ಮಹೀಂದ್ರಾದಿಂದ ಆಕರ್ಷಕ ಹೊಸ ಬೈಕುಗಳು

ಮೂಲಗಳ ಪ್ರಕಾರ ಸದ್ಯಕ್ಕೆ ಒಂದು300 ಸಿಸಿಯ ಸೂಪರ್ ಬೈಕ್ ಹಾಗೂ 125 ಸಿಸಿಯ ಬೈಕ್ ಅನ್ನು ಅನಾವರಣಗೊಳಿಸಲು ಮಹೀಂದ್ರಾ ಸಜ್ಜಾಗಿದೆ. ಡಿಯಬ್ಲೊ ಬೈಕಿಗೆ 300 ಸಿಸಿಯ ದ್ರವೀಕೃತ ಇಂಧನಯುಕ್ತ ಇಂಜೀನ್ ಇದ್ದು, 25bhp ಶಕ್ತಿ ಹೊಂದಿದೆ.
ಈ ಬೈಕಿನ ಬೆಲೆ ಸುಮಾರು ರು. 1,50,000/. ಎಲ್ಲಾ ಸೂಪರ್ ಬೈಕ್ ಗಳ ಆಕರ್ಷಣೆಯನ್ನು ಡಿಯಾಬ್ಲೋ ಹೊಂದಿದ್ದು, 6 ಸ್ಪೀಡ್ ಗೇರ್ ಇದ್ದು, 30 ರಿಂದ 35 ಕಿ.ಮೀ/ಪ್ರತಿ ಲೀಟರ್ ಗೆ ನೀಡಲಿದೆ. ಮುಂಬದಿ ಹಾಗೂ ಹಿಂಬದಿಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಎರಕಪ್ಪು, ನೀಲಿ, ಬೆಳ್ಳಿ, ಹಳದಿ ಹಾಗೂ ಬೂದು ಬಣ್ಣದಲ್ಲಿ ಈ ಬೈಕ್ ಲಭ್ಯವಿದೆ.
ಚೆವಲೋ 125 ಸಿಸಿ ಇಂಜಿನ್ ಸಾಮರ್ಥ್ಯ ಹಾಗೂ 15bhp ಪವರ್ ಹೊಂದಿದೆ. ಈ ಬೈಕಿನ ಬೆಲೆ ರು .60,000 ಇರಬಹುದು ಎಂದು ನಿರೀಕ್ಷಿಸಲಾಗಿದೆ. 'tested in Italy, coming to India'. ಎಂಬ ಅಡಿಬರಹದೊಂದಿಗೆ ಬೈಕ್ ಜಾಥಾವನ್ನು ಹಮ್ಮಿಕೊಂಡಿರುವ ಮಹೀಂದ್ರಾ, ಸುಮಾರು 20 ಜನ ಬೈಕ್ ಸವಾರರನ್ನು ಆಯ್ಕೆ ಮಾಡಿ ಐದು ವಿವಿಧ ಹಾದಿಗಳಲ್ಲಿ ದೇಶದ ತುಂಬಾ ಸಂಚರಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಮಾಸ್ ಹಾಗೂ ಕ್ಲಾಸ್ ಶ್ರೇಣಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಮಹೀಂದ್ರಾ ಕಾಲಿಟ್ಟಿದೆ.
\


Click it and Unblock the Notifications








