ಹೋಂಡಾ ಬೈಕ್ ನಿರ್ಮಿಸೋದು ಇನ್ನು ಕರ್ನಾಟಕದಲ್ಲಿ..

ಈ ಘಟಕಕ್ಕೆ ಎಷ್ಟು ಹೋಡಿಕೆ ಮಾಡುವುದಾಗಿ ಕಂಪನಿ ತಿಳಿಸಿಲ್ಲ. ಆದರೆ ಸುಮಾರು 1 ಸಾವಿರ ಕೋಟಿ ರು. ವೆಚ್ಚದಲ್ಲಿ ನೂತನ ಘಟಕ ನಿರ್ಮಿಸಲಿದೆ ಎಂದು ಉದ್ಯಮ ಮೂಲಗಳು ಹೇಳಿವೆ. ನೂತನ ಘಟಕದಲ್ಲಿ ವರ್ಷಕ್ಕೆ ಸುಮಾರು 12 ಲಕ್ಷ ಬೈಕ್ ಉತ್ಪಾದಿಸುವ ನಿರೀಕ್ಷೆಯಿದೆ.
"ಗ್ರಾಹಕರ ಬೇಡಿಕೆಗೆ ತಕ್ಕಂತೆ ಶೀಘ್ರದಲ್ಲಿ ಅತ್ಯುತ್ತಮ ಬೈಕ್ ಉತ್ಪಾದಿಸಲು ಕಂಪನಿಯು ಮೂರನೇ ಘಟಕವನ್ನು ಬೆಂಗಳೂರು ಸಮೀಪದಲ್ಲಿ ನಿರ್ಮಿಸಲಿದೆ. ಇದು 2013ರ ಮೊದಲ ತ್ರೈಮಾಸಿಕದಲ್ಲಿ ಉತ್ಪಾದನೆ ಆರಂಭಿಸಲಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.
ಹೋಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ತನ್ನ ಎರಡನೇ ಘಟಕವನ್ನು ರಾಜಸ್ಥಾನದಲ್ಲಿ ನಿರ್ಮಿಸಿದೆ. ಇದಕ್ಕೆ ಸುಮಾರು 500 ಕೋಟಿ ರೂ. ಹೂಡಿಕೆ ಮಾಡಿತ್ತು.


Click it and Unblock the Notifications