ಹೀರೋ ಹೋಂಡಾ ಕರಿಜ್ಮಾದ ಹೊಸ ಗಾನ ಬಜಾನ

ನೂತನ ಕರಿಜ್ಮಾದಲ್ಲಿ ಹಳೆಯ 223ಸಿಸಿ ಎಂಜಿನ್ ಮುಂದುವರೆದಿದೆ. ಇದರಲ್ಲಿ ಪ್ರತಿಗಂಟೆಗೆ ಗರಿಷ್ಠ 126 ಕಿ.ಮೀ. ಸಾಗಬಹುದು ಎಂದು ಕಂಪನಿ ಪ್ರತಿಪಾದಿಸಿದೆ. ಆದರೆ ಪಲ್ಸರ್ ಗೆ ಹೋಲಿಸಿದರೆ ಇದು ತುಸು ಕಡಿಮೆ. ಯಾಕೆಂದರೆ ಪಲ್ಸರ್ 220 ಬೈಕ್ ಪ್ರತಿಗಂಟೆಗೆ ಗರಿಷ್ಠ 144 ಕಿ.ಮೀ. ಸಾಗುತ್ತದೆ. ಕರಿಜ್ಮಾ ಆರ್ ಎಂಬುದು ಟೂರಿಂಗ್ ಬೈಕಾಗಿ ಹೆಚ್ಚು ಜನಪ್ರಿಯವಾಗಿದೆ.
ನೂತನ ಕರಿಜ್ಮಾ ಹೊಸ ಟಿಪ್ಪಣಿಗಳು
* ಗ್ರಾಫಿಕ್ಸ್ ಮರುವಿನ್ಯಾಸ
* ಕ್ಲೀಯರ್ ಲೆನ್ಸ್ ಇಂಡಿಕೇಟರ್ ಗಳು
* ಕಪ್ಪು ಬಣ್ಣದ ಅಲಾಯ್ ಫೂಟ್ ಪೆಗ್
* ಕಪ್ಪು ಬಣ್ಣದ ಚೈನ್ ಕವರ್, ಹಿಂದಿನ ಸ್ವಿಂಗ್ ಆರ್ಮ್, ಫ್ರಂಟ್ ಡಿಸ್ಕ್ ಬ್ರೇಕ್ ನ ರೂಟರ್ ಎಲ್ಲವೂ ಕಪ್ಪು ಬಣ್ಣದಲ್ಲಿ ಬಂದಿದೆ.
* ಇಂಧನ ಟ್ಯಾಂಕ್ ಕ್ಯಾಪ್ ಬಣ್ಣ ಕೂಡ ಕಪ್ಪಾಗಿದೆ.
* ಆದರೆ ಸ್ಪಾರ್ಕ್ ಪ್ಲಗ್ ಕ್ಯಾಪ್ ಮಾತ್ರ ಕೆಂಪು ಬಣ್ಣದಲ್ಲಿದೆ.
* ಹೊಸ ಎಂಜಿನ್ ರಿಫ್ಲೆಕ್ಟರ್ ಅಳವಡಿಸಲಾಗಿದೆ.
* ಹೊಸ ಸ್ಪೀಡೊಮೀಟರ್ ಡಯಲ್ ಬ್ಯಾಕ್ ಗ್ರೌಂಡ್
* ಬೆಂಗಳೂರು ಆನ್ ರೋಡ್ ದರ ಸುಮಾರು 83,218 ರೂಪಾಯಿ
ಹೀರೋ ಹೋಂಡಾ ಕರಿಜ್ಮಾ ಝಡ್ಎಂಆರ್ ಹಳೆ ಟಿಪ್ಪಣಿ
* 223 ಸಿಸಿ, 4 ಸ್ಟ್ರೋಕ್, ಪಿಜಿಎಂ-ಎಫ್ಐ ಎಂಜಿನ್
* 5 ಸ್ಪೀಡ್ ಟ್ರಾನ್ಸ್ ಮಿಷನ್
* ಎದುರು ಮತ್ತು ಹಿಂದಿನ ಡಿಸ್ಕ್ ಬ್ರೇಕ್
* ಇಂಧನ ಟ್ಯಾಂಕ್ ಸಾಮರ್ಥ್ಯ: 16 ಲೀಟರ್, ರಿಸರ್ವ್ 2 ಲೀಟರ್
* ಭಾರ-159 ಕೆಜಿ


Click it and Unblock the Notifications