತೀಚೆಗೆ ಭಾರಿ ಬೇಡಿಕೆ ಹುಟ್ಟಿಕೊಂಡಿದ್ದು, ಚೆನ್ನೈನಲ್ಲಿರುವ ಬುಲೆಟ್ ಬೈಕ್ ತಯಾರಿಕಾ ಘಟಕ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವತ್ತ ಹೆಜ್ಜೆ ಹಾಕಿದೆ.

ವಾರ್ಷಿಕವಾಗಿ ಸುಮಾರು ಒಂದು ಲಕ್ಷ ಎನ್ ಫೀಲ್ಡ್ ಬೈಕ್ ಗಳನ್ನು ತಯಾರಿಸುವ ಗುರಿ ಹೊಂದಿದ್ದು, ಸುಮಾರು 80 ಕೋಟಿ ರು ಬಂಡವಾಳವನ್ನು ಹಂತ ಹಂತವಾಗಿ ಹೂಡಲು ರಾಯಲ್ ಎನ್ ಫೀಲ್ಡ್ ನಿರ್ಧರಿಸಿದೆ.

2007-08ರಲ್ಲಿ ವಾರ್ಷಿಕವಾಗಿ 28,000 ವಾಹನಗಳನ್ನು ಉತ್ಪಾದಿಸುತ್ತಿದ್ದ ರಾಯಲ್ ಎನ್ ಫೀಲ್ಡ್, 2009ರಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ 52,000 ವಾಹನಗಳನ್ನು ಹೊರಬಿಟ್ಟಿತ್ತು. ಪ್ರಸಕ್ತ ವರ್ಷದಲ್ಲಿ 60,000 ವಾಹನಗಳನ್ನು ಹೊರತರಲಿದೆ. ರಾಯಲ್ ಎನ್ ಫೀಲ್ಡ್ ನ ಬುಲೆಟ್ ಬೈಕುಗಳಿಗೆ ಸ್ಥಳೀಯ ಗ್ರಾಹಕರಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಾಗಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮುಂದಿನ ಮೂರು ವರ್ಷಕ್ಕೆ ಹೊಂದುವಂತೆ ಉತ್ಪಾದನೆ, ಮಾರಾಟ ಹಾಗೂ ಮಾರುಕಟ್ಟೆ ವಿಸ್ತರಣೆ ಯೋಜನೆಯನ್ನು ರಾಯಲ್ ಎನ್ ಫೀಲ್ಡ್ ತಯಾರಿಸಿದ್ದು, ಸರಿಯಾಗಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಎಲ್ಲಾ ಭರವಸೆಯನ್ನು ಇಟ್ಟುಕೊಂಡಿದೆ.

ನವಿ ಮುಂಬಯಿಯಲ್ಲಿ ಕಂಪೆನಿಯ 11ನೇ ಬ್ರ್ಯಾಂಡ್ ಷೋರೂಂ ಮಳಿಗೆಯನ್ನು ಆರಂಭಿಸಿ ಮಾತನಾಡಿದ ರಾಯಲ್ ಎನ್ ಫೀಲ್ಡ್ ನ ಮಾರ್ಕೆಂಟಿಂಗ್ ಹಾಗೂ ಸೇಲ್ಸ್ ಮುಖ್ಯಸ್ಥ ಷಾಜಿ ಕೋಷಿ, ಉತ್ಪಾದನಾ ಸಾಮರ್ಥ್ಯವನ್ನು ಹಿಗ್ಗಿಸಲು ಹೆಚ್ಚಳ ಬಂಡವಾಳ ಹೂಡಲಾಗುವುದು. ಬೇಡಿಕೆಗೆ ತಕ್ಕಂತೆ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಎಂದರು.

More from DriveSpark

Article Published On: Wednesday, August 18, 2010, 12:38 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+