ಒಂದು ಉದ್ದದ ಸ್ಕೂಟರ್.. 25 ಜನರು ಕುಳಿತುಕೊಳ್ಳಬಹುದು

Worlds Longest Scooter
ಸ್ಕೂಟರಿನಲ್ಲಿ ಎಷ್ಟು ಜನರು ಕುಳಿತುಕೊಳ್ಳಬಹುದು. ಹಳೆಯ ಲಟ್ಟಾರಿ ಸ್ಕೂಟರಿನಲ್ಲಿ ಅಪ್ಪ, ಅಪ್ಪ, ಮಕ್ಕಳು ಅಂತ ನಾಲ್ಕೈದು ಜನರು ಕುಳಿತುಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಸ್ಕೂಟರಿದೆ. ಈ ಸ್ಕೂಟರಿನಲ್ಲಿ 25 ಜನರು ಕುಳಿತುಕೊಳ್ಳಬಹುದಂತೆ.

ಇದು ಒಂದು ಉದ್ದದ ಸ್ಕೂಟರಿನ ಕತೆ. ಇಂಗ್ಲೆಂಡಿನ ಕೊಲಿನ್ ಫೂರ್ಜ್ ಎಂಬಾತ ನಿರ್ಮಿಸಿದ ಈ ಸ್ಕೂಟರು 72 ಫೀಟ್ ಉದ್ದವಿದೆ. ಇದರಲ್ಲಿ 25 ಜನರು ಕುಳಿತುಕೊಳ್ಳಬಹುದಾಗಿದೆ. ಇದನ್ನು ವಿಶ್ವದ ಉದ್ದವಾದ ಸ್ಕೂಟರೆಂದು ಹೇಳಲಾಗುತ್ತಿದೆ.

ಕೊಲಿನ್ ಪ್ಲಂಬರ್ ಉದ್ಯೋಗಿ. ಗಿನ್ನಿಸ್ ಬುಕ್ ನಲ್ಲಿ ಹೆಸರು ದಾಖಲಿಸುವ ಉದ್ದೇಶದಿಂದ ಉದ್ದದ ಸ್ಕೂಟರ್ ನಿರ್ಮಿಸಿದ್ದಾನೆ. ಆದರೆ ಇದು 125 ಸಿಸಿ ಸ್ಕೂಟರ್. ಅದಕ್ಕೆ ಉದ್ದವಾದ ಅಲ್ಯುಮಿನಿಯಂ ಪ್ರೇಂನ್ನು ಜೋಡಿಸಿದ್ದಾನೆ. ಇಷ್ಟು ಸಿಸಿಯ ಸ್ಕೂಟರ್ ಅಷ್ಟು ಜನರನ್ನು ಎಳೆದುಕೊಂಡು ಹೋಗುತ್ತೋ.. ಅನ್ನೋದನ್ನು ಯಾರೂ ಖಚಿತಪಡಿಸಿಲ್ಲ.

ಇಷ್ಟೊಂದು ಜನರು ಪ್ರಯಾಣಿಸಲು ಸಾಧ್ಯವಿಲ್ಲ ಎಂಬುದನ್ನು ಕೊಲಿನ್ ಒಪ್ಪುವುದಿಲ್ಲ. ಎರಡು ಬಾರಿ 25 ಜನರನ್ನು ಕುಳ್ಳಿರಿಸಿಕೊಂಡು ಇಂಗ್ಲೆಂಡ್ ರಸ್ತೆಯಲ್ಲಿ ಪ್ರದರ್ಶನ ನೀಡಿರುವುದಾಗಿ ಆತ ಹೇಳುತ್ತಾನೆ. ಈ ಕುರಿತು ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದಾನೆ.

ಕೊಲಿನ್ ಗಿನ್ನಿಸ್ ಬುಕ್ ದಾಖಲೆ ಮಾಡಲು 100 ಮೀಟರ್ ಪ್ರಯಾಣಿಸಿ ತೋರಿಸಬೇಕಿತ್ತು. ಆದರೆ ಈ ಕಿಲಾಡಿ ಒಂದು ಮೈಲು ದೂರಕ್ಕಿಂತಲೂ ಹೆಚ್ಚು ರೈಡ್ ಮಾಡಿ ತೋರಿಸಿದ್ದಾನೆ. ಅದು ಎಂಜಿನ್ ಮೂಲಕ ಸಾಗಿತ್ತೋ ಅಥವಾ ಹಿಂದೆ ಕುಳಿತವ ದೂಡುತ್ತಿದ್ದಾನೋ ಗೊತ್ತಿಲ್ಲ....

More from DriveSpark

Article Published On: Wednesday, August 10, 2011, 12:45 [IST]
English summary
How many people do you think can travel on a scooter. If your answer is two or three here is a man who says 25. Yes thats the number of people Colin Furze from the UK claims can travel on his scooter. Colin claims to have build the longest motorbike which is 72 feet long and can seat 25 people.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+