ತಮಿಳುನಾಡಿನಲ್ಲಿ ರಾಯಲ್ ಎನ್ ಫೀಲ್ಡ್ ಹೊಸ ಘಟಕ

ರಾಯಲ್ ಎನ್ ಫೀಲ್ಡ್ ಬೈಕ್ ಇಷ್ಟವಾಗಲು ಅದರ ಲುಕ್ ಪ್ರಮುಖ ಕಾರಣ. ಅದರ ಗತ್ತು, ವಿನ್ಯಾಸ, ಬೃಹತ್ ಆಕೃತಿ, ಠೀವಿ ಎಲ್ಲರಿಗೂ ಇಷ್ಟ. ಈಗ ಭಾರತದಲ್ಲಿ ಹಲವು ಬುಲೆಟ್ ಬೈಕ್ ಗಳು ಕಾಣಸಿಗುತ್ತಿವೆ. ಆದರೆ ಬುಲೆಟ್ ಖರೀದಿ ಅಷ್ಟು ಸುಲಭವಾಗಿಲ್ಲ. ಉಳಿದ ಬೈಕ್ ಖರೀದಿಗೆ ಹೋಲಿಸಿದರೆ ಇದಕ್ಕೆ ಒಂದಿಷ್ಟು ಸಮಯ ಹೆಚ್ಚು ಕಾಯಬೇಕು. ಯಾಕೆಂದರೆ ಇದರ ವೈಟಿಂಗ್ ಪಿರೇಡ್ ಹೆಚ್ಚು.

ಗ್ರಾಹಕರನ್ನು ಹೆಚ್ಚು ಕಾಯಿಸುವ ಕಷ್ಟ ಕಂಪನಿಗೆ ಅರಿವಾಗಿರುವಂತಿದೆ. ಇದೀಗ ಕಂಪನಿಯು ಚೆನ್ನೈನಲ್ಲಿ ಹೊಸ ಘಟಕವೊಂದನ್ನು ನಿರ್ಮಿಸಲು ಯೋಜಿಸಿದೆ. ಈ ಘಟಕ 2013ಕ್ಕೆ ಉತ್ಪಾದನೆ ಆರಂಭಿಸಲಿದ್ದು ಆಮೇಲೆ ರಾಯಲ್ ಎನ್ ಫೀಲ್ಡ್ ಗೆ ಬುಕ್ಕಿಂಗ್ ಮಾಡಿ ಹೆಚ್ಚು ಸಮಯ ಕಾಯಬೇಕಿಲ್ಲ..

ಚೆನ್ನೈನ ಒರಗಾದಮ್ ಪ್ರದೇಶದಲ್ಲಿರುವ ಸಿಪ್ ಕಾಟ್(SIPCOT) ಇಂಡಸ್ಟ್ರಿಯಲ್ ಪಾರ್ಕಿನಲ್ಲಿ ಕಂಪನಿ ಘಟಕ ನಿರ್ಮಿಸಲಿದೆ. ಇಲ್ಲಿನ 50 ಎಕರೆ ಭೂಮಿಯನ್ನು ಕಂಪನಿಗೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇಂದು ವಿತರಣೆ ಮಾಡಿದ್ದಾರೆ. ಶೀಘ್ರದಲ್ಲಿ ಘಟಕ ನಿರ್ಮಾಣ ಕೆಲಸ ಆರಂಭಿಸುವುದಾಗಿ ಈಚಾರ್ ಮೋಟರ್ಸ್ ನ ದ್ವಿಚಕ್ರ ವಾಹನ ವಿಭಾಗ ತಿಳಿಸಿದೆ.

"ನೂತನ ಘಟಕ ನಿರ್ಮಿಸಲು ಸರಕಾರವು ಭೂಮಿಯನ್ನು ನೀಡಿದೆ. ನಾವು ತಕ್ಷಣ ಘಟಕ ನಿರ್ಮಾಣ ಆರಂಭಿಸಲಿದ್ದೇವೆ. ಈ ಘಟಕ 2013ರ ಮೊದಲ ತ್ರೈಮಾಸಿಕಕ್ಕೆ ಉತ್ಪಾದನೆ ಆರಂಭಿಸುವ ನಿರೀಕ್ಷೆಯಿದೆ" ಎಂದು ಈಚಾರ್ ಮೋಟರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಿದ್ಧಾರ್ಥ ಲಾಲ್ ಹೇಳಿದ್ದಾರೆ.

Article Published On: Tuesday, July 12, 2011, 16:57 [IST]
English summary
Eicher Motors said its two-wheeler division, Royal Enfield, will set up a new manufacturing facility at Oragadam, near Chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+