ಬಜಾಜ್ ಡಿಸ್ಕವರ್ 125 ಸಿಸಿ: ಪವರ್ ಮತ್ತು ಮೈಲೇಜ್ ಬೈಕ್

Bajaj Discover 125 cc Variant
ತನ್ನ ಜನಪ್ರಿಯ ಬೈಕ್ ಬ್ರಾಂಡ್ "ಡಿಸ್ಕವರ್" ನ 125 ಸಿಸಿ ಆವೃತ್ತಿಯನ್ನು ಬಜಾಜ್ ಆಟೋ ಹೊರತಂದಿದೆ. ನೂತನ ಡಿಸ್ಕವರ್ 125 ಸಿಸಿ ಬೈಕ್ ದರ( ದೆಹಲಿ ಎಕ್ಸ್ ಶೋರೂಂ) ಸುಮಾರು 45,500 ರೂ. ಆಗಿದೆ. ನೂತನ ಕಮ್ಯೂಟರ್ ಬೈಕ್ ನೆರವಿನಿಂದ ಕಂಪನಿಯು ಮಧ್ಯಮ ಶ್ರೇಣಿಯ ಬೈಕ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.

ನೂತನ ಆವೃತ್ತಿ ಡಿಟಿಎಸ್ಐ(ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನಿಷನ್) ತಂತ್ರಜ್ಞಾನ ಹೊಂದಿದೆ. ಬರೀ ಮೈಲೇಜ್ ಬಯಸೋ ಗ್ರಾಹಕರಿಗೆ 100 ಸಿಸಿ ಡಿಸ್ಕವರ್, ಹೆಚ್ಚು ಪವರ್ ಬಯಸೋ ಗ್ರಾಹಕರಿಗೆ ಡಿಸ್ಕವರ್ 150 ಸಿಸಿ ಬೈಕ್ ಆಯ್ಕೆ ಮಾಡಿಕೊಳ್ಳಬಹುದು. ಮೈಲೇಜ್ ಮತ್ತು ಪವರ್ ಎರಡೂ ಬೇಕೆನ್ನೋ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಡಿಸ್ಕವರ್ 125 ಸಿಸಿ ಬೈಕ್ ಹೊರತಂದಿದೆ. "ಪವರ್ ಮತ್ತು ಮೈಲೇಜ್ ಎರಡರಲ್ಲೂ ರಾಜಿಯಿಲ್ಲದಂತೆ 125 ಸಿಸಿ ಡಿಸ್ಕವರ್ ರೂಪಿಸಲಾಗಿದೆ" ಎಂದು ಬಜಾಜ್ ಮೋಟರ್ ಸೈಕಲ್ ವಿಭಾಗದ ಅಧ್ಯಕ್ಷ ಎಸ್. ಶ್ರೀಧರ್ ಹೇಳಿದ್ದಾರೆ.

ನೂತನ 125 ಸಿಸಿ ದರ ಉಳಿದೆರಡು ಆವೃತ್ತಿಗಳ ನಡುವಿನಲ್ಲಿದೆ. ಅಂದರೆ ಡಿಸ್ಕವರ್ 100 ಸಿ ಬೈಕ್ ದರ 43,500 ರೂ. ಇದ್ದರೆ 150 ಸಿಸಿ ದರ ಸುಮಾರು 49,500 ರೂ. ಆಗಿದೆ. ನೂತನ 125 ಸಿಸಿ ಬೈಕ್ ದರ 45,500 ರೂ. ಆಗಿದೆ. "ಈಗ ಕಂಪನಿಯು ಪ್ರತಿ ತಿಂಗಳು ಸುಮಾರು 1.2 ಲಕ್ಷ ಡಿಸ್ಕವರ್ ಬೈಕ್ ಮಾರಾಟ ಮಾಡುತ್ತಿದೆ. ಇದರಿಂದಾಗಿ ಕಂಪನಿಯು ಜಗತ್ತಿನ ಎರಡನೇ ಬೃಹತ್ ಬೈಕ್ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಈಗ ಕಂಪನಿಯು ಹೊರತಂದ 125 ಸಿಸಿ ಆವೃತ್ತಿಯಿಂದಾಗಿ ಈ ಆರ್ಥಿಕ ವರ್ಷದಲ್ಲಿ ಮಾಸಿಕವಾಗಿ ಸುಮಾರು 1.5 ಲಕ್ಷ ಡಿಸ್ಕವರ್ ಬೈಕ್ ಮಾರಾಟ ಮಾಡುವ ನಿರೀಕ್ಷೆಯಿದೆ" ಎಂದು ಅವರು ಹೇಳಿದ್ದಾರೆ.

More from DriveSpark

Article Published On: Friday, April 1, 2011, 12:56 [IST]
English summary
Bajaj Auto launched its new variant of Discover for Rs45,500. The bike comes with a 125cc engine and DTSi-technology coupled with unprecedented mileage and power output. Hence it becomes the ideal vehicle for those who need mileage and driving power, said Bajaj auto President Motorcycle Business.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+