ನಿರೀಕ್ಷಿಸಿ: ಹೋಂಡಾ 500 ಸಿಸಿ ಮತ್ತು 1000 ಸಿಸಿ ಬೈಕ್

2011 Honda CBR600F
ದೇಶದ ಬೈಕ್ ಪ್ರೇಮಿಗಳ ಕಿವಿ ನೆಟ್ಟಗಾಗುವಂತಹ ಸುದ್ದಿಯೊಂದು ಜಪಾನಿನ ಬೈಕ್ ತಯಾರಿಕ ಕಂಪನಿ ಕಡೆಯಿಂದ ಬಂದಿದೆ. ಹೋಂಡಾ ದೇಶದ ರಸ್ತೆಗೆ 500ರಿಂದ 1 ಸಾವಿರ ಸಿಸಿಯವರೆಗಿನ ಬೈಕುಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದೆ. ಆದರೆ ಯಾವಾಗ ಈ ಬೈಕುಗಳು ಆಗಮಿಸಲಿವೆ ಎನ್ನುವುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ.

ಹೀಗಾಗಿ ಹೋಂಡಾ ಸಿಬಿಆರ್600ಎಫ್ ಬೈಕ್ ಭಾರತಕ್ಕೆ ಬರುವುದು ಖಾತ್ರಿಯಾಗಿದೆ. ಸದ್ಯ ರಸ್ತೆಯಲ್ಲಿರುವ ಹ್ಯೊಸಂಗ್ ಜಿಟಿ650ಆರ್ ಮತ್ತು ಕವಾಸಕಿ ನಿಂಜಾ 650ಆರ್ ಬೈಕಿಗೆ ಇದು ಪೈಪೋಟಿ ನೀಡುವ ನಿರೀಕ್ಷೆಯಿದೆ. ಸದ್ಯ ಹೋಂಡಾ ಸಿಬಿಆರ್250ಆರ್ ಹೊಂದಿರುವರು ಸೀದಾ 600 ಸಿಸಿಗೆ ಅಪ್ ಗ್ರೇಡ್ ಆಗಬಹುದಾಗಿದೆ.

ನೂತನ ಹೋಂಡಾ ಸಿಬಿಆರ್600ಎಫ್ 599ಸಿಸಿಯ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು 16 ಕವಾಟಗಳನ್ನು ಹೊಂದಿದ್ದು 12 ಸಾವಿರ ಆರ್ಪಿಎಂಗೆ 102 ಹಾರ್ಸ್ ಪವರ್ ನೀಡುತ್ತದೆ. ಇದರಲ್ಲಿ ಪ್ರತಿಗಂಟೆಗೆ ಗರಿಷ್ಠ 200 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ. 500ಸಿಸಿಗಿಂತ ಮೇಲ್ಪಟ್ಟ ಹೋಂಡಾ ಬೈಕುಗಳ ನಿರೀಕ್ಷೆಯಲ್ಲಿರೋಣ.

Article Published On: Wednesday, July 20, 2011, 12:12 [IST]
English summary
Honda plans 500 cc to 1000 cc bikes for India. Honda has not disclosed the price of CBR600F but is expected that when it will be launched in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+