ಉದ್ಯಾನನಗರಿಗೆ ಬಂತು ಡಿಸ್ಕವರ್ 125 ಸಿಸಿ ಬೈಕ್

New Discover DTS-i
ಬೆಂಗಳೂರು: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್ ಆಟೋ ತನ್ನ ಜನಪ್ರಿಯ ಡಿಸ್ಕವರ್ ಡಿಟಿಎಸ್-ಐ ಬೈಕ್ ನ 125 ಸಿಸಿಯ ಹೊಸ ಆವೃತ್ತಿಯೊಂದನ್ನು ನಗರದಲ್ಲಿ ಪರಿಚಯಿಸಿದೆ. ನೂತನ 125 ಡಿಸ್ಕವರ್ ಬೈಕ್ ಹೆಚ್ಚು ಶಕ್ತಿಶಾಲಿ, ಪಿಕ್ ಅಪ್ ಮತ್ತು ಆಕರ್ಷಕ ಮೈಲೇಜ್ ನೀಡುವುದಾಗಿ ಕಂಪನಿ ತಿಳಿಸಿದೆ. ನೂತನ ಆವೃತ್ತಿ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಗಳಲ್ಲಿ ದೊರಕುತ್ತಿದೆ.

ನೂತನ ಬಜಾಜ್ ನ್ಯೂ 125 ಸಿಸಿ ಡಿಸ್ಕವರ್ ಬೈಕ್ ಹೊಸ ಫೀಚರ್ ಗಳಾದ ನಿಟ್ರೊಕ್ಸ್ ಸಸ್ಪೆನ್ಸನ್, 2.0 ಡಿಟಿಎಸ್-ಐ ವೆರ್ ಎಂಜಿನ್, ಆಟೋ ಕಲರ್ ಚೇಂಜ್ ಡಿಕಾಲ್ಸ್ ಇತ್ಯಾದಿ ಫೀಚರ್ ಗಳನ್ನು ಹೊಂದಿದೆ. ಕಮ್ಯೂಟರ್ ಬೈಕ್ ಮಾರುಕಟ್ಟೆಯಲ್ಲಿ ಆಕರ್ಷಕ ಮೈಲೇಜ್ ಮತ್ತು ಶಕ್ತಿಯನ್ನು ಹೆಚ್ಚಿಸಿಕೊಂಡು ನೂತನ ಡಿಸ್ಕವರ್ ಬೈಕನ್ನು ಹೊರತಂದಿರುವುದಾಗಿ ಕಂಪನಿಯ ಮಾರುಕಟ್ಟೆ ವಿಭಾಗದ ಪ್ರಧಾನ ವ್ಯವಸ್ಥಾಪಕರು ಹೇಳಿದ್ದಾರೆ.

ಬರೀ ಮೈಲೇಜ್ ಬಯಸೋ ಗ್ರಾಹಕರಿಗೆ 100 ಸಿಸಿ ಡಿಸ್ಕವರ್, ಹೆಚ್ಚು ಪವರ್ ಬಯಸೋ ಗ್ರಾಹಕರಿಗೆ ಡಿಸ್ಕವರ್ 150 ಸಿಸಿ ಬೈಕ್ ಆಯ್ಕೆ ಮಾಡಿಕೊಳ್ಳಬಹುದು. ಮೈಲೇಜ್ ಮತ್ತು ಪವರ್ ಎರಡೂ ಬೇಕೆನ್ನೋ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಡಿಸ್ಕವರ್ 125 ಸಿಸಿ ಬೈಕ್ ಹೊರತಂದಿದೆ.

ಕಂಪನಿಯು ಪ್ರತಿತಿಂಗಳು ಸುಮಾರು ಒಂದುವರೆ ಲಕ್ಷದಷ್ಟು 125 ಸಿಸಿ ಬೈಕ್ ಉತ್ಪಾದಿಸಲು ಯೋಜಿಸಿದೆ. ಬಜಾಜ್ ಕಂಪನಿಯು 2009ರಲ್ಲಿ ಡಿಸ್ಕವರ್ 100 ಸಿಸಿ ಬೈಕನ್ನು ಪರಿಚಯಿಸಿತ್ತು. 2010ರಲ್ಲಿ ಡಿಸ್ಕವರ್ 150 ಸಿಸಿ ಬೈಕ್ ಹೊರತಂದಿತ್ತು. ತನ್ನ ಆಕರ್ಷಕ ಮೈಲೇಜ್ ಮೂಲಕ ಇವೆರಡು ಬೈಕ್ ಗಳು ಗ್ರಾಹಕರಿಗೆ ಇಷ್ಟವಾಗಿದ್ದವು.

ನೂತನ 125 ಸಿಸಿ ದರ ಉಳಿದೆರಡು ಆವೃತ್ತಿಗಳ ನಡುವಿನಲ್ಲಿದೆ. ಅಂದರೆ ಡಿಸ್ಕವರ್ 100 ಸಿ ಬೈಕ್ ದರ 43,500 ರೂ. ಇದ್ದರೆ 150 ಸಿಸಿ ದರ ಸುಮಾರು 49,500 ರೂ. ಆಗಿದೆ. ಆದರೆ ಕಂಪನಿ ಈಗ ಪರಿಚಯಿಸಿರುವ ನೂತನ 125 ಸಿಸಿ ಬೈಕ್ ದರ 45,500 ರೂ. ಆಗಿದೆ.

More from DriveSpark

Article Published On: Friday, April 29, 2011, 9:54 [IST]
English summary
Bajaj Auto, has launched its brand new DTS-i 'Discover 125cc', sporty bike in Bangalore. New bike offers great power and pick up as well as excellent mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+