ಮಳೆಗಾಲದಲ್ಲಿ ನಿಮ್ಮ ಮತ್ತು ಬೈಕಿನ ಜನರಲ್ ಚೆಕಪ್

ವಾಹನಗಳನ್ನು ಮಳೆಗಾಲದಲ್ಲಿ ಜತನದಿಂದ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಅದರ ಆಯಸ್ಸು, ಕೆಲವೊಮ್ಮೆ ನಮ್ಮ ಆಯಸ್ಸು ಕಡಿಮೆಯಾಗಿಬಿಡುತ್ತದೆ. ಬೈಕನ್ನು ಮಳೆಗಾಲದಲ್ಲಿ ನೋಡಿಕೊಳ್ಳಲು ಅನುಕೂಲವಾಗುವ ಕೆಲವು ಸಲಹೆಗಳು ಇಲ್ಲಿವೆ.
ಜನರಲ್ ಚೆಕಪ್: ಮಳೆಗಾಲದಲ್ಲಿ ಸವಾರಿಗೆ ಮುನ್ನ ನಿಯಮಿತವಾಗಿ ಪರಿಶೀಲಿಸಿ. ಅದರಲ್ಲಿ ಯಾವುದಾದರೂ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎಚ್ಚರಿಕೆಯಿಂದ ಸರಿಪಡಿಸಿರಿ. ಎಲ್ಲಕ್ಕೂ ಪ್ರಮುಖವಾಗಿ ಎಂಜಿನ್ ಆರೋಗ್ಯವನ್ನು ನೋಡಿಕೊಳ್ಳಿ.
ಬ್ರೇಕ್: ಒದ್ದೆ ರಸ್ತೆಯಲ್ಲಿ ಸಾಗುವ ಹಿನ್ನಲೆಯಲ್ಲಿ ಬ್ರೇಕ್ ಹೇಗಿದೆ ನೋಡಿ. ಹೆಚ್ಚು ಹಾರ್ಡ್ ಆಗಿದ್ದರೆ ತಕ್ಷಣ ಬ್ರೇಕ್ ಹಾಕಿದರೆ ಸ್ಕಿಡ್ ಆಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚು. ಬ್ರೇಕ್ ಅತ್ಯುತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಬ್ರೇಕ್ ಪ್ಯಾಡ್ ಹಳೆಯದಾಗಿದ್ದರೆ ಬದಲಾಯಿಸಿರಿ. ಲೈನರ್ಸ್, ಡಿಸ್ಕ್, ಡ್ರಮ್ ಬ್ರೇಕ್ ಒಳಭಾಗವನ್ನೆಲ್ಲ ಮಳೆಗಾಲಕ್ಕೆ ಮುನ್ನವೇ ಸ್ವಚ್ಛಗೊಳಿಸಿರಿ. ಬ್ರೇಕ್ ಆಯಿಲ್ ಸಮರ್ಪಕವಾಗಿದೆಯೇ ಗಮನ ನೀಡಿರಿ.
ಟೈರ್: ಮಳೆಗಾಲದಲ್ಲಿ ಬೈಕ್ ಟೈರ್ ಗಳು ಕೆಲವೊಮ್ಮೆ ಆಪ್ತರಕ್ಷಕ. ಮಳೆಗಾಲದಲ್ಲಿ ಹಳೆಯ ಟೈರ್ ಬೈಕ್ ಸವಾರಿ ಅಪಾಯಕಾರಿ. ಅದರ ಟ್ರೀಡ್ ಗುಣಮಟ್ಟ ಸರಿಯಾಗಿರಲಿ. ಕೇವಲ ಮಧ್ಯದ ಟ್ರೀಡ್ ಆಳವಾಗಿದ್ದರೆ ಸಾಲದು. ಟೈರ್ ಸೈಡ್ ಟ್ರೀಡ್ ಗುಣಮಟ್ಟವೂ ಅತ್ಯುತ್ತಮವಾಗಿರಲಿ. ಟೈರ್ ಪ್ರೆಷರ್ ಸರಿಯಾಗಿರುವುದೇ ನಿಯಮಿತವಾಗಿ ಪರಿಶೀಲಿಸಿ.
ಪಾರ್ಕಿಂಗ್: ಬೈಕನ್ನು ಮಳೆಗಾಲದಲ್ಲಿ ಎಲ್ಲೆಲ್ಲಿ ಪಾರ್ಕ್ ಮಾಡಬೇಡಿ. ಆದಷ್ಟು ನೆರಳಿನಲ್ಲಿ ಪಾರ್ಕ್ ಮಾಡಿ. ಆದರೆ ನೆರಳು ಬೇಕಂತ ಮರದಡಿ ಪಾರ್ಕ್ ಮಾಡದಿರಿ. ಮಳೆಗಾಲದಲ್ಲಿ ಮರ, ರೆಂಬೆಕೊಂಬೆ ಬಿದ್ದರೆ ಬೈಕ್ ಜಕಂ ಆದೀತು. ನೀವು ಸವಾರಿ ಮಾಡದೇ ಇರುವಾಗ ಬೈಕನ್ನು ಕವರ್ ಮಾಡಿಡಿ.
ನಿಮ್ಮ ಬಗ್ಗೆ ಎಚ್ಚರಿಕೆಯಿರಲಿ: ಮಳೆಗಾಲದಲ್ಲಿ ಬೈಕ್ ಕಾಳಜಿ ಮಾತ್ರವಲ್ಲ, ನಿಮ್ಮ ಕಾಳಜಿಗೂ ಗಮನ ನೀಡಿ. ವಾಟರ್ ಪ್ರೂಫ್ ಜಾಕೆಟ್, ಗ್ಲ್ವೌಸ್ ಧರಿಸಿರಿ. ಹೆಲ್ಮೆಟ್ ಇತ್ಯಾದಿಗಳನ್ನು ಮರೆಯದಿರಿ. ಗಾಳಿ ಜೋರಾಗಿರುವ ಸಂದರ್ಭದಲ್ಲಿ ಬೈಕ್ ನಿಲ್ಲಿಸುವುದು ಒಳೀತು. ಮರದಡಿ ಸವಾರಿ ಮಾಡುವಾಗ ಎಚ್ಚರವಿರಲಿ. ಹ್ಯಾಪಿ ಜರ್ನಿ.


Click it and Unblock the Notifications








