20 ಲಕ್ಷದ ಕ್ರೂಷರ್ ಬೈಕ್; ಯಮಾಹ ವಿಮ್ಯಾಕ್ಸ್

ವಿಮ್ಯಾಕ್ಸ್ ಎಂಬುದು ನಿಜಾರ್ಥದಲ್ಲಿ ಮಾನೆಸ್ಟರ್ ಬೈಕ್. ಯಾಕಾಂತಿರ? ಇದು 1,679 ಸಿಸಿಯ ವಿ4 ಎಂಜಿನ್ ಹೊಂದಿದ್ದು, ಭಾರತದ ರಸ್ತೆಯಲ್ಲಿರುವ ಹೆಚ್ಚಿನ ಬೈಕ್ ಗಳಿಗೆ ಹೋಲಿಸಿದರೆ 10 ಪಟ್ಟು ದೊಡ್ಡದಾದ ಡಿಸ್ ಪ್ಲೇಸ್ ಮೆಂಟ್ ಹೊಂದಿದೆ. ವಿ-4 ಎಂದರೆ ಅನಂತ ಅಥವಾ ಅಗಾಧ ಎಂಜಿನ್ ಶಕ್ತಿಗೆ ಇನ್ನೊಂದು ಹೆಸರು ಎನ್ನಲಾಗಿದೆ. ಇದಕ್ಕಾಗಿ ಕಂಪನಿಯು ವಿಮ್ಯಾಕ್ಸ್ ಎಂಜಿನ್ ನ ಇನ್ ಪುಟ್ ಮತ್ತು ಔಟ್ ಪುಟ್ ಭಾಗದಲ್ಲಿ ಅನಂತತೆಯ ಚಿಹ್ನೆ(∞) ಬಳಸಿದೆ. ನೂತನ ಬೈಕ್ ಶಕ್ತಿ ಮತ್ತು ಸೌಂದರ್ಯವೆರಡರ ಯುಗಳಗೀತೆಯೆಂದು ಕಂಪನಿ ಪ್ರತಿಪಾದಿಸಿದೆ.
ವಿಮ್ಯಾಕ್ಸ್ ಮೊದಲ ಮಾದರಿಯನ್ನು ಕಂಪನಿ ಪರಿಚಯಿಸಿದ್ದು ಕಳೆದ 1985ರಲ್ಲಿಯೇ. ಇದರ ಮುಂದುವರೆದ ಭಾಗವೆಂಬಂತೆ ಶಕ್ತಿಯ ಚಿನ್ಹೆಯನ್ನು ಬಳಸಿಕೊಂಡು ಎರಡನೇ ತಲೆಮಾರಿನ ವಿಮ್ಯಾಕ್ಸ್ ಬೈಕನ್ನು ಕಂಪನಿ ಪರಿಚಯಿಸಿತ್ತು. ನೂತನ ವಿಮ್ಯಾಕ್ಸ್ ನ್ನು ಎಫ್ ಝಡ್ ಮತ್ತು ಎಸ್ ಝಡ್ ಸೀರಿಸ್ ಬೈಕ್ ಗಳಿಗೆ ಸರಿಸಾಟಿಯಾಗಿ ವಿನ್ಯಾಸ ಮಾಡಲಾಗಿದೆ. ಎಸ್ ಝಡ್ ಸೀರಿಸ್ ನ ಬೈಕ್ ಗಳು ಅತ್ಯಧಿಕ ವೇಗಕ್ಕೆ ಇನ್ನೊಂದು ಹೆಸರಾಗಿದೆ. ಬೆಂಗಳೂರು ಶೋರೂಂನಲ್ಲಿ ಸುಮಾರು 20 ಲಕ್ಷ ರೂ. ಆಸುಪಾಸಿನಲ್ಲಿ ವಿಮ್ಯಾಕ್ಸ್ ಬೈಕ್ ದೊರಕುತ್ತವೆ.
2011 ವಿಮ್ಯಾಕ್ಸ್ ಪ್ರೊಫೈಲ್
ಹೆಸರು: ಯಮಾಹ ವಿಮ್ಯಾಕ್ಸ್
ದರ: ಸುಮಾರು 20 ಲಕ್ಷ ರೂ.ಗಿಂತ ಹೆಚ್ಚು
ವಿಭಾಗ: ಕ್ರೂಷರ್
ಎಂಜಿನ್: 4 ಸ್ಟ್ರೋಕ್, ಡಿಒಎಚ್ ಸಿ, ವಿ-ಟೈಪ್
ಗರಿಷ್ಠ ಶಕ್ತಿ: 9 ಸಾವಿರ ಆರ್ ಪಿಎಂಗೆ 194 ಹಾರ್ಸ್ ಪವರ್
ಗೇರ್: 5 ಸ್ಪೀಡ್
ಕ್ಲಚ್: ವೆಟ್ ಮಲ್ಟಿಪಲ್ ಡಿಸ್ಕ್


Click it and Unblock the Notifications