ಎರಡು ಬಣ್ಣದ ಯುಗಳ ಗೀತೆ: ನೂತನ ಪಲ್ಸರ್ 220

ಡ್ಯೂಯಲ್ ಟೋನ್ ಪೈಂಟಿಂಗ್ ಮಾಡಿರುವುದರಿಂದ ಪಲ್ಸರ್ ಇನ್ನಷ್ಟು ಆಕರ್ಷಕವಾಗಿದೆ. ಪಲ್ಸರ್ ಬಾಡಿ ಗ್ರಾಫಿಕ್ಸ್ ಈಗ ಕಪ್ಪು ಕೆಂಪು ಮತ್ತು ಕಪ್ಪು ನೀಲಿ ಮಿಶ್ರಿತವಾಗಿ ಪಲ್ಸರ್ ಪ್ರೇಮಿಗಳಿಗೆ ಇಷ್ಟವಾಗುವಂತ್ತಿದೆ. ಈ ಡ್ಯೂಯಲ್ ಬಣ್ಣದ ಗ್ರಾಫಿಕ್ಸ್ ಹೆಡ್ ಲ್ಯಾಂಪ್ ವರೆಗೂ ವ್ಯಾಪಿಸಿದೆ. ಹಿಂಭಾಗದ ಮಡ್ಗಾರ್ಡ್ ಅರ್ಧಭಾಗಕ್ಕೆ, ಸೀಟಿನ ಕೆಲಭಾಗದ ಬಾಡಿಗೆ ಕಪ್ಪು ಟೋನ್ ಪೈಂಟಿಂಗ್ ಮಾಡಲಾಗಿದೆ. ಒಟ್ಟಾರೆ ನೂತನ ಬಣ್ಣದ ಕೆಲಸದಿಂದ ಪಲ್ಸರ್ 220 ಇನ್ನಷ್ಟು ಆಕರ್ಷಕವಾಗಿದೆ.
ಶೀಘ್ರದಲ್ಲಿಯೇ ಪಲ್ಸರ್ 220 ಬೈಕನ್ನು ಅಪ್ ಗ್ರೇಡ್ ಮಾಡಲಾಗುವುದೆಂದು ಕಂಪನಿ ಹೇಳಿತ್ತು. ಇದರ ಮೊದಲ ಭಾಗವಾಗಿ ಡ್ಯೂಯಲ್ ಟೋನ್ ಪೈಂಟಿಂಗ್ ಪಲ್ಸರ್ ಆವೃತ್ತಿ ಹೊರಬಂದಿದೆ. ಬಜಾಜ್ ಶೀಘ್ರದಲ್ಲಿಯೇ 250 ಸಿಸಿಯ ಪಲ್ಸರ್ ಹೊರತರಲಿದೆ ಎಂಬ ವದಂತಿಗಳೂ ಇವೆ.


Click it and Unblock the Notifications








