ಆಕಾಶಕ್ಕಿಳಿದ ಜಗತ್ತಿನ ಮೊದಲ ಹಾರುವ "ಹೂವರ್ ಬೈಕ್"

ಇಂತಹ ಬೈಕನ್ನು ಅನ್ವೇಷನೆ ಮಾಡಿದ್ದು ಕ್ರಿಸ್ಟೋಪರ್ ಮಲೊಯ್(32). ಆತ ಹೆಲಿಕಾಫ್ಟರ್ ನ ಮಾಜಿ ಪೈಲೆಟ್. ಸುಮಾರು ಎರಡುವರೆ ವರ್ಷದ ಸತತ ಪ್ರಯತ್ನದ ಮೂಲಕ ಹಾರುವ ಬೈಕನ್ನು ಅಭಿವೃದ್ಧಿಪಡಿಸಲಾಗಿದೆ. ಸದ್ಯ ಇದು ಹತ್ತು ಸಾವಿರ ಅಡಿ ಎತ್ತರದಲ್ಲಿ ಮತ್ತು ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲಿ ಸಾಗಬಹುದು.
ಬೆಂಗಳೂರಿಗರು ಈ ಸುದ್ದಿ ಕೇಳಿ ಸಕತ್ ಖುಷಿ ಪಡಬಹುದು. ಯಾಕೆಂದರೆ ಇನ್ನು ತಲೆಚಿಟ್ಟುಹಿಡಿಸುವ ಟ್ರಾಫಿಕ್ ಗೆ ಗೋಲಿ ಹೊಡೆಯಬಹುದು ಅಲ್ಲವೇ. ಆಕಾಶದಲ್ಲಿ ದುಂಬಿಗಳಂತೆ ಹಾರುವ ಬೈಕುಗಳು ಸಾಗಬಹುದು. ಸಮಯ ವ್ಯರ್ಥವಾಗುತ್ತೆ ಎಂದು ವರಿ ಮಾಡಬೇಕಿಲ್ಲ. ವಿಶಾಲ ಆಕಾಶದಲ್ಲಿ ಕ್ಷಣಾರ್ಧದಲ್ಲಿ ಆಫೀಸ್ ತಲುಪಬಹುದು.
ಒಮ್ಮೆ ಫುಲ್ ಟ್ಯಾಂಕ್ ಇಂಧನ ತುಂಬಿಸಿದರೆ ಸುಮಾರು 92 ಮೈಲು ಅಥವಾ 45 ನಿಮಿಷ ಹಾರಬಹುದು. ಇದರ ದರ ಸುಮಾರು 45 ಸಾವಿರ ಡಾಲರ್ ಇರುವ ನಿರೀಕ್ಷೆಯಿದೆ. ಸದ್ಯ ಈ ಬೈಕನ್ನು ಪರೀಕ್ಷಾರ್ಥ ಹಂತದಲ್ಲಿದೆ. ಹಾಗಂತ ಇದು ಹಾರುವುದಿಲ್ಲವೆಂದುಕೊಳ್ಳಬೇಡಿ. ಈಗಾಗಲೇ ಒಂದಿಷ್ಟು ಎತ್ತರ ಹಾರಿಸಿ ಕ್ರಿಸ್ಟೊಪರ್ ಖುಷಿ ಪಡಿಸಿದ್ದಾನೆ. ಇದರ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಅವನು ಹೇಳುತ್ತಾನೆ.
ಹೋವರ್ ಬೈಕ್ ಪ್ರೊಫೈಲ್
* ಹೆಸರು: ಹೂವರ್ ಬೈಕ್
* ಹಾರುವ ಎತ್ತರ: ಅಂದಾಜು 10 ಸಾವಿರ ಅಡಿ
* ತೂಕ: 295 ಕೆಜಿ
* ಎಂಜಿನ್ ಸಾಮರ್ಥ್ಯ: 7,500 ಆರ್ ಪಿಎಂಗೆ 80 ಕಿ.ವ್ಯಾಟ್


Click it and Unblock the Notifications