ಬಜಾಜ್ ಆಟೋ ಗೆ 711 ಕೋಟಿ ರು. ಲಾಭ

Net Profit
ಮೊದಲೇ ಸ್ಪಷ್ಟಪಡಿಸಿಕೊಳ್ಳೋಣ. ಬಾಲ್ ಅಂದ್ರೆ ಬಿಎಎಲ್. ಬಿಎಎಲ್ ಅಂದ್ರೆ ಬಜಾಜ್ ಆಟೋ ಲಿಮಿಟೆಡ್. ಮೊನ್ನೆ ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಬಜಾಜ್ ಲಾಭ ಗಮನಾರ್ಹವಾಗಿ ಏರಿಕೆ ಕಂಡಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಬಜಾಜ್ ಆಟೋ ಲಿಮಿಟೆಡ್ 711.06 ಕೋಟಿ ರು. ನಿವ್ವಳ ಲಾಭ ಗಳಿಸಿದೆ. ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದ 590.15 ಕೋಟಿ ರು. ನಿವ್ವಳ ಲಾಭಕ್ಕೆ ಹೋಲಿಸಿದರೆ ಶೇ. 20.48ರಷ್ಟು ಏರಿಕೆ ದಾಖಲಿಸಿದೆ.

ಇದೇ ತ್ರೈಮಾಸಿಕದಲ್ಲಿ ಕಂಪನಿಯ ಸ್ಟಾಂಡೊಲೊನ್ ನಿವ್ವಳ ಮಾರಾಟ 4,586.91 ಕೋಟಿ ರು.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯ 3,737.29 ಕೋಟಿ ರು.ಗೆ ಹೋಲಿಸಿದರೆ ಶೇ. 22.73ರಷ್ಟು ಏರಿಕೆ ಕಂಡಿದೆ.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 9,63,051 ಬೈಕ್ ಮಾರಾಟ ಮಾಡಿದೆ. ಇದಕ್ಕೂ ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 8,28,391 ಯೂನಿಟ್ ಬೈಕ್ ಮಾರಾಟ ಮಾಡಿದೆ. ಹೀಗಾಗಿ ಕಳೆದ ತ್ರೈಮಾಸಿಕದಲ್ಲಿ ಬೈಕ್ ಮಾರಾಟ ಶೇ. 16ರಷ್ಟು ಹೆಚ್ಚಾಗಿದೆ.

ಇದೇ ಅವಧಿಯಲ್ಲಿ ಕಂಪನಿಯ ವಾಣಿಜ್ಯ ವಾಹನ ಮಾರಾಟ 1,29,764 ಯೂನಿಟ್ ಗೆ ತಲುಪಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದ 99,918 ಯೂನಿಟ್ ಮಾರಾಟಕ್ಕೆ ಹೋಲಿಸಿದರೆ ಶೇ. 30ರಷ್ಟು ಏರಿಕೆ ದಾಖಲಿಸಿದೆ.

ಇದೇ ಅವಧಿಯಲ್ಲಿ ಕಂಪನಿಯ ಒಟ್ಟಾರೆ ಮಾರಾಟ 10,92,815 ಯೂನಿಟ್ ಗೆ ತಲುಪಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯ 9,28,336 ಯೂನಿಟ್ ಗೆ ಹೋಲಿಸಿದರೆ ಶೇ 18ರಷ್ಟು ಏರಿಕೆ ಕಂಡಿದೆ.

More from DriveSpark

Article Published On: Thursday, July 14, 2011, 15:06 [IST]
English summary
Automobile major and country’s second largest two-wheeler maker, Bajaj Auto Ltd (BAL) today reported a 20.48% jump in standalone net profit for the first quarter ended June 30 to Rs 711.06 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+