ಶಕ್ತಿಶಾಲಿ ರಾಯಲ್ ಎನ್ ಫೀಲ್ಡ್ ರೈಡಿಗೆ ಸಜ್ಜಾಗಿರಿ

ಆದರೆ 750 ಸಿಸಿ ಮತ್ತು 1,000 ಸಿಸಿ ಯಾವಾಗ ರಸ್ತೆಗಿಳಿಯಲಿದೆ ಎಂದು ಕಂಪನಿ ಖಚಿತಪಡಿಸಿಲ್ಲ. ಈಗ ರಸ್ತೆಯಲ್ಲಿರುವ ಎನ್ ಫೀಲ್ಡ್ ಬುಲೆಟ್ ಶಕ್ತಿ ಕಂಡು ಬೆರಗಾದವರಿಗೆ ಇದು ನಿಜಕ್ಕೂ ಅಚ್ಚರಿಯ ಸುದ್ದಿ.
ದೇಶದ ದ್ವಿಚಕ್ರ ಮಾರುಕಟ್ಟೆ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಗ್ರಾಹಕರಿಂದ ಬೇಡಿಕೆಯೂ ಹೆಚ್ಚಾಗುತ್ತಿದೆ. ಇದರಿಂದಾಗಿ ಕಂಪನಿಗಳು ಪೈಪೋಟಿಗೆ ಬಿದ್ದು ವಾಹನಗಳನ್ನು ಉತ್ಪಾದಿಸುತ್ತಿವೆ. ಗ್ರಾಹಕರ ಮನೋಭಾವಕ್ಕೆ ತಕ್ಕಂತೆ ಒಂದಿಷ್ಟು ವಿಶೇಷವಾದ, ಮುಖ್ಯವಾಗಿ ದುಬಾರಿಯಾದ ಮತ್ತು ಶಕ್ತಿಶಾಲಿಯಾದ ಬೈಕ್, ಬುಲೆಟ್ ಗಳನ್ನು ಕಂಪನಿಗಳು ಪರಿಚಯಿಸುತ್ತಿವೆ.
ಸದ್ಯ ರಸ್ತೆಗಿಳಿಯಲು ಸಿದ್ಧವಾಗಿರುವ 350 ಸಿಸಿ ಮತ್ತು 500 ಸಿಸಿ ಮೊನೆಸ್ಟರ್ ಬುಲೆಟ್ ದರ ಒಂದು ಲಕ್ಷ ರು.ನಿಂದ ಒಂದುವರೆ ಲಕ್ಷ ರು. ಇದೆ. ಭವಿಷ್ಯದಲ್ಲಿ ರಸ್ತೆಗಿಳಿಯಲಿರುವ 750ಸಿಸಿ ಮತ್ತು 1000 ಸಿಸಿ ರಾಯಲ್ ಎನ್ ಫೀಲ್ಡ್ ದರ 4ರಿಂದ7 ಲಕ್ಷ ರು.ವರೆಗಿರುವ ನಿರೀಕ್ಷೆಯಿದೆ.
ಸದ್ಯ ದೇಶದ ರಸ್ತೆಯಲ್ಲಿ ಹರ್ಲಿ ಡೇವಿಡ್ ಸನ್, ಡುಕಾಟಿ, ಯಮಹಾ, ಹೋಂಡಾ, ಸುಜುಕಿ ಕಂಪನಿಗಳ ಬೈಕ್, ಬುಲೆಟ್ ಗಳಿವೆ. ರಸ್ತೆಗಿಳಿದು ದಶಕಗಳು ಕಳೆದರೂ ರಾಯಲ್ ಎನ್ ಫೀಲ್ಡ್ ಬೈಕ್ ಕುರಿತ ಮೋಹ ಗ್ರಾಹಕರಿಗೆ ಕಡಿಮೆಯಾಗಿಲ್ಲ. ಅದರ ಗಾಂಭೀರ್ಯ, ಬೆರಗು, ಠೀವಿ ಈಗಲೂ ಗ್ರಾಹಕರಿಗೆ ಇಷ್ಟ. ಎನ್ ಫೀಲ್ಡ್ ಗ್ರಾಹಕರು ಶಕ್ತಿಶಾಲಿ ಬುಲೆಟ್ ನಿರೀಕ್ಷೆಯಲ್ಲಿದ್ದರೆ ಕೊಂಚ ದಿನ ಕಾಯಬಹುದು. 750ರಿಂದ 1000 ಸಿಸಿ ಬುಲೆಟ್ ಖರೀದಿಸಬಹುದು.


Click it and Unblock the Notifications








