ಎಲ್ಎಂಎಲ್ ನಿಂದ ಸೆಲೆಕ್ಟ್ 4 ಸ್ಕೂಟರ್ ರಸ್ತೆಗೆ

Select 4 stroke scooter
ಕಾನ್ಪುರ ಮೂಲದ ಎಲ್ಎಂಎಲ್ ಲಿಮಿಟೆಡ್ ಕಂಪನಿಯು ಸೆಲೆಕ್ಟ್ ಫೋರ್ ಸ್ಟ್ರೋಕ್ ಸ್ಕೂಟರನ್ನು ದೆಹಲಿ ಮಾರುಕಟ್ಟೆಗೆ ಪರಿಚಯಿಸಿದೆ. ಇದು 148 ಸಿಸಿ, ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಮತ್ತು 4 ಗೇರ್ ಗಳನ್ನು ಹೊಂದಿದೆ.

ಎಲ್ಎಂಎಲ್ ಸೆಲೆಕ್ಟ್ ಫೋರ್ ಸ್ಕೂಟರ್ ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ಆಯ್ಕೆಯಲ್ಲಿ ದೊರಕುತ್ತಿದೆ. ಇವೆರಡರ ದೆಹಲಿ ಎಕ್ಸ್ ಶೋರೂಂ ದರ ಕ್ರಮವಾಗಿ 47,140 ರು. ಮತ್ತು 50,978 ರು. ಆಗಿದೆ. ಇದು 5.5 ಲೀಟರ್ ನ ಇಂಧನ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ.

ನೂತನ ಸ್ಕೂಟರನ್ನು ಆರಂಭದಲ್ಲಿ ದೆಹಲಿಯಲ್ಲಿ ಹೊರತರಲಾಗಿದೆ. ಮುಂದಿನ ಎರಡರಿಂದ ಮೂರು ತಿಂಗಳಲ್ಲಿ ದೇಶದ ವಿವಿಧ ಭಾಗಗಳಿಗೆ ಪರಿಚಯಿಸಲಾಗುವುದು ಎಂದು ಕಂಪನಿಯ ಮಾರಾಟ ವಿಭಾಗದ ಮುಖ್ಯಸ್ಥ ಪಿಎಸ್ ಚೌಧರಿ ಹೇಳಿದ್ದಾರೆ.

ಕಂಪನಿಯು ಮುಂದಿನ ದಿನಗಳಲ್ಲಿ 100 ಸಿಸಿ ಮತ್ತು 125 ಸಿಸಿಯ ಎರಡು ಸ್ಕೂಟರ್ ಮತ್ತು ಎರಡು ಬೈಕ್ ಹೊರತರಲು ನಿರ್ಧರಿಸಿದೆ ಎಂದರು. ಜೊತೆಗೆ ಸ್ಪೋರ್ಟ್ಸ್ ಮತ್ತು ಲೈಫ್ ಸ್ಟೈಲ್ ಸೆಗ್ಮೆಂಟ್ ನ 200 ಸಿಸಿ ಸ್ಕೂಟರನ್ನು ಪರಿಚಯಿಸುವ ಯೋಜನೆಯೂ ಕಂಪನಿಗಿದೆಯಂತೆ.

Article Published On: Wednesday, June 15, 2011, 11:52 [IST]
English summary
LML Limited, the Kanpur based company has launched Select 4 stroke scooter for the Delhi NCR territory. For Rs 47,140 (ex-showroom), the Select4 KS (kick start) is available whereas the Select 4 ES (electric start) will cost Rs 50,978 (ex-showroom).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+