ಶೇಕಡ 40 ಪ್ರಗತಿ: ಯಮಹಾ ಮಾರಾಟ ಗುರಿ

India Yamaha Motor
ನವದೆಹಲಿ, ಸೆ 7: ಪ್ರಸಕ್ತ ವರ್ಷ ಸುಮಾರು 5.2 ಲಕ್ಷ ದ್ವಿಚಕ್ರ ವಾಹನ ಮಾರಾಟದ ಮೂಲಕ ಶೇಕಡ 40ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಯಮಹಾ ವ್ಯಕ್ತಪಡಿಸಿದೆ. ಕಂಪನಿಯು 150 ಸಿಸಿ ಬೈಕ್ ಮಾರುಕಟ್ಟೆಯನ್ನು ಹೆಚ್ಚು ಸದೃಢಗೊಳಿಸಲು ನಿರ್ಧರಿಸಿದೆ.

"ಪ್ರಸಕ್ತ ವರ್ಷದ ಜನವರಿ ಆಗಸ್ಟ್ ಅವಧಿಯಲ್ಲಿ ಕಂಪನಿಯು 150 ಸಿಸಿ ಸೆಗ್ಮೆಂಟಿನಲ್ಲಿ ಶೇಕಡ 15ರಷ್ಟು ಪ್ರಗತಿ ಕಂಡಿದೆ. ಈ ವರ್ಷದ ಅಂತ್ಯಕ್ಕೆ ಇದನ್ನು ಶೇಕಡ 20ಕ್ಕೆ ತಲುಪಿಸುವ ಗುರಿಯನ್ನು ಕಂಪನಿ ಹೊಂದಿದೆ" ಎಂದು ಇಂಡಿಯಾ ಯಮಹಾ ಮೋಟರ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಹಿರೊಯುಕಿ ಸುಜುಕಿ ಹೇಳಿದ್ದಾರೆ.

2010ರಲ್ಲಿ ಕಂಪನಿಯು 3.8 ಲಕ್ಷ ದ್ವಿಚಕ್ರ ವಾಹನ ಮಾರಾಟ ಮಾಡಿತ್ತು. ಪ್ರಸಕ್ತ ವರ್ಷ ಸುಮಾರು 5.2 ಲಕ್ಷ ಯೂನಿಟ್ ಮಾರಾಟ ಮಾಡುವ ಗುರಿಯನ್ನು ಹೊಂದಿದೆ. "ಕಂಪನಿಯು 2012ರ ವೇಳೆಗೆ 6.5 ಲಕ್ಷ ಯೂನಿಟ್ ಮತ್ತು 2013ರ ಅಂತ್ಯಕ್ಕೆ ಹತ್ತು ಲಕ್ಷ ಬೈಕ್ ಮಾರಾಟ ಮಾಡುವ ಗುರಿ ಹೊಂದಿದೆ" ಎಂದು ಅವರು ಹೇಳಿದ್ದಾರೆ.

ಕಂಪನಿಯು ಉತ್ತರ ಪ್ರದೇಶದ ಸರ್ಜಾಪುರ ಮತ್ತು ಹರ್ಯಾಣದಲ್ಲಿ ವಾರ್ಷಿಕ ವಾಹನ ಉತ್ಪಾದನಾ ಸಾಮರ್ಥ್ಯವನ್ನು 6 ಲಕ್ಷ ಯೂನಿಟ್ ಗೆ ಹೆಚ್ಚಿಸಿದೆ. 2013ರ ವೇಳೆಗೆ ಉತ್ಪಾದನಾ ಸಾಮರ್ಥ್ಯವನ್ನು 10 ಲಕ್ಷ ಯೂನಿಟ್ ಗೆ ಹೆಚ್ಚಿಸಲು ನಿರ್ಧರಿಸಿದೆ. ಕಂಪನಿಯು ಈಗಾಗಲೇ(ಜನವರಿ-ಆಗಸ್ಟ್ 2011) 2.1 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಇದರೊಂದಿಗೆ ಕಂಪನಿಯು ನಿನ್ನೆ ವೈಝಢ್ಎಫ್-ಆರ್15 ಬೈಕಿನ ಪರಿಷ್ಕೃತ ಆವೃತ್ತಿ ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋರೂಂ ದರ 1.07 ಲಕ್ಷ ರು. ನೂತನ ಆರ್15 ಕುರಿತ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿರಿ.

Article Published On: Wednesday, September 7, 2011, 12:50 [IST]
English summary
Yamaha expects sales to grow around 40 per cent to 5.2 lakh units in 2011. "We have grown by 42 per cent from the previous year, especially in the 150cc deluxe segment" India Yamaha Motor CEO Hiroyuki Suzuki Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+