ಯುನಿಕಾರ್ನ್ ಬೈಕ್ ಬೇಕೆ? ಆರು ತಿಂಗಳು ಕಾಯಿರಿ

ನೀವು ನೂತನ 150 ಸಿಸಿ ಸಿಬಿ ಯುನಿಕಾರ್ನ್ ಬೈಕ್ ಖರೀದಿಸಲು ಯೋಚಿಸುತ್ತಿದ್ದೀರಾ. ಸ್ವಲ್ಪ ಹೆಚ್ಚು ವೈಟ್ ಮಾಡಿ. ಯಾಕೆಂದರೆ ಯುನಿಕಾರ್ನ್ ಬೈಕಿನ ವೈಟಿಂಗ್ ಪಿರೇಡನ್ನು ಕಂಪನಿಯು ಆರು ತಿಂಗಳಿಗೆ ಹೆಚ್ಚಿಸಿದೆ. ಆರ್ಡರ್ ಮಾಡಿದ ಆರು ತಿಂಗಳ ನಂತರ ಯೂನಿಕಾರ್ನ್ ಬೈಕ್ ನಿಮ್ಮ ಕೈ ಸೇರಲಿದೆ.

ಕಂಪನಿಯು 2005ರಲ್ಲಿ ದೇಶದ ರಸ್ತೆಗೆ ಯುನಿಕಾರ್ನ್ ಬೈಕನ್ನು ಪರಿಚಯಿಸಿತ್ತು. ಜಪಾನಿನ ಎಂಜಿನಿಯರ್ ಗಳು ವಿಶೇಷವಾಗಿ ಭಾರತದ ರಸ್ತೆಗೆ ಸೂಕ್ತವಾಗಿರುವಂತೆ ಈ ಬೈಕನ್ನು ರೂಪಿಸಿದ್ದರು. ಆರಂಭದಲ್ಲಿ ಇದರ ಹೆಸರು ಸಿಬಿಎಫ್150ಎಂ ಎಂದಾಗಿತ್ತು. ಆದರೆ ಕಂಪನಿಯು ಕೆಲವೇ ದಿನಗಳಲ್ಲಿ ಈ ಮಾಡೆಲ್ ನಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಇದಕ್ಕೆ "ಸಿಬಿ ಯೂನಿಕಾರ್ನ್" ಎಂದು ಹೆಸರಿಟ್ಟಿತ್ತು.

ಪಲ್ಸರ್, ಅಪಾಚಿ ಸೇರಿದಂತೆ ದೇಶದ 150ಸಿಸಿ ಬೈಕ್ ಸೆಗ್ಮೆಂಟ್ ಗೆ ಯೂನಿಕಾರ್ನ್ ಪ್ರಬಲ ಪೈಪೋಟಿಯನ್ನೇ ನೀಡಿತ್ತು. ನೂತನ ಯೂನಿಕಾರ್ನ್ ಬೈಕಿನ ವೈಟಿಂಗ್ ಪಿರೇಡ್ ಹೆಚ್ಚಾಗಿರುವುದನ್ನು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಖಾತ್ರಿ ಪಡಿಸಿದ್ದಾರೆ. ಸಿಬಿ ಯುನಿಕಾರ್ನ್ ಬೈಕಿಗೆ ಬೇಡಿಕೆ ಹೆಚ್ಚಾಗಿರುವುದೇ ವೈಟಿಂಗ್ ಪಿರೇಡ್ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಕಂಪನಿಯು ಗುರ್ ಗಾಂವ್ ಘಟಕದಲ್ಲಿ ವರ್ಷಕ್ಕೆ 16 ಲಕ್ಷ ಬೈಕ್ ಉತ್ಪಾದನೆ ಮಾಡುತ್ತಿದೆ. ರಾಜಸ್ಥಾನದಲ್ಲಿರುವ ನೂತನ ತಪುಕಾರ ಘಟಕವು ವರ್ಷಕ್ಕೆ 12 ಲಕ್ಷ ಬೈಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಘಟಕಕ್ಕಾಗಿ ಕಂಪನಿಯು 800 ಕೋಟಿ ರು. ಹೂಡಿಕೆ ಮಾಡಲಾಗಿದೆ.

Article Published On: Tuesday, July 19, 2011, 10:54 [IST]
English summary
If you are looking to buy yourself a new 150-cc CB Unicorn motorbike, you should keep in mind that Honda Motorcycles and Scooters India has increased the waiting period for its flagship model to six months on account of huge demand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+