250ಸಿಸಿ ಬಜಾಜ್ ಪಲ್ಸರ್ ರಸ್ತೆಗಿಳಿಯಲು ಕ್ಷಣಗಣನೆ

Bajaj Pulsar
ಬೈಕ್ ಪ್ರೇಮಿಗಳಿಗೆ ಪಲ್ಸರ್ ಬೈಕೆಂದರೆ ಏನೋ ಮೋಹ. ಇದೇ ಕಾರಣಕ್ಕೆ ಪಲ್ಸರ್ 220 ಬೈಕ್ ಹೆಚ್ಚು ಜನಪ್ರಿಯಗೊಂಡಿದೆ. ಇದೀಗ ಕಂಪನಿಯು 250 ಸಿಸಿಯ ಪಲ್ಸರ್ ಬೈಕೊಂದನ್ನು ಪ್ರಸಕ್ತ ವರ್ಷದ ಸೆಪ್ಟಂಬರ್ ನಲ್ಲಿ ಹೊರತರಲಿದೆ ಎಂದು ವರದಿಗಳು ಹೇಳಿವೆ.

ಬಜಾಜ್ ಈಗಾಗಲೇ ತನ್ನ 150 ಸಿಸಿ ಮತ್ತು 180ಸಿಸಿಯ ಪರಿಷ್ಕೃತ ಪಲ್ಸರ್ ಆವೃತ್ತಿಗಳನ್ನು ಹೊರತಂದಿದೆ. ಸೆಪ್ಟಂಬರ್ ನಲ್ಲಿ ಹೆಚ್ಚು ಪರಿಷ್ಕೃತ ಪಲ್ಸರ್ ಬೈಕೊಂದನ್ನು ಹೊರತರುವುದಾಗಿ ಕಂಪನಿಯ ಎಂಡಿ ರಾಜೀವ್ ಬಜಾಜ್ ಇತ್ತೀಚೆಗೆ ಹೇಳಿದ್ದರು.

250ಸಿಸಿಯಲ್ಲಿ ಬಜಾಜ್ ಈಗಾಗಲೇ ಅನುಭವ ಪಡೆದಿದೆ. ಅಂದರೆ ಕವಾಸಕಿ ನಿಂಜಾ 250 ಆರ್ ಎಂಬ ಸ್ಪೋರ್ಟ್ಸ್ ಬೈಕ್ ಇದಕ್ಕೆ ಉದಾಹರಣೆ. ಹೆಚ್ಚು ಸ್ಪೋರ್ಟಿ ಸವಾರಿಗೆ ಸೂಕ್ತವಾಗಿರುವ ಶಕ್ತಿಶಾಲಿ ಬೈಕೊಂದನ್ನು ಹೊರತರಲು ನಿಂಜಾ ಅನುಭವ ಕಂಪನಿಗೆ ನೆರವಾಗಲಿದೆ ಎಂದು ವರದಿ ಹೇಳಿದೆ.

250 ಸಿಸಿ ಪಲ್ಸರ್ ಹೋಂಡಾ ಸಿಬಿಆರ್250ಆರ್ ಬೈಕ್ ಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ಕವಾಸಕಿ ನಿಂಜಾ 250ಆರ್ ಮಾರಾಟಕ್ಕೂ ಹಿನ್ನಡೆಯಾಗಲಿದೆ. 250 ಸಿಸಿ ಪಲ್ಸರ್ ದರ ಸುಮಾರು ಒಂದುವರೆ ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ದರದ ವಿಷಯದಲ್ಲಿ ಕಂಪನಿಯು ಒಂದಿಷ್ಟು ರಾಜಿ ಮಾಡಿಕೊಂಡರೆ ಬೈಕ್ ಮಾರುಕಟ್ಟೆಯಲ್ಲಿ ಪಲ್ಸರ್ ಅಗ್ರಸ್ಥಾನ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ.

More from DriveSpark

Article Published On: Monday, July 11, 2011, 14:53 [IST]
English summary
Bajaj Auto is expected to launch a new pulsar this September, according to reports. The Pulsar in Bajaj's best selling sports bike and the two -wheeler manufacturer is keen to send its flagship model one step further. The Pulsar 220 is hugely popular and Bajaj wants to up the ante with a 250cc version.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+