ಹೋಂಡಾದಲ್ಲಿ ಒಂದುವರೆ ಸಾವಿರ ಉದ್ಯೋಗವಕಾಶ!!

ರಾಜಸ್ತಾನ ಘಟಕದಲ್ಲಿ ನಾವು ಶೀಘ್ರದಲ್ಲಿ ಉತ್ಪಾದನೆ ಆರಂಭಿಸಲಿದ್ದೇವೆ. ಇದು ವಾರ್ಷಿಕ 6 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಇದಕ್ಕಾಗಿ ಪೂರ್ಣಾವಧಿ ಮತ್ತು ಗುತ್ತಿಗೆ ಆಧಾರದಲ್ಲಿ ಸುಮಾರು 1,500 ಸಿಬ್ಬಂದಿಗಳನ್ನು ನೇಮಕಾತಿ ಮಾಡಲು ಯೋಜಿಸಿದ್ದೇವೆ" ಎಂದು ಎಚ್ಎಂಎಸ್ಐ ಅಧ್ಯಕ್ಷ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಶಿಂಜಿ ಆಯೊಮಾ ಹೇಳಿದ್ದಾರೆ.
ರಾಜಸ್ತಾನದ ತಪುಕಾರ ಘಟಕಕ್ಕೆ ಕಂಪನಿಯು ಸುಮಾರು 600 ಕೋಟಿ ರೂ. ಹೂಡಿಕೆ ಮಾಡಿದೆ. ಈ ಘಟಕದ ಒಟ್ಟಾರೆ ಉತ್ಪಾದನೆಯನ್ನು 12 ಲಕ್ಷ ಯೂನಿಟ್ ಗೆ ತಲುಪಿಸುವ ಯೋಜನೆಯೂ ಕಂಪನಿಗಿದ್ದು, ಅದಕ್ಕಾಗಿ ಸುಮಾರು ಒಂದು ಸಾವಿರ ಕೋಟಿ ರೂ. ಹೂಡಿಕೆಯ ಅಗತ್ಯವಿದೆ ಎಂದರು. ಕಂಪನಿಯು ಈಗ ಮಾನೆಸರ್ ನಲ್ಲಿ ಘಟಕವನ್ನು ಹೊಂದಿದ್ದು, ಅಲ್ಲಿ ವಾರ್ಷಿಕವಾಗಿ ಸುಮಾರು 16 ಲಕ್ಷ ವಾಹನ ಉತ್ಪಾದಿಸಲಾಗುತ್ತಿದೆ. ಅಲ್ಲಿ ಸುಮಾರು 7 ಸಾವಿರ ಸಿಬ್ಬಂದಿಗಳಿದ್ದಾರೆಂದು ಅಯೊಮಾ ಹೇಳಿದ್ದಾರೆ.


Click it and Unblock the Notifications