ಯಮಹಾ 998ಸಿಸಿ FZ1 ಸೂಪರ್ ಬೈಕ್ ಗುರೂ!

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ಬಗೆ ವಿನ್ಯಾಸ ಹಾಗೂ ಸಾಮರ್ಥ್ಯದಲ್ಲಿ ಆಗುವ ಹೊಸ ಬದಲಾವಣೆಗಳ ಮೇಲೆ ಭಾರತೀಯ ಗ್ರಾಹಕರು ಸದಾ ಕಣ್ಣಿಟ್ಟಿರುತ್ತಾರೆ. ಗ್ರಾಹಕರ ಜೀವನಶೈಲಿಗೆ ಹೊಂದುವಂತ ವಿನ್ಯಾಸವುಳ್ಳ ಬೈಕುಗಳನ್ನು ರೂಪಿಸುವತ್ತ ಸಂಸ್ಥೆ ಹೆಜ್ಜೆ ಇರಿಸಿದೆ ಎಂದು ಯಮಹಾ ಸಂಸ್ಥೆ ಸಿಇಒ ಹೇಳಿದ್ದಾರೆ.
ಈಗಾಗಲೆ ವಿಮ್ಯಾಕ್ಸ್, MT01 ಹಾಗೂ YZF-R1 ಉನ್ನತ ಶ್ರೇಣಿಯಲ್ಲಿ ಬೇಡಿಕೆ ಉಳಿಸಿಕೊಂಡಿರುವುದು ಕಂಪೆನಿಗೆ ಖುಷಿಕೊಟ್ಟಿದೆ. ಸೂರಜ್ ಪುರ ಹಾಗೂ ಫರಿದಾಬಾದ್ ನ ಘಟಕದಿಂದ ಹೊರ ಬೀಳುವ ವಾಹನಗಳು ಸ್ಥಳೀಯ ಮಾರುಕಟ್ಟೆಯಲ್ಲದೆ ರಫ್ತು ಕ್ಷೇತ್ರವನ್ನು ಆಕ್ರಮಿಸುತ್ತಿವೆ. ಇದಲ್ಲದೆ, ಸ್ಕೂಟರ್ ಕ್ಷೇತ್ರಕ್ಕೂ ಕಾಲಿರಿಸಲು ಯಮಹಾ ಚಿಂತನೆ ನಡೆಸಿದೆ.


Click it and Unblock the Notifications








