ಜುಲೈನಲ್ಲಿ ರಸ್ತೆಗಿಳಿಯಲಿದೆ ಹೊಸ ಬಜಾಜ್ ಬಾಕ್ಸರ್

ಬಜಾಜ್ ಬಾಕ್ಸರ್ ಈ ಹಿಂದೆ ಪ್ಲಾಗ್ ಷಿಪ್ ಮಾದರಿಯಾಗಿದ್ದು 1997ರಲ್ಲಿ ರಸ್ತೆಗಿಳಿದಿತ್ತು. ಇದರ ಕಾರ್ಯಕ್ಷಮತೆ ಇತ್ಯಾದಿಗಳ ಕುರಿತು ಮಾರುಕಟ್ಟೆಯಲ್ಲಿ ಅತ್ಯಧಿಕ ನಿರೀಕ್ಷೆಯಿತ್ತು. ಆದರೆ ಸ್ವಲ್ಪ ಸಮಯದಲ್ಲಿ ಬಾಕ್ಸರ್ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಈಗ ಕಂಪನಿಯು ಹಳೆಯ ಬಾಕ್ಸರ್ ಬೈಕನ್ನು ಮತ್ತೆ ಹೊರತರಲು ನಿರ್ಧರಿಸಿದೆ.
ನೂತನ ಬಜಾಜ್ ಬಾಕ್ಸರ್ 4 ಸ್ಟ್ರೋಕ್, ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್ಡ್ ನ 125 ಸಿಸಿ ಎಂಜಿನ್ ಹೊಂದಿರಲಿದೆ. ಇದು ಅತ್ಯುತ್ತಮ ರೈಡಿಂಗ್ ಪವರ್ ಮತ್ತು ಟಾರ್ಕ್ ಪವರ್ ನೀಡಲಿದೆ. ನೂತನ ಬಾಕ್ಸರ್ ಬೈಕ್ ತನ್ನ ಪ್ರತಿಸ್ಪರ್ಧಿಗಳಾದ ಹೀರೋ ಹೋಂಡಾ ಸೂಪರ್ ಸ್ಪ್ಲೆಂಡರ್, ಹೋಂಡಾ ಶೈನ್, ಯಮಾಹಾ ವೈಬಿಆರ್ 125 ಮತ್ತು ಸುಜುಕಿ ಸ್ಲಿಂಗ್ ಶಾಟ್ ಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.


Click it and Unblock the Notifications








