ಚಲಿಸುವ ಸೂಟ್ ಕೇಸ್: ಇದು ಸೂಟ್ ಕೇಸ್ ಸ್ಕೂಟರು

ನೂತನ ಮೈಕ್ರೊ ಲಗೇಜ್ ಸ್ಕೂಟರು ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಹೆಚ್ಚು ನೆರವಾಗಲಿದೆ. ಇಲ್ಲಿವರೆಗೆ ಅವರೆಲ್ಲ ತಮ್ಮ ಲಗೇಜ್ ಸಾಗಿಸಲು "ಕೂಲಿ"ಯನ್ನು ಕರೆಯುತ್ತಿದ್ದರು. ಇನ್ನು ಮುಂದೆ ತಮ್ಮ ಸೂಟ್ ಕೇಸ್ ಹಿಂದಿನ ಸ್ಟಾಂಡ್ ನಲ್ಲಿ ನಿಂತರೆ ಸಾಕು. ಸೂಟ್ ಕೇಸ್ ಚಲಿಸುತ್ತದೆ. ಅಂದಹಾಗೆ ಈ ಸ್ಕೂಟರನ್ನು ಮೊದಲು ಕಂಡು ಹಿಡಿದದ್ದು ಬ್ರಿಟನಿನ 8 ವರ್ಷದ ಹುಡುಗನಂತೆ. ನಂತರ ಈ ಕಲ್ಪನೆಯನ್ನು ಸಾಕಾರಗೊಳಿಸಿದ್ದು ಬ್ರಿಟಿಷ್ ಕಂಪನಿ ಮೈಕ್ರೊ ಸ್ಕೂಟರ್ಸ್.
ರೈಲ್ವೆ ಸ್ಟೇಷನ್ ಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಅಲ್ಪ ದೂರಕ್ಕೆ ಸಾಗಲು ನೆರವಾಗುವ ಈ ಸ್ಕೂಟರ್ ದರ ಸುಮಾರು 250 ಡಾಲರಂತೆ. ಇದು ಮಣಭಾರ ಹೊರುವ ನಮ್ಮ ಶಾಲಾ ಮಕ್ಕಳಿಗೂ ಹೆಚ್ಚು ಸೂಕ್ತವಾಗಿ ಕಾಣುತ್ತಿದೆ. ಈ ಸ್ಕೂಟರ್ ಅನಿಲ ಚಾಲೀತವಾಗಿದ್ದು ಪರಿಸರಕ್ಕೂ ಮಾರಕವಲ್ಲವೆಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications