ಡಿಸ್ಕವರ್ 125 ಸಿಸಿ ನೆರವಿನಿಂದ ಬಜಾಜ್ ಹೊಸ ದಾಖಲೆ

ಇತ್ತೀಚಿನ ಟ್ರೆಂಡ್ ಎಂಬಂತೆ ಹೀರೋ ಹೋಂಡಾ, ಬಜಾಜ್ ಮತ್ತು ಟಿವಿಎಸ್ ನಂತಹ ಕಂಪನಿಗಳು 100 ಸಿಸಿ ಬೈಕ್ ನತ್ತ ಹೆಚ್ಚು ಗಮನ ಹರಿಸುತ್ತಿವೆ. ಇದರಲ್ಲಿ ಹೀರೋ ಹೋಂಡಾ ಅಗ್ರಸ್ಥಾನದಲ್ಲಿದ್ದು ನಂತರದ ಸ್ಥಾನದಲ್ಲಿ ಬಜಾಜ್ ಆಟೋ ರೈಡ್ ಮಾಡುತ್ತಿದೆ. ಮಾರುಕಟ್ಟೆ ಬೇಡಿಕೆಗೆ ಸೂಕ್ತವಾಗಿ ಸ್ಪಂಧಿಸಲು ಕಂಪನಿಯು ಮುಂದಿನ ತಿಂಗಳು ನ್ಯೂ ಡಿಸ್ಕವರ್ 125 ಸಿಸಿ ಬೈಕ್ ಹೊರತರಲಿದೆ ಎಂದು ಮೂಲಗಳು ತಿಳಿಸಿವೆ.
ಬಜಾಜ್ ಡಿಸ್ಕವರ್ 100 ಮತ್ತು ಹೀರೋ ಹೋಂಡಾ 100ಸಿಸಿ ಬೈಕ್ ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಡಿಸ್ಕವರ್ 125 ಸಿಸಿ ಬೈಕ್ ಹೊರತರಲಿದೆ. ಕಡಿಮೆ ಮೈಲೇಜ್ ಮತ್ತು ಅಧಿಕ ನಿರ್ವಹಣಾ ವೆಚ್ಚದಿಂದ ಪಾರಾಗಲೂ ಬಯಸುವ ಗ್ರಾಹಕರಿಗೆ ನೂತನ ಬೈಕ್ ಸಮರ್ಥ ಆಯ್ಕೆಯಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಡಿಸ್ಕವರ್ ಬಜಾಜ್ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 7 ಸಾವಿರ ಕೋಟಿ ರೂ. ಮೌಲ್ಯದ ಷೇರು ಹೊಂದಿರಲಿದೆ. ಒಂದಿಷ್ಟು ಜಾಸ್ತಿ ಮೈಲೇಜ್ ನೆರವಿನಿಂದ ಗ್ರಾಹಕರನ್ನು ಸೆಳೆಯುವ ಯತ್ನದಲ್ಲಿ ಕಂಪನಿಯಿದೆ. ನೂತನ ಡಿಸ್ಕವರ್ 125 ಸಿಸಿಯ ಡ್ರಮ್ ಬ್ರೇಕ್ ಆವೃತ್ತಿಗೆ ಸುಮಾರು 44 ಸಾವಿರ ರೂ. ಇರಲಿದೆ. ಡಿಸ್ಕ್ ಬ್ರೇಕ್ ಆವೃತ್ತಿಗೆ ಸುಮಾರು 47 ಸಾವಿರ ರೂ. ಇರುವ ನಿರೀಕ್ಷೆಯಿದೆ.


Click it and Unblock the Notifications