ಕವಾಸಕಿ ನಿಂಜಾ 650ಆರ್ ರಸ್ತೆಗೆ, ದರ 4.57 ಲಕ್ಷ ರು.

Kawasaki Ninja 650R
ನವದೆಹಲಿ, ಜೂನ್ 9: ಕವಾಸಕಿ ಕಂಪನಿಯು ಬಹುನಿರೀಕ್ಷಿತ "ನಿಂಜಾ 650ಆರ್" ಬೈಕನ್ನು ಹೊರತಂದಿದೆ. ಪ್ರಸಕ್ತ ವರ್ಷ ಸೂಕ್ತ ಬೈಕೊಂದರ ಹುಡುಕಾಟದಲ್ಲಿದ್ದ ಬೈಕ್ ಪ್ರೇಮಿಗಳಿಗಿದು ಸೂಕ್ತ ಆಯ್ಕೆಯಾಗಬಹುದು.

ಇದು ಐಷಾರಾಮಿ ಮತ್ತು ಅತ್ಯುತ್ತಮ ಕಾರ್ಯದಕ್ಷತೆಯ ಬೈಕ್. ನಿಂಜಾ 650ಆರ್ 72 ಪಿಎಸ್ ಪವರ್ ಮತ್ತು 66 ಎನ್ಎಂ ಟಾರ್ಕ್ ನೀಡುತ್ತದೆ. ಇತರ ಪ್ರೀಮಿಯಂ ಬೈಕ್ ಗಳಿಗೆ ಹೋಲಿಸಿದರೆ ಇದರ ದರವೂ ಅತಿದುಬಾರಿಯೇನಲ್ಲ.

ಕವಾಸಕಿ ನಿಂಜಾ 650ಆರ್ ಗೆ ದೆಹಲಿ ಎಕ್ಸ್ ಶೋರೂಂ ದರ 4.57 ಲಕ್ಷ ರು. ಆಗಿದೆ. ನೂತನ ನಿಂಜಾ650ಆರ್ ದೇಶದ 30 ನಗರಗಳಲ್ಲಿರುವ ಬಜಾಜ್ ಪ್ರೊಬೈಕಿಂಗ್ ಶೋರೂಂಗಳಲ್ಲಿ ದೊರಕಲಿದೆ.

ಆಕರ್ಷಕ ವಿನ್ಯಾಸ, ಬೃಹತ್ ಗಾತ್ರ ಇತ್ಯಾದಿ ಸಾಕಷ್ಟು ಫೀಚರ್ ಗಳಿಂದ ನಿಂಜಾ 650ಆರ್ ಇಷ್ಟವಾಗುತ್ತದೆ. ಇದರಲ್ಲಿ ಟ್ರಿಪಲ್ ಪೆಡಲ್ ಡಿಸ್ಕ್ ಬ್ರೇಕ್, ಮೊಟೊಜಿಪಿ ಡಿಸ್ಪ್ಲೆ, ಆಕರ್ಷಕ ಇಂಡಿಕೇಟರ್ ಮತ್ತು ಮರೆಮಾಚಿದ ಸೈಲೆನ್ಸರ್, ಅವಳಿ ಸಿಲಿಂಡರ್ ಎಂಜಿನ್ ಇತ್ಯಾದಿಗಳು ಪ್ರಮುಖ ಫೀಚರ್ ಗಳಾಗಿವೆ.

2011 ಕವಾಸಕಿ ನಿಂಜಾ ಹೀಗಿದೆ ನೋಡಿ
* ಎಂಜಿನ್: 4 ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಡಿಒಎಚ್ಸಿ, ನಾಲ್ಕು ಕವಾಟ
* ಗೇರ್: 6 ಸ್ಪೀಡ್ ಟ್ರಾನ್ಸ್ ಮಿಷನ್
* ಇಂಧನ ಸಂಗ್ರಹ ಸಾಮರ್ಥ್ಯ: 4.1 ಗ್ಯಾಲನ್ (ಸುಮಾರು 18 ಲೀಟರ್ ನಷ್ಟು)
* ಟ್ರಿಪಲ್ ಪೆಡಲ್ ಡಿಸ್ಕ್ ಬ್ರೇಕ್.
* ದೆಹಲಿ ಎಕ್ಸ್ ಶೋರೂಂ ದರ: 4.57 ಲಕ್ಷ ರು.

More from DriveSpark

Article Published On: Thursday, June 9, 2011, 10:46 [IST]
English summary
Bajaj Auto and Kawasaki launched its pro biking offering "Ninja 650R". The Ninja 650R with a power of 72 PS and a torque of 66 Nm is priced at Rs 4.57 lakh (ex-showroom Delhi).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+