ಯಮಾಹ ಮಾರಾಟ ಶೇಕಡಾ 28ರಷ್ಟು ಹೆಚ್ಚಳ

ಕಂಪನಿಯ ದೇಶಿ ಮಾರಾಟ 29,021 ಯೂನಿಟ್ ಗೆ ತಲುಪಿದ್ದು ಶೇಕಡಾ 26.73ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ ಕಂಪನಿಯು 22,899 ಯೂನಿಟ್ ಮಾರಾಟ ಮಾಡಿತ್ತು. ಕಂಪನಿಯ ರಫ್ತು 6,829 ಯೂನಿಟ್ ಗೆ ತಲುಪಿದ್ದು ಶೇಕಡಾ 34.37ರಷ್ಟು ಏರಿಕೆ ಕಂಡಿದೆ.
"ಕಂಪನಿಯ ಮಾರಾಟ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಮುಂದಿನ ಹಬ್ಬದ ಸೀಸನ್ ನಲ್ಲಂತೂ ಕಂಪನಿಯು ಭರ್ಜರಿ ಮಾರಾಟದ ನಿರೀಕ್ಷೆಯಿದೆ" ಎಂದು ಇಂಡಿಯಾ ಯಮಾಹ ಮೋಟರ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿರೊಯುಕಿ ಸುಜುಕಿ ಹೇಳಿದ್ದಾರೆ. ಕಂಪನಿಯು ಸಣ್ಣಪಟ್ಟಣಗಳಲ್ಲಿ ವಹಿವಾಟು ವಿಸ್ತರಿಸಲು ಯೋಜಿಸಿದೆ.


Click it and Unblock the Notifications