ಹೋಂಡಾ ಟಾರ್ಗೆಟ್: 30 ಸಾವಿರ ಸಿಬಿಆರ್250ಆರ್ ಮಾರಾಟ

"ಹೋಂಡಾ ಸಿಬಿಆರ್ ಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಾಣುವ ನಿರೀಕ್ಷೆಯಿದೆ. ಇದು 250 ಸಿಸಿ ಕೆಟಗರಿಯಲ್ಲಿ ಆಂಟಿ ಲಾಕ್ ಸಿಸ್ಟಮ್ ನೊಂದಿಗೆ ಬಂದಿರುವ ಮೊದಲ ಬೈಕಾಗಿದೆ" ಎಂದು ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ಸ್ ಇಂಡಿಯಾದ ಉಪಾಧ್ಯಕ್ಷ ಎನ್. ಕೆ. ರತನ್ ಹೇಳಿದ್ದಾರೆ.
ಈ ಬೈಕ್ ಎರಡು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದರೆ ಎಬಿಎಸ್ ಇರುವ ಮತ್ತು ಇಲ್ಲದ ಆವೃತ್ತಿಗಳನ್ನು ಭಾರತದ ರಸ್ತೆಗೆ ಪರಿಚಯಿಸಲಾಗಿದೆ. ಇವೆರಡರ ದರ ಕ್ರಮವಾಗಿ 1.45 ಲಕ್ಷ ರು. ಮತ್ತು 1.70 ಲಕ್ಷ ರು. ಆಗಿದೆ.


Click it and Unblock the Notifications