ಭಾರತದ ಮೊದಲ ಫ್ರೀಸ್ಟೈಲ್ ಬೈಕ್ ಸ್ಟಂಟ್

ಇಂತಹ ಬೈಕ್ ಸ್ಟಂಟ್ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ನಡೆಯಲಿದೆ. "2011 ಕಿಂಗ್ ಡಮ್ ಆಫ್ ಸ್ಟಂಟ್" ಫ್ರೀಸ್ಟೈಲ್ ಮೋಟೊ ಕ್ರಾಸ್ ಶೋ ಮೇ 14 ಮತ್ತು 15ರಂದು ಪುಣೆಯಲ್ಲಿ ಆಯೋಜಿಸಲಾಗಿದೆ. ಅಲ್ಲಿನ ಐಎಲ್ಎಸ್ ಕಾನೂನು ಕಾಲೇಜು ಮೈದಾನ ವೈವಿದ್ಯಮಯವಾದ ಬೈಕ್ ಸ್ಟಂಟ್ ಗಳಿಗೆ ಸಾಕ್ಷಿಯಾಗಲಿದೆ. ಈ ಪ್ರದರ್ಶನಕ್ಕೆ ಟಿಕೆಟ್ ಮೂರು ರೀತಿಯಲ್ಲಿವೆ. ವಿಐಪಿ, ಗೋಲ್ಡ್ ಮತ್ತು ಸಿಲ್ವರ್ ಟಿಕೇಟ್ ಗಳ ದರಗಳು ಕ್ರಮವಾಗಿ 5 ಸಾವಿರ ರು. 2 ಸಾವಿರ ರು ಮತ್ತು 500 ರು. ಆಗಿದೆ.
ಇದರಲ್ಲಿ ಜಗತ್ತಿನ ಅಗ್ರ ಫ್ರೀ ಸ್ಟೈಲ್ ಮೊಟೊಕ್ರಾಸ್ ರೈಡರ್ ಗಳು ಮತ್ತು ಬಿಎಂಎಕ್ಸ್ ಫ್ಲಾಟ್ ಲ್ಯಾಂಡ್ ರೈಡ್ ಗಳು ಪ್ರದರ್ಶನ ನೀಡಲಿದ್ದಾರೆ. ಅಮೆರಿಕ, ಆಸ್ಟ್ರೇಲಿಯಾ ಮತ್ತು ಚಿಲಿ ದೇಶಗಳಿಂದ ರೈಡರ್ ಗಳು ಬರಲಿದ್ದಾರೆ. ಇವರಲ್ಲಿ ಕೆಲವರು ರೈಡರ್ ಗಳು ಏರ್ ಟ್ರಿಕ್ ಪ್ರದರ್ಶಿಸಲಿದ್ದಾರೆ. ಮೂರು ಗಂಟೆಗಳ ಬಿ-ಬೋಯಿಗ್ ಪ್ರೀಸ್ಟೈಲ್ ಡ್ಯಾನ್ಸರ್, ಆಕರ್ಷಕ ಲೇಸರ್ ಶೋ ಮತ್ತು ಇಂಗ್ಲೆಂಡಿನ ಕಲಾವಿದರಿಂದ ಫೈರ್ ಶೋಗಳು ಇರಲಿವೆಯಂತೆ. ಪುಣೆ ಜನತೆ ಮತ್ತು ಬೈಕ್ ಸ್ಟಂಟ್ ಪ್ರೇಮಿಗಳಿಗೆ ಮರೆಯಲಾಗದ ಆಕರ್ಷಕ ಸ್ಟಂಟ್ ಶೋ ಶೀಘ್ರದಲ್ಲಿ ನಡೆಯಲಿದೆ.


Click it and Unblock the Notifications








