ಆಕ್ಟಿವಾ, ಏವಿಯೇಟರ್, ಡಿಯೋ ಬಳಗಕ್ಕೆ ಇನ್ನೊಂದು ಸ್ಕೂಟರ್

ಸ್ಕೂಟಿ ಪ್ರೇಮಿಗಳಿಗೊಂದು ಸಂತಸದ ಸುದ್ದಿಯೆಂದರೆ ಹೀರೋ ಮೋಟರ್ ಸೈಕಲ್ ಆಂಡ್ ಸ್ಕೂಟರ್(ಎಚ್ಎಂಎಸ್ಐ) ತನ್ನ ನಾಲ್ಕನೇ ಸ್ಕೂಟರನ್ನು ಮಾರುಕಟ್ಟೆಗೆ ಪರಿಚಯಿಸಲಿದೆಯಂತೆ! ಆದರೆ ಹೀರೋ ಹೋಂಡಾ ಮಾತ್ರ ತನ್ನ ಸ್ಕೂಟರ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಬ್ಯುಸಿಯಾಗಿದೆ.

ಸದ್ಯ ಸ್ಕೂಟರ್ ಮಾರುಕಟ್ಟೆಯಲ್ಲಿ ಎಚ್ಎಂಎಸ್ಐ ಪ್ರಾಬಲ್ಯ ಪಡೆದಿದೆ. ಆಕ್ಟಿವಾ ಸ್ಕೂಟರಂತೂ ಬಿಸಿದೋಸೆಯಂತೆ ಮಾರಾಟವಾಗುತ್ತಿದೆ. ಪುರುಷರು, ಮಹಿಳೆಯರೆಂಬ ಬೇಧಭಾವವಿಲ್ಲದೇ ಹೆಚ್ಚಿನ ಜನರು ಸ್ಕೂಟರ್ ಗಳನ್ನು ಖರೀದಿಸುತ್ತಿದ್ದಾರೆ. ಏವಿಯೇಟರ್ ಮತ್ತು ಡಿಯೋ ಸ್ಕೂಟರ್ ಮಾರಾಟವೂ ಭರ್ಜರಿಯಾಗಿದೆ.

ಆಕ್ಟಿವಾ, ಏವಿಯೇಟರ್, ಡಿಯೋ ಕುಟುಂಬಕ್ಕೆ ಹೊಸದಾಗಿ ಸೇರ್ಪಡೆಯಾಗುವ ಹೊಸ ಸ್ಕೂಟರಿನ ಕುರಿತು ಹೆಚ್ಚಿನ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ. ಆದರೆ ನೂತನ ಸ್ಕೂಟರ್ ರಸ್ತೆಗಿಳಿಯುವುದನ್ನು ಮೂಲಗಳು ಖಚಿತಪಡಿಸಿವೆ.

ದೇಶದ ಸ್ಕೂಟರ್ ಮಾರುಕಟ್ಟೆಯಲ್ಲಿ ಎಚ್ಎಂಎಸ್ಐ ಶೇಕಡಾ 40ಷ್ಟು ಪಾಲು ಪಡೆದಿದೆ. ಹೀರೋ ಹೋಂಡಾ ಮೋಟರ್ ಲಿಮಿಟೆಡ್(ಎಚ್ಎಚ್ಎಂಎಲ್) ಶೇಕಡಾ 16ರಷ್ಟು ಪಾಲು ಪಡೆದು ಮೂರನೇ ಸ್ಥಾನದಲ್ಲಿದೆ.

ಶೀಘ್ರದಲ್ಲಿ ಹೀರೋ ಮೋಟರ್ ಕಾರ್ಪ್ ಎಂದು ಹೆಸರು ಬದಲಾಯಿಸಲಿರುವ ಹೀರೋ ಹೋಂಡಾ ತನ್ನ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಯೋಜನೆಯಲ್ಲಿದೆ. ಆದರೆ ಹೀರೋ ಹೋಂಡಾ ಬಳಿಯಿರುವುದು ಹೀರೋ ಹೋಂಡಾ ಪ್ಲೆಷರ್ ಸ್ಕೂಟರ್ ಮಾತ್ರ.

ಕಳೆದ ಆರ್ಥಿಕ ವರ್ಷದಲ್ಲಿ ಎಚ್ಎಂಎಸ್ಐ 8,93,335 ಸ್ಕೂಟರ್ ಮಾರಾಟ ಮಾಡಿತ್ತು. ಅದರ ಮಾರುಕಟ್ಟೆ ಪಾಲು ಶೇಕಡಾ 43ರಷ್ಟಿದೆ. ಆದರೆ ಎಚ್ಎಚ್ಎಂಎಲ್ 3,42,991 ಸ್ಕೂಟರ್ ಮಾರಾಟ ಮಾಡಿದ್ದು ಶೇಕಡಾ 16.5ರಷ್ಟು ಪಾಲು ಪಡೆದಿದೆ.

More from DriveSpark

Article Published On: Tuesday, July 26, 2011, 15:17 [IST]
English summary
HMSI is readying itself to launch a fourth product after the existing Activa, Dio and Aviator. Some report said that Hero scooters to race against Honda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+