ಭಾರತಕ್ಕೆ ಬರಲಿದೆ ಯಮಾಹ ಸೂಪರ್ ಸ್ಕೂಟರ್!!

Yamaha Scooter UK
ದೇಶದ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆಯಿಡಲು ಜಪಾನ್ ನ ಯಮಾಹ ಯೋಜಿಸಿದೆ. ಇದಕ್ಕಾಗಿ ಉತ್ತರ ಪ್ರದೇಶದ ಸರ್ಜಾಪುರದಲ್ಲಿ ಅಸೆಂಬ್ಲಿ ಘಟಕವೊಂದನ್ನು ತೆರೆಯಲಿದೆ. ಇದಕ್ಕಾಗಿ ಇಂಡಿಯಾ ಯಮಾಹ ಮೋಟರ್ ಪ್ರೈವೇಟ್ ಲಿಮಿಟೆಡ್ ಸುಮಾರು 10. ಕೋಟಿ ರೂ. ಹೂಡಿಕೆ ಮಾಡಲಿದೆ.

ನೂತನ ಸ್ಕೂಟರ್ ವಿನ್ಯಾಸದ ಕುರಿತು ಕಂಪನಿ ಮಾಹಿತಿ ನೀಡಿಲ್ಲ. ಆದರಿದು ಹೋಂಡಾ ಕಂಪನಿಯ ಫ್ಯಾಮಿಲಿ ಸವಾರಿಯ ಸ್ಕೂಟರ್ ಗಳಿಗಿಂತ ಭಿನ್ನವಾಗಿರಲಿದೆ ಎಂದು ಸ್ಪಷ್ಟಪಡಿಸಿದೆ. ಕಂಪನಿಯ ಸ್ಕೂಟರ್ ಯಮಾಹ ಬೈಕ್ ಗಳಂತೆ ಸ್ಟೈಲಿಶ್ ಮತ್ತು ಆಕರ್ಷಕ ವಿನ್ಯಾಸ ಹೊಂದಿರಲಿದೆ ಎಂದು ಕಂಪನಿ ಹೇಳಿದೆ. "ಭಾರತದ ಸ್ಕೂಟರ್ ಮಾರುಕಟ್ಟೆ ಸದೃಢವಾಗಿದ್ದು ನಾವು ಇಲ್ಲಿ ಹೆಚ್ಚಿನ ಪಾಲು ಪಡೆಯಲು ಬಯಸಿದ್ದೇವೆ. ಇದಕ್ಕಾಗಿ 2012ರ ಮುನ್ನ ಸ್ಕೂಟರ್ ಹೊರತರಲು ನಿರ್ಧರಿಸಿದ್ದೇವೆ" ಎಂದು ಇಂಡಿಯಾ ಯಮಾಹ ಮೋಟರ್ ಪ್ರೈವೇಟ್ ಲಿಮಿಟೆಡ್ ಸಿಇಒ ಹಿರೊಯುಕಿ ಸುಜುಕಿ ಹೇಳಿದ್ದಾರೆ.

2010ರ ವರ್ಷದಲ್ಲಿ ಭಾರತದ ಸ್ಕೂಟರ್ ಮಾರುಕಟ್ಟೆ ಶೇಕಡಾ 50.54ರಷ್ಟು ಏರಿಕೆ ಕಂಡಿದೆ. ಇದರಲ್ಲಿ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೆಚ್ಚಿನ ಪ್ರಾಬಲ್ಯ ಪಡೆದಿದೆ. ಆದರೂ ಟಿವಿಎಸ್ ಮೋಟರ್ ಕಂಪನಿ ಮತ್ತು ಹೀರೋ ಹೋಂಡಾ ಸ್ಕೂಟರ್ ಗಳು ಕೂಡ ಅತ್ಯುತ್ತಮವಾಗಿ ಮಾರಾಟಗೊಂಡಿವೆ. "ನೂತನ ಸ್ಕೂಟರ್ ಗಾಗಿ ಕಂಪನಿಯು ಪ್ರತ್ಯೇಕ ಅಸೆಂಬ್ಲಿ ಘಟಕ ನಿರ್ಮಿಸಲಿದೆ. ಇದಕ್ಕಾಗಿ ಸುಮಾರು 10 ಕೋಟಿ ರೂ. ಹೂಡಿಕೆ ಮಾಡಲಿದ್ದೇವೆ" ಎಂದು ಹಿರೊಯುಕಿ ಹೇಳಿದ್ದಾರೆ. ಭಾರತದ ಮಾರುಕಟ್ಟೆಗೆ ಸೂಕ್ತವಾದ ಸ್ಕೂಟರೊಂದನ್ನು ಜಪಾನ್ ನಲ್ಲಿ ಅಭಿವೃದ್ಧಿಪಡಿಸುತ್ತಿರುವುದಾಗಿ ಅವರು ಕಳೆದ ವರ್ಷ ಹೇಳಿದ್ದರು.

Article Published On: Wednesday, April 6, 2011, 10:15 [IST]
English summary
Yamaha plans to foray into the Indian scooter market by next year. Company will set up a separate body assembly line at its Surajpur plant in Uttar Pradesh for this purpose. New Scooter will stylish and smart design like Yamaha's motorcycles said India Yamaha Motor Pvt Ltd CEO Hiroyuki Suzuki.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+