ದಿನದ ಬೈಕ್: ಸಿಬಿ ಟ್ವಿಸ್ಟರ್, ಟ್ವಿಟ್ಟರ್ ನಷ್ಟೇ ಫೇಮಸ್ಸು

C B Twister
ಇದು ಹೋಂಡಾ ಫ್ಯಾಮಿಲಿಯ ಆಕರ್ಷಕ ಬೈಕ್. ಗುಣಮಟ್ಟದ ಸವಾರಿಗೆ, ಇಂಧನ ದಕ್ಷತೆಗಂತೂ ಇದರಲ್ಲಿ ರಾಜಿ ಇಲ್ಲ. 109ಸಿಸಿಯ ಸಿಬಿ ಟ್ವಿಸ್ಟರ್ ದೇಶದ ಕಮ್ಯೂಟರ್ ಬೈಕ್ ಮಾರುಕಟ್ಟೆಗೆ ಲಗ್ಗೆಯಿಟ್ಟು ವರ್ಷವಾಗುತ್ತ ಬಂದಿದೆ. ಇದರ ಸ್ಟೈಲ್, ಆಕರ್ಷಕ ಲುಕ್, ಅಲಾಯ್ ವೀಲ್, ಮೆಟಾಲಿಕ್ ಪೈಂಟ್, ಸುಂದರ ಹೆಡ್ ಲೈಟ್ ನಿಂದಾಗಿ ಟ್ವಿಸ್ಟರ್ ಹೆಚ್ಚು ಇಷ್ಟವಾಗುತ್ತದೆ.

ಟ್ವಿಸ್ಟರ್ 109 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು 8 ಸಾವಿರ ಆರ್ ಪಿಎಂಗೆ 9 ಹಾರ್ಸ್ ಪವರ್ ನೀಡುತ್ತದೆ. ಇದರಲ್ಲಿ ಪ್ರತಿಗಂಟೆಗೆ ಗರಿಷ್ಠ 60ರ ವೇಗದಲ್ಲಿ ಹೋಗುವ ಮಜಾನೇ ಬೇರೆ. ಇದರ ಮೈಲೇಜ್ ಕೂಡ ಇಷ್ಟವಾಗುವಂತಿದೆ. ನಗರದ ರಸ್ತೆಯಲ್ಲಿ ಪ್ರತಿಲೀಟರ್ ಗೆ ಸುಮಾರು 57.2 ಕಿ.ಮೀ. ಮೈಲೇಜ್ ನೀಡುತ್ತದೆ. ಹೆದ್ದಾರಿಗಳಲ್ಲಿ ಪ್ರತಿಲೀಟರ್ ಇಂಧನಕ್ಕೆ 61.3 ಕಿ.ಮೀ. ಮೈಲೇಜ್ ನೀಡುತ್ತದೆ.

ಬಜಾಜ್ ಡಿಸ್ಕವರ್ ಡಿಟಿಎಸ್-ಐ 100, ಹೀರೋ ಹೋಂಡಾ ಸ್ಪ್ಲೆಂಡರ್ ಎನ್ ಎಕ್ಸ್ ಜಿ ಬೈಕ್ ಗಳು ಟ್ವಿಸ್ಟರ್ ಗೆ ಪರ್ಯಾಯವಾಗಿರುವ ಇತರ ಮಾಡೆಲ್ ಗಳಾಗಿವೆ. ಟ್ವಿಟ್ಟರ್ ತೂಕ ಕೇವಲ 108 ಕೆ.ಜಿ. ಇಂಧನ ಟ್ಯಾಂಕ್ ಸಾಮರ್ಥ್ಯ 8 ಲೀಟರ್.

ಬೆಂಗಳೂರು ದರ: ಸಿಬಿ ಟ್ವಿಸ್ಟರ್ ಕಿಕ್ ಡ್ರಮ್ ಅಲಾಯ್ ಎಕ್ಸ್ ಶೋ ರೂಂ ದರ: 45,340 ರೂ. ಆನ್ ರೋಡ್ ದರ: 51,552 ರೂ. ಸೆಲ್ಫ್ ಡಿಸ್ಕ್ ಅಲಾಯ್ ಮಾಡೆಲ್: ಎಕ್ಸ್ ಶೋರೂಂ ದರ 51,260 ರೂ. ಆನ್ ರೋಡ್ ದರ: 59,314 ರೂ. ಸೆಲ್ಫ್ ಡ್ರಮ್ ಅಲಾಯ್: ಎಕ್ಸ್ ಶೋರೂಂ ದರ: 48,177 ರೂ., ಆನ್ ರೋಡ್ ದರ: 54,730 ರೂ.

More from DriveSpark

Article Published On: Wednesday, February 16, 2011, 12:56 [IST]
English summary
The 109cc CB Twister, a commuter bike that looks like no other Indian commuter bike. CB Twister's four-stroke 109cc single-cylinder engine produces 9 bhp at 8000 rpm. Bangalore Show room price Rs 45,340 to Rs 59,314.
Read more on ಬೈಕ್ bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+