ನಮ್ಮೂರ ರಸ್ತೆಗೆ ಯಮಹಾ ಸ್ಕೂಟರ್ ಬರುತ್ತಂತೆ!

"ಭಾರತದ ಸ್ಕೂಟರ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಎಂಟ್ರಿ ಲೆವೆಲ್ ಸ್ಕೂಟರ್ ಗಳನ್ನು ಶೀಘ್ರದಲ್ಲಿ ಪರಿಚಯಿಸಲಿದ್ದೇವೆ" ಎಂದು ಯಮಹಾ ಮೋಟರ್ ಇಂಡಿಯಾ ನಿರ್ದೇಶಕ ಜಾನ್ ನಕಟಾ ಹೇಳಿದ್ದಾರೆ. 2012ಕ್ಕೆ ಯಮಹಾ ಸ್ಕೂಟರ್ ಗಳು ಭಾರತ ಪ್ರವೇಶಿಸುವ ನಿರೀಕ್ಷೆಯಿದೆ.
ಸ್ಕೂಟರ್ ಗಳನ್ನು ಫರಿದಾಬಾದ್ ಮತ್ತು ಸೂರಜ್ ಪುರ್ ನಲ್ಲಿ ಯಮಹಾ ಇಂಡಿಯಾ ನಿರ್ಮಿಸಲಿದೆ. ಕಂಪನಿಯು ಸ್ಕೂಟರ್ ಉತ್ಪಾದನೆ ಹೆಚ್ಚಿಸಲು ಮುಂದಿನ ವರ್ಷ ಸುಮಾರು ಒಂದು ಕೋಟಿ ಡಾಲರ್ ಹೂಡಿಕೆ ಮಾಡಲಿದೆ ಎಂದು ಇಂಡಿಯಾ ಯಮಹಾ ಸಿಇಒ ಹಿರೊಯುಕಿ ಸುಜುಕಿ ಹೇಳಿದ್ದಾರೆ.


Click it and Unblock the Notifications