ಇನ್ನೂ ಆಕ್ಟಿವ್ ಆಗಿದೇರಿ ಹೋಂಡಾ ಆಕ್ಟಿವಾ

Honda Activa
ಸುಮ್ಮನೆ ಒಮ್ಮೆ ರಸ್ತೆಯಲ್ಲಿ ಕಣ್ಣಾಡಿಸಿದರೂ ಸಾಕು. ಯುವಕರು, ಯುವತಿಯರು, ಮಹಿಳೆಯರು, ವೃದ್ಧರು ಎಲ್ಲರೂ ಆಕ್ಟಿವಾ ಡ್ರೈವ್ ಮಾಡುತ್ತಿರುವುದು ಕಣ್ಣಿಗೆ ಬೀಳುತ್ತದೆ. ಇದು ಹೆಚ್ಚಿನವರ ಇಷ್ಟದ ಆಯ್ಕೆ. ಹೋಂಡಾ ಫ್ಯಾಮಿಲಿಯ ಸ್ಕೂಟರೇಟ್ ಗಳಲ್ಲಿ ಇನ್ನೂ ಆಕ್ಟಿವ್ ಆಗಿರೋದು ಆಕ್ಟಿವಾ. ಕಂಪನಿಯ ಡಿಯೋ ಮತ್ತು ಏವಿಯೇಟರ್ ಗಳಿಗೆ ಹೋಲಿಸಿದರೂ ಇದು ಹೆಚ್ಚು ಫೇಮಸ್.

ಆಕ್ಟಿವಾ ರಸ್ತೆಗಿಳಿದು ಕೆಲವು ವರ್ಷಗಳೇ ಕಳೆದಿವೆ. ಆದರೆ ಯಾರಿಗೂ ಆಕ್ಟಿವಾ ರೈಡ್ ಬೋರ್ ಹೊಡೆಸಿಲ್ಲ. ಈ ಬ್ರಾಂಡ್ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಅಚ್ಚುಮೆಚ್ಚು. ರಸ್ತೆಯಲ್ಲಿ ಎಣಿಸಹೋದರೆ ಸ್ಕೂಟರೇಟ್ ಗಳಲ್ಲಿ ಆಕ್ಟಿವಾವೇ ಹೆಚ್ಚು ಕಾಣುತ್ತದೆ. ಇದು ಇದರ ಜನಪ್ರಿಯತೆಗೆ ಸಾಕ್ಷಿ. ಆಕ್ಟಿವಾ ಮಾಸ್ ಗೆ ಬಾಸ್!

ಮಾರಾಟದಲ್ಲಿ ಮುಂದಿದ್ದರೂ ಮೈಲೇಜ್ ವಿಷಯದಲ್ಲಿ ಆಕ್ಟಿವಾ ಹಿಂದಿದೆ. ಆಕ್ಟಿವಾ 102 ಸಿಸಿ ಎಂಜಿನ್ ಹೊಂದಿದ್ದು ವಿಮ್ಯಾಟಿಕ್ 4 ಸ್ಪೀಡ್ ಟ್ರಾನ್ಸ್ ಮಿಷನ್ ಹೊಂದಿದೆ. ಇದು ಸುಮಾರು 7 ಹಾರ್ಸ್ ಪವರ್ ನೀಡುತ್ತದೆ.ಇದು ನಗರಗಳಲ್ಲಿ ಪ್ರತಿಲೀಟರ್ ಗೆ 40 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ ಪ್ರತಿಲೀಟರ್ ಗೆ 45 ಕಿ.ಮೀ. ಮೈಲೇಜ್ ನೀಡುತ್ತದೆ. ಆಕ್ಟಿವಾ ಹೊಸ ಡಿಎಲ್ ಎಕ್ಸ್ ಆವೃತ್ತಿಯಲ್ಲೂ ದೊರಕುತ್ತದೆ.

ಹಗುರ ವಾಹನ ಬಯಸುವ ಸುಂದರಿಯರಿಗೆ(ಕೆಲವು ಸುಂದರರಿಗೂ) ಇದು ಸೂಟ್ ಆಗೋಲ್ಲ. ಯಾಕೆಂದರೆ ಇದರ ತೂಕ 110 ಕೆ.ಜಿ. ಇದೆ. ಅಂದ್ರೆ ಬೈಕ್ ತೂಕಕ್ಕೆ ಸಮೀಪವೇ ಇದೆ. ಆದರೆ ಸುರಕ್ಷಿತ ರೈಡ್ ಬಯಸುವರಿಗೆ ತೂಕ ಹೆಚ್ಚಿದ್ದರೆ ಸಮಸ್ಯೆಯಿಲ್ಲ. ಸುರಕ್ಷತೆಯೊಂದಿಗೆ ಇದರ ಕಂಫರ್ಟ್ ಡ್ರೈವಿಂಗ್ ಹೆಚ್ಚಿನವರಿಗೆ ಇಷ್ಟ. ಏವಿಯೇಟರ್ ತೂಕ 102 ಕೆ.ಜಿ. ಇದ್ದರೆ, ಡಿಯೋ ಸುಮಾರು 99 ಕೆ.ಜಿ. ಇದೆ.

ಆಕ್ಟಿವಾ 6 ಲೀಟರ್ ನ ಇಂಧನ ಟ್ಯಾಂಕ್ ಹೊಂದಿದೆ. ಒಮ್ಮೆ ಫುಲ್ ಟ್ಯಾಂಕ್ ತುಂಬಿಸಿಬಿಟ್ಟರೆ ಹೆದ್ದಾರಿಗಳಲ್ಲಿ ಸುಮಾರು 240 ಕಿ.ಮೀ. ದೂರವನ್ನು ಯಾವುದೇ ವರಿ ಮಾಡದೇ ಸಾಗಬಹುದು. ಇದರ ತೂಕ ಕೆಲವರಿಗೆ ಜಾಸ್ತಿ ಅನಿಸಬಹುದು. ಇದು 110 ಕೆ.ಜಿ ತೂಕವಿದೆ. ಆದರೆ ತೂಕ ಹೆಚ್ಚಿರುವ ಸ್ಕೂಟಿ ಹೆಚ್ಚು ಸುರಕ್ಷತೆ ಒದಗಿಸುತ್ತದೆ.

ನೋ ಗೇರ್, ನೋಕ್ಲಚ್, ಸೆಲ್ಫ್ ಸ್ಟ್ರಾಟ್ ಮೂಲಕ ಯಾವುದೇ ಟ್ರಾಫಿಕ್ ನಲ್ಲೂ ನಿಶ್ಚಿಂತೆಯಿಂದ ಪ್ರಯಾಣಿಸಬಹುದಾಗಿದೆ. ಹೋಂಡಾ ಆಕ್ಟಿವಾಕ್ಕೆ ಬೆಂಗಳೂರು ಶೋರೂಂನಲ್ಲಿ 45,170 ರೂ. ಇದೆ. ಆನ್ ರೋಡ್ ದರ ಸುಮಾರು 51,361 ರೂ.

More from DriveSpark

Article Published On: Friday, February 18, 2011, 12:36 [IST]
English summary
Compact and stylish look of the Honda Activa made it a grand success. Both men and women customers liked it very much. Honda Activa Bangalore Ex Showroom Price is Rs.45,170.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+